ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧. | ಕಿಂಧಾಕಾಂಡವು. ೧೬೨೬ ಹೇರಳವಾಗಿರುವುವು ಇದೊ? ಇಲ್ಲಿ * ಹಸುರು ಮತ್ತು ಹಳದಿಯ ಬಣ್ಣ ಗಳಿಂದ ಹೊಳೆಯುವ ಗರಿಕೆಯು, ತನ್ನ ಮೇಲೆ ಉದಿರಿಬಿದ್ದಿರುವ ಬಗೆಬಗೆಯ ಬಣ್ಣಗಳುಳ್ಳ ಹೂಗಳಿಂದ ಮತ್ತಷ್ಟು ರಮ್ಯವಾಗಿ, ಅಷ್ಟಗಲಕ್ಕೂ ರತ್ನ ಕಂಬಳವನ್ನು ಹಾಸಿದಂತೆ ಕಾಣುವುದು ನೋಡು ಮರದಲ್ಲಿ ಕೊನೆಗಳು ಹೆಚ್ಚಿದ್ದರೂ ಅವು ಹೂಗೊಂಚಲುಗಳಿಂದ ತುಂಬಿರುವುದನ್ನೂ ಒಂದೊಂ ದುಮರಕ್ಕೂ + ಹೂಬಳ್ಳಿಗಳು ಹಬ್ಬಿ ಬೆಳೆದಿರುವುದನ್ನೂ ನೋಡಿದೆಯಾ? ಎಲೆ ವತ್ರನೆ' ಇನ್ನೇನು? # ವಸಂತಕಾಲವು ಪ್ರಾಪ್ತವಾಗಿರುವುದು ಈಗ ಸುಖಸ್ಪರ್ಶವುಳ್ಳ ಗಾಳಿಯೂ ಬೀಸುತ್ತಿರುವುದು ಇವೆಲ್ಲವೂ ಮನ್ಮಥವಿಕಾ ರವನ್ನು ಹೆಚ್ಚಿಸುವುವು ನಾಲ್ಕು ಕಡೆಗಳಿಂದಲೂ ಘಮಘಮಿಸು ತಿರುವ ಪುಷ್ಪಗಂಧವು ಹೊರಟುಬರುವುದನ್ನು ನೋಡಿದೆಯಾ ? ಈಗ ಯಾವ ಗಿಡಬಳ್ಳಿಗಳನ್ನು ನೋಡದರೂ ಪುಷ್ಟ ಫಲಗಳಿಂದ ತುಂಬಿರುವುವು ಲಕ್ಷಣಾ'... ಮಳೆಯನ್ನು ಕರೆಯುವ'ಮೇಫುದಂತೆ ಸುತ್ತಲೂ ಪುಷ್ಪವರ್ಷ ವನ್ನು ಕರೆಯುವ ಈ ವನಗಳ ಅಂದವನ್ನು ನೋಡಿದೆಯಾ ? ಮನೋ ಹರವಾದ ಗಾಳಿಯಿಂದಾಡುತ್ತಿರುವ ಈ ಬಗೆಬಗೆಯ ಕಾಡುಮರಗಳು

  • ಇಲ್ಲಿ ಬಗೆಬಗೆಯ ಬಣ್ಣಗಳುಳ್ಳ ಹೂಗಳಿಂದ ತುಂಬಿದ ಶಾದ್ವಲಪ್ರದೇಶವ ನ್ನು ರತ್ನಕಂಬಳಕ್ಕೆ ಹೋಲಿಸಿರುವುದರಿಂದಚೇತನನಿಗೆ ಅನೇಕ ಗುರುಗಳಮುಖವಾಗಿ ಜ್ಞಾನವು ಲಭಿಸುವುದರಿಂದ, ಆತನ ಮನಸ್ಸು ಭಗವಂತನ ನಿತ್ಯನಿವಾಸಕ್ಕೆ ಯೋಗ್ಯ ವಾಗುವುದೆಂಬ ಭಾವವು ಸೂಚಿತವಾಗುವುದು

- ಇಲ್ಲಿ ಮರಬಳ್ಳಿಗಳು ಬಹುಶಾಖೆಗಳಿಂದ ತುಂಬಿದ್ದರೂ, ಪಪ್ಪಗಳೇ ಹೆ ಟ್ಯಾಗಿ ಕಾಣುತ್ತಿರುವುವೆಂಬುದರಿಂದ, ಕುಟುಂಬಿಗಳಾಗಿದ್ದರೂ ನಿರವಧಿಕಜ್ಞಾನವ ನ್ನು ಹೊಂದಿದವರು ಭಗವದನುಗ್ರಹಪಾತ್ರರೆಂದು ಸೂಚಿತವು.

  1. ವಸಂತಋತುವ ಮನ್ನ ಧೋದ್ದೀಪಕವಾದ ಸುಗಂಧವಾಯುವಿನಿಂದತುಂಬಿ, ಶಷ್ಟಫಲಸಮೃದ್ಧವಾಗಿರುವುದೆಂಬುದರಿಂದ,ಜನಕಾದಿಗಳಂತೆ ಐಶ್ವರ್ಯಸಮೃದ್ಧಿಯು ಇವರಾಗಿದ್ದಾಗಲೂ, ಭಗವಾನರತರಾದವರೇ ಕೃಪಾಪಾತ್ರರೆಂದು ಸೂಚಿತವು.

... ಹೂಗಳನ್ನು ಚೆಲ್ಲುವ ಗಿಡಗಳೆಂಬುದರಿಂದ ಜ್ಞಾನೋಪದೇಶವನ್ನು ಮಾಡ ತಕ್ಕ ಆಕಾರ್ಯರೆಂದರ್ಥನ. ಇಲ್ಲಿ ಶಿಲೆಗಳಮೇಲೆಯೂ ವೃಕ್ಷಗಳು ಹೂಗಳನ್ನು ಚೆಲ್ಲುತ್ತಿರುವುವೆಂಬುದ