ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೫೦ ಶ್ರೀಮದ್ರಾಮಾಯಣವು [ಸರ್ಗ ೩೩. ಸಂತೋಷಪಡಿಸುತ್ತ (ಎಲೆ, ಸೌಮಿತ್ರಿ' ನಾನು ಬಹುಕಾಲದಿಂದ ಕಳೆದು ಕೊಂಡಿದ್ದ ಭಾಗ್ಯವೂ, ಕೀರ್ತಿಯೂ, ಶಾಶ್ವತವಾದ ಕಪಿರಾಜ್ಯವೂ ಶ್ರೀ ರಾಮನ ಅನುಗ್ರಹದಿಂದಲೇ ಪನಃ ನನ್ನ ಕೈಗೆ ಸೇರಿತು ಲೋಕವಿಖ್ಯಾತ ನಾಗಿ ಮಹಾಪುರುಷನೆನಿಸಿಕೊಂಡ ಆ ರಾಮನು,ನನಗಾಗಿ ತೋರಿಸಿದ ಎಣೆ ಯಿಲ್ಲದ ಪರಾಕ್ರಮಕ್ಕೆ ತಕ್ಕ ಪ್ರತ್ಯುಪಕಾರವನ್ನು ಮಾಡಲು ಯಾರಿಗೆ ತಾ ನೇ ಸಾಧ್ಯವು? ಸಪ್ತ ಸಾಲಗಳನ್ನೂ, ಪ್ರತವನ್ನೂ, ಭೂಮಿಯನ್ನೂ ಒಂದೇ ಬಾಣದಿಂದ ಭೇದಿಸಿದ ಆ ಮಹಾವೀರನಿಗೆ ಬೇರೊಬ್ಬರ ಸಹಾಯ ವೇಕೆ? ಲಕ್ಷಣಾ! ಆ ರಾಮನು ತನ್ನ ಬಿಲ್ಲಿನ ನಾಣನ್ನು ಮಿಡಿದು, ಒಂದಾವ ರ್ತಿ ಟಂಕಾರಮಾಡಿದ ಮಾತ್ರಕ್ಕೆ ಆ ಮಹಾಧ್ವನಿಯಿಂದ ಈ ಭೂಮಿಯೂ ಪರೈತಗಳೂ ನಡುಗಿ ಹೋದುವಲ್ಲವೆ? ಅಂತಹ ವೀರಾಗ್ರಣಿಗೆ ಇತರರ ಸಹಾ ಯದಿಂದ ಆಗಬೇಕಾದುದೇನು?ಅವನು ಈಗಲೂ ತನ್ನ ಶಕ್ತಿಯಿಂದಲೇ ಸೀ ತೆಯನ್ನು ಪಡೆಯುವನು ತನ್ನ ವೀರದಿಂದಲೇ ರಾವಣನನ್ನೂ ಕೊಲ್ಲುವನು ಹೆಸರಿಗೆನುಾತ್ರ ನಾನು ಸಹಾಯಕನಾಗಿರಬೇಕಹೊರತು ಬೇರೆಯಲ್ಲ ಎಲೈ ಪುರುಷೋತ್ತಮ'ವೈರಿಯಾದ ರಾವಣನ್ನು ಅವನ ಪರಿವಾರಗಳೊಡನೆ ಕೊ ಲುವುದಕ್ಕಾಗಿ ಹೊರಡುವಾಗ, ನಾನು ಅವನನ್ನು ಹಿಂಬಾಲಿಸಿ ಅವನ ಆಜ್ಞೆ ಯಂತೆ ನಡೆದುಕೊಳ್ಳುವೆನು ನಾನು ಕೇವಲಭ್ಯತ್ಯಮಾತ್ರನೇಹೊರತು ಬೇ ರೆಯಲ್ಲಿ ಒಂದುವೇಳೆ ನಾನು ಅವನಲ್ಲಿ ನಂಬಿಕೆಯಿಂದಲೋ, ಸ್ನೇಹದ ಸ ಲಿಗೆಯಿಂದಲೋ, ಯಾವುದಾದರೂ ಸ್ವಲ್ಪ ವಿಷಯದಲ್ಲಿ ತಪ್ಪಿ ನಡೆದಿದ್ದ ರೂ, ನೀವಿಬ್ಬರೂ ಆದನ್ನು ಮನ್ನಿಸಿಬಿಡಬೇಕು ಲೋಕದಲ್ಲಿ ತಪ್ಪು ಮಾಡದ ವನೊಬ್ಬನೂ ಇಲ್ಲ” ಎಂದನು ಮಹಾತ್ಮನಾದ ಸುಗ್ರೀವನು ಈ ಮಾತು ಗಳನ್ನಾಡಿದೊಡನೆ, ಲಕ್ಷ್ಮಣನಿಗೆ ಅವನಲ್ಲಿ ಪರಮಪ್ರೇಮವುಂಟಾಯಿತು ಆಗ ಕೋಪವನ್ನು ಬಿಟ್ಟು, ಪ್ರೀತಿಪೂಲ್ವಿಕವಾಗಿ ಆ ಸುಗ್ರೀವನನ್ನು ಕುರಿತು - ಎ ಲೈ ವಾನರೇಂದ್ರನೆ'ನೀನು ರಾಮನಿಗೆ ನಾಥನಾಗಿ, ಅದರಲ್ಲಿಯೂ ವಿಶೇಷವಾ ಗಿ ಆತನಲ್ಲಿ ವಿನಯಸಂಪನ್ನನಾಗಿರುವುದರಿಂದ, ನನ್ನಣ್ಣನಾದ ರಾಮನು ಸ ದ್ವವಿಧದಲ್ಲಿಯೂ ಈಗ ಸನಾಥನೆಂಬುದರಲ್ಲಿ ಸಂದೇಹವಿಲ್ಲ ಎಲೆ ಸುಗ್ರೀವ ನೆ! ನಿನ್ನ ಮಹಿಮೆಯನ್ನೂ , ನಿನ್ನ ನಡತೆಯನ್ನೂ ನೋಡಿದರೆ, ಸಕ್ಕೋತ್ತಮ