ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೩೩] ಕಿಷಿಂಧಾಕಾಂಡವು. ೧೫ಳಿ ವಳು (ಎಲೆ ರಾಜಕುಮಾರನೆ' ಸುಗ್ರೀವನು ಈಗ ಕಾಮವಶನಾಗಿದ್ದರೂ ಸುಮ್ಮನಿರುವನೆಂದೆಣಿಸಬೇಡ'ಬಹುಕಾಲಕ್ಕೆ ಹಿಂದೆಯೇ ನಿಮ್ಮ ಕಾರಸಾಧ ನೆಗಾಗಿ ಪ್ರಯತ್ನಿ ಸಬೇಕೆಂದು ಅನೇಕವಾನರರಿಗೆ ಆಜ್ಞೆ ಮಾಡಿರುವನು ಬ ಲಾಡ್ಯರಾಗಿಯೂ, ಕಾಮರೂಪಿಗಳಾಗಿಯೂ ಇರುವ ಅನೇಕ ವಾನರವೀರರು ಸುಗ್ರೀವನ ಆಜ್ಞೆಯಂತೆ ಬೆಟ್ಟಗುಡ್ಡಗಳೇ ಮೊದಲಾದ ತಮ್ಮ ವಾಸಸ್ಥಾ ನಗಳನ್ನು ಬಿಟ್ಟು ಕೋಟಿಕೋಟಸಂಖ್ಯೆಯಿಂದ ಬಂದು ಸೇರುತ್ತಿರು ವರು ಎಲೈ ಪುರುಷಶ್ರೇಷ್ಠನೆ' ನೀನು ಕೋಪವನ್ನು ಬಿಟ್ಟು ಪ್ರಸನ್ನ ನಾಗಿ ನಮ್ಮ ಅಂತಃಪುರಕ್ಕೆ ದಯಮಾಡು ಇದುವರೆಗೆ ನೀನು ಅಂತಃಪುರಸೀಯ ರಿರುವ ಸ್ಥಳಕ್ಕೆ ಬರಬಾರದೆಂದು ಹೊರಗೆ ನಿಂತಿದ್ದೆಯಲ್ಲವೆ? ಇಷ್ಮಸಾಕು ಇಷ್ಟರಿಂದಲೇ ನಿನ್ನ ನಡತೆಯನ್ನು ರಕ್ಷಿಸಿಕೊಂಡಂತಾಯಿತು ಇನ್ನು ಮೇಲಆ ಭಾವವನ್ನು ಬಿಟ್ಟುಬಿಡು ಸ್ನೇಹವಿಷಯದಲ್ಲಿರುವಾಗ ಮಿತ್ರರ ಭಾರೆಯರ ನ್ನು ನೋಡುವುದರಲ್ಲಿ ದೋಷವಿಲ್ಲ”ಎಂದಳು ಹೀಗೆ ತಾರೆಯು ಅಂತಃಪುರ ಪ್ರವೇಶಕ್ಕೆ ಸಮ್ಮತಿಸಿದುದರಿಂದಲೂ, ರಾಮಕಾರದಲ್ಲಿ ತನಗಿರುವ ಆತುರ ರಿಂದಲೂ ಆ ಲಕ್ಷಣನು ಹಿಂಜರಿಯದೆ ಧಾರಾಳವಾಗಿ ಅಂತಃಪುರವನ್ನು ಪ್ರ ವೇಶಿಸಿದನು ಅಲ್ಲಿ ಉತ್ತಮವಾದ ಮೇಲುಹೊದ್ದಿಕೆಯಿಂದ ಕೂಡಿದ ಒಂ ದು ಸುವರ್ಣಪೀರದಲ್ಲಿ ಸೂಯ್ಯನಂತೆ ಪ್ರಕಾಶಿಸುತ್ತಾ ಕುಳಿತಿದ್ದ ಸುಗ್ರೀವ ನನ್ನು ಕಂಡನು ಅನೇಕ ದಿವ್ಯಾಭರಣಗಳಿಂದ ಚಿತ್ರಿತವಾದ ದೇಹವುಳ್ಳವನಾ ಗಿಯೂ, ದಿವ್ಯರೂಪವುಳ್ಳವನಾಗಿಯೂ, ದಿವ್ಯಮಾಲಿಕೆಗಳನ್ನೂ, ದಿವ್ಯವ ಸಗಳನ್ನೂ ಧರಿಸಿ ಇಂದ್ರನಂತೆ ದುರ್ಜಯನಾಗಿಯೂ, ಮಹಾಯಶಸ್ವಿಯಾ ಗಿಯೂಇದ್ದ ಆ ಸುಗ್ರೀವನಸುತ್ತಲೂ ದಿವ್ಯಪುಷ್ಪಾಭರಣಗಳಿಂದಲಂಕೃತ ರಾದ ಅನೇಕವಾನರಸಿಯರೂ ನೆರೆದಿದ್ದರು ಈ ವೃಭವಗಳನ್ನು ನೋಡಿದಾ ಗ ಲಕ್ಷಣನಿಗೆ ತಡೆಯಲಾರದ ಕೋಪವುಂಟಾಯಿತು ಅವನ ಕಣ್ಣು ಗಳು ಕೆಂಪೇರಿದುವು ಕಾಲಯಮನಂತೆಯೇ ತೋರುತ್ತಿದ್ದನು ಇಷ್ಟರಲ್ಲಿ ಅತ್ತಲಾಗಿ ರಾಜಾಸನದಲ್ಲಿ ಕುಳಿತು ತನ್ನ ಪ್ರಿಯಪತ್ನಿಯಾದ ರುಮೆಯನ್ನು ಆಗಾಗ ಆಪ್ಪಿ ಮುದ್ದಿಡುತ್ತ ಸಂತೋಷದಿಂದಿದ್ದ ಸುಗ್ರೀವನು, ಮಹಾವೀರ ನಾದ ಲಕ್ಷಣನು ಕೋಪದಿಂದ ಬಂದು ತನ್ನ ಮುಂದೆ ನಿಂತಿರುವುದನ್ನು ಕಂಡನು. ಇಲ್ಲಿಗೆ ಮೂವತ್ತುಮೂರನೆಯ ಸರ್ಗವು