ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪೨ ಶ್ರೀಮದ್ರಾಮಾಯಣವು [ಸರ್ಗ ೩೩. ರು ಕಾರಪರನಾಗಿಯೂ, ತಾಳ್ಮೆಯೆಂಬ ತಪಸ್ಸಿಗೆ ಜನ್ಮಸ್ಥಾನನಾಗಿಯೂ ಇರುವ ನಿನ್ನಂತಹ ಮಹಾಪುರುಷನು ಯಾವನುತಾನೇ ಹೀಗೆ ಕೋಪವಶನಾ ಗುವನು'ಸುಗ್ರೀವನಿಗೆ ಪರಮಮಿತ್ರನಾದ ಆ ರಾಮನ ಕೋಪದ ಸ್ವರೂಪ ವನ್ನು ನಾನು ಚೆನ್ನಾಗಿ ಬಲ್ಲೆನು ಅವನ ಕಾರಕ್ಕಾಗಿ ನಿರ್ಣಯಿಸಿರುವ ಕಾಲ ವೇನೆಂಬುದನ್ನೂ ನಾನುಬಲ್ಲೆನು ಸುಗ್ರೀವನು ಕಾಲವಿಳಂಬಮಾಡುತ್ತಿರುವ ನೆಂಬುದೂ ನನಗೆ ಚೆನ್ನಾಗಿ ತಿಳಿದಿರುವುದು ನೀವು ನಮಗೆ ಮಾಡಿದ ಮಹೋ ಪಕಾರವನ್ನೂ ಬಲ್ಲೆನು ಅದಕ್ಕಾಗಿ ನಾವು ಈಗ ನಡೆಸಬೇಕಾದ ಕಾರವೇನೆಂ ಬುದೂ ನನಗೆ ತಿಳಿದಿರುವುದು'ಲಕ್ಷಣಾ' ಆದರೇನು? ದೇಹದಲ್ಲಿ ಹುಟ್ಟಿದ ಕಾಮದ ಪ್ರಾಬಲ್ಯವು ತಡೆಯಲಸಾಧ್ಯವೆಂಬುದನ್ನೂ ನಾನು ತಿಳಿದಿರುವೆ ನಲ್ಲವೆ ? ಈ ಕಾಮದಿಂದ ಸುಗ್ರೀವನು ಯಾರಲ್ಲಿ ಎಡೆಬಿಡದೆ ಆಸಕ ನಾಗಿರುವನೋ ಆ ಸಿವ್ಯಕ್ತಿಯನ್ನೂ ನಾನು ಚೆನ್ನಾಗಿ ಬಲ್ಲೆನು ಆದರ ನೀನು ಹೀಗೆ ಕೋಪರ್ವನಾಗಿರುವುದನ್ನು ನೋಡಿದರೆ, ನಮ್ಮಂತೆ ನಿನಗೆ ರತಿ ಕ್ರೀಡೆಗಳೇ ಮೊದಲಾದ ಕಾಮತಂತ್ರಗಳಲ್ಲಿ ಅಷ್ಟಾಗಿ ಪರಿಶ್ರಮವಿಲ್ಲವೆಂದೇ ಎಣಿಸಬೇಕಾಗಿದೆ, ಅವುಗಳಲ್ಲಿ ಅಷ್ಟಾಗಿನಿನಗೆ ಜ್ಞಾನವಿಲ್ಲದುದರಿಂದಲೇ ನೀನು ಹೀಗೆ ಕೋಪಗೊಂಡಿರುವೆ ನೀನೂ ಆ ಕಾಮತಂತ್ರಗಳಲ್ಲಿ ರುಚಿಯನ್ನು ಬಲ್ಲ. ವನಾಗಿದ್ದ ಪಕ್ಷದಲ್ಲಿ, ನಿನಗೆ ಸುಗ್ರೀವನಲ್ಲಿ ಇಷ್ಟು ಕೋಪವುಂಟಾಗಿರಲಾರ ಡು ಕಾಮಲೋಲನಾದ ಮನುಷ್ಯನು ದೇಶಕಾಲಗಳನ್ನಾಗಲಿ ಧಾ ರ್ಥಗಳನ್ನಾಗಲಿ ಅಪೇಕ್ಷಿಸುವವನಲ್ಲ ಎಲೆ ಶತ್ರುಸೂದನನೆ' ಈಗಲಾದರೂ ನೀನು ಚೆನ್ನಾಗಿ ಪಾಲೊ 'ಚಿಸಿ, ನಿನಗೆ ಸಹೋದರನಂತಿರುವ ಆಸುಗ್ರೀವ ನನ್ನು ಮನ್ನಿಸಿಬಿಡಬೇಕು ಆತನು ಕಾಮಲೋಲನಾಗಿ ನನ್ನೊಡನೆ ಸೇರಿ ತನ್ನ ಕಾಮೋದ್ರೇಕದಿಂದ ನಾಚಿಕೆಯನ್ನು ಬಿಟ್ಟಿರುವುದೂ ನಿಜವು ಆ ದರೆ ಧರವೇ ತಪಸ್ಸೆಂದೆಣಿಸಿರುವ ಮಹರ್ಷಿಗಳೂಕೂಡ ಕಾಮವಶರಾಗಿ, ಸ್ತ್ರೀಯರಲ್ಲಿ ಎಡೆಬಿಡದ ವ್ಯಾಮೋಹವನ್ನು ಹೊಂದಿರುವಾಗ ಸ್ವಭಾವ ದಿಂದಲೇ ಚಪಲವಾದ ಕಪಿಯೆನಿಸಿಕೊಂಡ ಆ ಸುಗ್ರೀವನಿಗೆ ಕಾಮಚಾಪ ಲ್ಯವಿಲ್ಲದಿರುವುದೇ?” ಎಂದಳು ಹೀಗೆ ತಾರೆಯು ಲಕ್ಷಣನೊಡನೆ ಕಾಲೋ ಜಿತವಾದ ಮಾತನ್ನಾಡಿ,ತಿರುಗಿ ಆತನನ್ನು ನೋಡಿ ಬಹಳಸಲಿಗೆಯಿಂದ ತನ್ನ ಪತಿಯಾದ ಸುಗ್ರೀವನಿಗೆ ಕ್ಷೇಮಕರವಾದ ಮತ್ತೊಂದುಮಾತನ್ನು ಹೇಳು