ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪೩ ಶ್ರೀಮದ್ರಾಮಾಯಣವು [ಸರ್ಗ ೩೫. ದಿಂದಲೇ ನಡೆಸಬಲ್ಲನು ಆ ರಾಮನು ನಿನಗೆ ಮಾಡಿದ ಉಪಕಾರವನ್ನೂ ಎ ಣಿಸದೆ ಮರೆತುಹೋದಪಕ್ಷದಲ್ಲಿ, ಇದೊ' ಈಗಲೇ ಈ ನನ್ನ ಕೂರಬಾಣ ಗಳಿಂದ ಹತನಾಗಿ ನೀನೂ ವಾಲಿಯಬಳಿಗೆ ಹೋಗಬೇಕಾಗುವುದೆಂದು ತಿಳಿ! ಎಲೆ ಸುಗ್ರೀವಾ' ವಾಲಿಯು ಹೋದ ದಾರಿಯು ಇನ್ನೂ ಅಳಿಸಿಹೋಗಿಲ್ಲ. ನೀನು ಮಾಡಿದ ಪ್ರತಿಜ್ಞೆಗೆ ತಪ್ಪಿ ಆ ವಾಲಿ ಯನ್ನು ಹಿಂಬಾಲಿಸಬೇಡ' ಎಲೆ ವಾನರನೆ' ಇಕ್ಷಾಕುಕುಲತಿಲಕನಾದ ಆ ರಾಮನ ಬಿಲ್ಲಿನಿಂದ ಹೊರಟುಬರು ವ ವಜ್ರಸಮಾನಗಳಾದ ಬಾಣಗಳನ್ನು ನೀನು ಇನ್ನೂ ಚೆನ್ನಾಗಿ ಕಂಡಿಲ್ಲ ವಂದು ತೋರುವುದು ಅದರಿಂದಲೆ: ಹಿಂಗೆ ವಿಷಯಲೋಲನಾಗಿ ಮೈಮ ರೆತು, ಆ ರಾಮನ ಕಾವ್ಯವನ್ನು ಮನಸ್ಸಿನಿಂದಲೂ ಆಲೋಚಿಸದಿರುವೆ” ಎಂದನು ಇಲ್ಲಿಗೆ ಮೂವತ್ತು ನಾಲ್ಕನೆಯಸರ್ಗವು | ++ ತಾರೆಯು ಶನಲಕ್ಷಕನನ್ನು ಸಮಾಧಾನಪಡಿಸಿದುದು .++ ಲಕ್ಷಣನು ತೇಜಸ್ಸಿನಿಂದ ಜ್ವಲಿಸುವಂತೆ ಕಾಣುತ್ತ, ಆತಿಪರುಷ ವಾಗಿ ಹೇಳುತ್ತಿದ್ದ ಮಾತುಗಳನ್ನು ಕೇಳಿ ಆಗ ಸುಗ್ರೀವನ ಸಮೀಪದಲ್ಲಿದ್ದ ತಾರೆಯು ಆತನನ್ನು ಕುರಿತು 1ಲಕ್ಷಣಾ' ನೀನೇ ಈ ಮಾತುಗಳನ್ನಾಡಾ ರದು ಸುಗ್ರೀವನು ಬಹಳಷ್ಟು ದುಸ್ವಭಾವವುಳ್ಳವನಾದುದರಿಂದ, ಇಷ್ಟು ಪ ರುಷವಾಕ್ಯಗಳಿಗೆ ಅರ್ಹನಲ್ಲ ಅದರಲ್ಲಿಯ ಕೇವಲಪ್ರಿಯಮಿತ್ರನಾದ ನಿನ್ನ ಬಾಯಿಂದ ಈ ಮಾತುಗಳನ್ನು ಕೇಳಲಾರನು ಸಮಸ್ಯವಾನರರಿಗೂ ರಾಜನೆ ನಿಸಿಕೊಂಡ ಈತನನ್ನು ನೀನು ಹಿಗೆ ನಿರಾಕರಿಸಬಾರದು ನೀನುಮೊದಲು ಇವನಲ್ಲಿ ಕೃತಘ್ನು ತೆಯೇ ಮೊದಲಾದ ಎಷ್ಟೊ೦ದೋಷಗಳನ್ನು ಹೇಳಿದೆಯಲ್ಲ. ವೆ? ಲಕ್ಷಣಾ' ಎಂದಿಗೂ ಹಾಗೆಣಿಸಬೇಡ' ಇವರು ಕೃತಘ್ನು ನಲ್ಲಿ ವಂಚಕ ನೂ ಅಲ್ಲ ಕೋರನೂ ಅಲ್ಲ ಸುಳ್ಳಾಡುವವನೂ ಅಲ್ಲ ಇವನಲ್ಲಿ ಕುಟೆಲಬುದ್ಧಿ ಯೂ ಇಲ್ಲ ಎಲೈ ಮಿತ್ರವೆಈ ಸುಗ್ರೀವನು ರಾಮನನ್ನು ಮರೆತಿರುವೆನೆಂದೂ ತಿಳಿಯಬೇಡ ವಾಲಿಯುದ್ಧದಲ್ಲಿ ರಾಮನು ಬೇರೆಯಾರಿಗೂ ಅಸಾಧ್ಯವಾದ ಮಹೋಪಕಾರವನ್ನು ಮಾಡಿರುವನೆಂಬುದು ಎಷ್ಟು ಮಾತ್ರವೂ ಇವನ ಮನ ಸೈನ್ನು ಬಿಟ್ಟು ಹೋಗತಕ್ಕುದಲ್ಲ ಆ ರಾಮನ ಅನುಗ್ರಹದಿಂದ ಇವನಿಗುಂಟಾ