ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೩೩.] | ಕೆಮ್ಮಿಂಧಾಕಾಂಡವು. ೧೫೪೧ ವನ್ನಾಗಲಿ ಸಾಧಿಸಬೇಕೆಂಬ ಉದ್ದೇಶವುಳ್ಳವರಿಗೆ ಈಪಾನವು ಎಂದಿಗೂ ಯೋಗ್ಯವಲ್ಲ ಪಾನದಿಂದ ಧಾರ್ಥಕಾಮಗಳೆಲ್ಲವೂ ಕೆಡುವುವು ಉಪಕಾರ ಮಾಡಿದವನಿಗೆ ಪ್ರತ್ಯುಪಕಾರವನ್ನು ಮಾಡದಿದ್ದರೆ ಅದರಿಂದ ಧರಕ್ಕೆ ವಿ ಶೇಷವಾದ ಹಾನಿಯುಂಟು ಇದರಮೇಲೆ ಹಾಗೆ ಪ್ರತ್ಯುಪಕಾರವನ್ನು ಮಾ ಡದುದರಿಂದ ಗುಣವಂತನಾದ ಮಿತ್ರನನ್ನು ಕಳೆದುಕೊಂದರೆ, ಅರ್ಥಕ್ಕೂ ಲೋಪವುಂಟಾಗುವುದೇ ನಿಶ್ಚಯವು ಸತ್ಯದಲ್ಲಿಯೂ ಅರ್ಧದಲ್ಲಿಯೂ ನಿರ ತನಾದ ಮಿತ್ರನೇ ಆ ಥರ ಕಾಮಗಳಿಗೆ ಮೂಲವಾದುದರಿಂದ ಇವೆರಡ ಕ್ಕಿಂತಲೂ ಅವನೇ ಮೇಲೆನಿಸುವನು ಈಗ ಸುಗ್ರೀವನು ಮಿತ್ರನನ್ನು ಕಳೆದು ಕೊಳ್ಳುವುದರಿಂದ, ಅರ್ಥಕಾಮಗಳೆರಡನ್ನೂ ಬಿಟ್ಟಂತಾಗುವಲ್ಲದೆ ಧರ ವನ್ನೂ ತಪ್ಪಿ ಹೋಗುತ್ತಿರುವನು ನೀನು ಕಾಠ್ಯಸ್ವರೂಪನ್ನು ಚೆನ್ನಾಗಿ ಬಲ್ಲ ವಳಾದುದರಿಂದ ನೀನೇ ನಿನ್ನ ಬುದ್ಧಿಯಿಂದ ಪರಾಲೋಚಿಸಿ ಹೇಳು ಪ್ರ ಕೃತದಲ್ಲಿ ಮಿತ್ರರಾದ ನಮ್ಮನ್ನೇ ಸುಗ್ರಿವನು ಪರಿತ್ಯಜಿಸಿದಮೇಲೆ, ನಾವು ಮುಂದೆ ನಡೆಸಬೇಕಾದ ಕಾರವೇನೆಂಬುದನ್ನು ನೀನೇ ಹೇಳು "ಎಂದನು ಹೀ ಗೆ ಥಾರ್ಥಗಳನ್ನು ನಿರ್ಣಯಿಸತಕ್ಕುದಾಗಿಯೂ, ಮೃದುವಾಗಿಯೂ ಇ ರುವ ಲಕ್ಷ್ಮಣನ ಮಾತನ್ನು ಕೇಳಿ, ತಾರೆಯು ರಾಮನ ಕಾರಾರ್ಥವಾಗಿ ಬಂ ದಿರುವ ಆಲಕ್ಷಣನ ಮನೋಭಾವವನ್ನು ತಿಳಿದುಕೊಂಡು, ಅವನಿಗೆ ನಂಬಿಕೆ ಯು ಹುಟ್ಟುವ ಮಾತುಗಳಿಂದ ಅವನನ್ನು ಕುರಿತು 'ಎಲೈ ರಾಜಕುಮಾರನೆ' ನೀನು ಹೇಳಿದುದು ವಾಸ್ತವವು ಸುಗ್ರೀವನು ಕಾಮಕ್ರೀಡೆಗಳಲ್ಲಿಯೇ ಮು ಆಗಿಹೋಗಿರುವುದೂ ನಿಜವು ಹಾಗಿದ್ದರೂ ನೀವು ಅವನಮೇಲೆ ಕೋಪಗೊ “ುವುದಕ್ಕೆ ಇದು ಕಾಲವಲ್ಲ ಇದರಮೇಲೆ ನಿಮಗೆ ಸ್ವಜನದಂತಿರುವ ಆತನ ಕೋಪಿಸಲೇ ಬಾರದು ಆ ಸುಗ್ರೀವನು ಈಗ ಏನೋ ಪ್ರಮಾದವಶದಿಂ ದ ಹೀಗಿದ್ದರೂ, ನಿಮ್ಮ ಕಾವ್ಯವನ್ನು ಸಾಧಿಸುವವಿಷಯದಲ್ಲಿ ಅವನಿಗೆ ಮನಃ ಪೂರೈಕವಾದ ಆಸಕ್ತಿಯುಂಟು ಅವನು ಹೀಗೆ ಎಚ್ಚರಿಕೆಯಿಲ್ಲದಿರುವುದನ್ನು ಈಗ ನೀವು ಮನ್ನಿಸಿಬಿಡಬೇಕಾದುದೇ ಉಚಿತವು ಎಲೆ ರಾಜಕುಮಾರನೆ' ವೀ ಕ್ಯಾದಿಗುಣಗಳಿಂದ ಮೇಲೆನಿಸಿಕೊಂಡ ಮಹಾತ್ಮರು,ತಮಗಿಂತಲೂ ಕೀಳಾಗಿ ಯೂ,ಅಲ್ಪ ಬಲವುಳ್ಳವರಾಗಿಯೂ ಇರುವವರಲ್ಲಿ ಎಂದಿಗೂ ಕೋಪಿಸಲಾರ