ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪೦ ಶ್ರೀಮದ್ರಾಮಾಯಕನ [ಸರ್ಗ ೩೩. ಇವಳಾಗಿ ಹೊರಟುಬರುತಿದ್ದುದರಿಂದ, ಸಂಭೋಗಚಿಹ್ನಗಳೆಲ್ಲವೂ ಅವಳಲ್ಲಿ ಸ್ಪಷ್ಟವಾಗಿ ಕಾಣುತಿದ್ದುವು ಹೀಗೆ ತಾರಯು ಸಮೀಪದಲ್ಲಿ ಬಂದು ನಿಂತ ರೂ ಮಹಾತ್ಮನಾದ ಲಕ್ಷಣನು ಪರಸ್ತ್ರೀಯರನ್ನು ಕಣ್ಣೆತ್ತಿ ನೋಡಬಾರ ದೆಂಬ ದೃಢಮನಸ್ಸಿನಿಂದ, ಅವಳನ್ನು ಕಂಡೂ ಕಾಣದಂತೆ ಉದಾಸೀನನಾಗಿ ತಲೆಯನ್ನು ಬಗ್ಗಿಸಿಕೊಂಡು ನಿಂತಿದ್ದನು ಆ ಸ್ತ್ರೀಯು ಸಮೀಪಕ್ಕೆ ಬಂದೊ ಡನೆಯ ಅವನ ಮನಸ್ಸಿನಲ್ಲಿದ್ದ ರಾದ್ರಾವೇಶವೂ ಅಡಗಿಹೋಯಿತು ತಾರೆ ಯು ಹಾಗೆ ಸಂಭೋಗಚಿಹ್ನಗಳೊಡನೆ ಬಂದಿದ್ದರೂ, ಪಾನಮದದಿಂದಲಜ್ಜೆ ಯನ್ನು ಮರೆತು, ಲಕ್ಷಣನು ತನ್ನನ್ನು ಕಂಡೊಡನೆ ಪ್ರಸನ್ನ ನಾದುದನ್ನೂ ತಿಳಿದುಧೈಲ್ಯವನ್ನು ತಂದುಕೊಂಡಳು ಆಮೇಲೆ ಆಕೆಯು ಮೊದಮೊದಲು ಬಹಳಸಲಿಗೆಯಿಂದ ಸಾಮವಾಕ್ಯಗಳನ್ನೇ ಆಡುತ್ತಿದ್ದು ಕೂನೆಗೆ ಸಾರವತ್ತಾ ದವಾಕ್ಯಗಳಿಂದ ಎಲೈ ರಾಜಕುಮಾರನೆ'ಸಿನ್ನ ಈ ಕೂಪಕ್ಕೆ ಕಾರಣವೇನು? ನಿನ್ನ ಮಾತನ್ನು ಮೀರಿ ನಡೆದವನಾವನು? ಒಣಗಿದಮರಗಳಿಂದ ತುಂಬಿದಕಾ ಡಿನಲ್ಲಿ ಹತ್ತಿಕೊಂಡು ಉರಿಯುವ ಕಾಡುಗಿಚ್ಚಿಗೆ ಪ್ರವೇಶಿಸುವಂತೆ, ವಿವೇಕವಿ ಲ್ಲದ ಯಾವಮೂಢನು ನಿರ್ಭಯವಾಗಿ ನಿನ್ನನ್ನು ಕಣಕುವನು?” ಎಂದಳು ಹೀಗೆ ತಾರೆಯು ತನ್ನ ಮುಂದೆ ನಿಂತು ಮೊದಮೊದಲು ಮೃದುವಾಕ್ಯಗಳ ನಾಡಿ,ಕೊನೆಗೆ ನಿಮ್ಮ ಪದವಾಗಿಯೂ, ಪ್ರೇಮಸೂಚಕವಾಗಿಯೂ ಹೇಳಿದ ಮಾತನ್ನು ಕೇಳಿ ಲಕ್ಷಣನು ಆಕೆಯನ್ನು ಕುರಿತು 'ಎಲೆ ತಾರೆ' ನೀನು ಪತಿ ಹಿತದಲ್ಲಿಯೇ ಆಸಕ್ತಿಯುಳ್ಳವಳಾಗಿ ಇತರವಿಷಯವೊಂದನ್ನೂ ಗಮನಿಸದಂ ತಿದೆ ನಿನ್ನ ಪ್ರಿಯವಾದ ಈ ಸುಗ್ರೀವನು ಕೇವಲ ಕಾಮವ್ಯಾಪಾರದಲ್ಲಿಯೇ ಮುಳುಗಿ, ಧಾರ್ಥಗಳಲ್ಲಿ ದೃಷ್ಟಿಯೇಇಲ್ಲದೆ ನಡೆದುಕೊಳ್ಳುವನೆಂಬುದನ್ನು ನೀನರಿಯೆಯಾ?ಅವನು ಈಗ ತನ್ನ ರಾಜ್ಯದ ವಿಚಾರವನ್ನೂ ಗಮನಿಸುವುದಿಲ್ಲ. ಅತ್ತಲಾಗಿ ದುಃಖಪರಾಯಣರಾಗಿರುವ ನಮ್ಮಲ್ಲಿಯೂ ಅವನಿಗೆ ಗಮನವಿಲ್ಲ. ತನ್ನ ಮಂತ್ರಿ ಪರಿವಾರಗಳೊಡನೆ ಸೇರಿ ಯಾವಾಗಲೂ ಮದ್ಯಪಾನ ಮಾಡುತ್ತ ಮೈಮರೆತಿರುವನು ಹೀಗೆ ಮದೋನ್ಮತ್ತನಾಗಿ ಕಾಮಕ್ರೀಡೆಗಳಲ್ಲಿರುವ ಆ ಸುಗ್ರೀವನು,ಮೊದಲು ನಮಗೆ ಪ್ರತಿಜ್ಞೆ ಮಾಡಿಕೊಟ್ಟು ಬಂದ ನಾಲ್ಕು ತಿಂಗ ಭಕಾಲವು ಕಳೆದುಹೋದುದನ್ನೂ ಕಾಣದಿರುವನು. ಧರವನ್ನಾಗಲಿ, ಅರ್ಥ