೧೫೫ ಸಗ ೩೭] ಕಿಂಧಾಕಾಂಡವು | ಅನೇಕಪರ್ವತಗಳಲ್ಲಿ ವಾಸಮಾಡುವವರೂ, ಕಾಡಿಗೆಯಂತೆಯೂ, ಕರೀಮೇ ಫುಗಳಂತಯೂ ಕಪ್ಪಾದ ಮೈಬಣ್ಣವುಳ್ಳವರಾಗಿ ಅಂಜನಪರತದಲ್ಲಿಯಾವ ಯಾವವಾನರರಿರುವರೂ ,ಅವರೂ,ನನ್ನಾಜ್ಞೆಯಿಂದ ಈಗಲೇಇಲ್ಲಿಗೆಬಂದು ಸೇರುವಂತೆ ಹೇಳಿಕಳುಹಿಸು ಮತ್ತು ಮರುಪ್ರತಿದ ಪಾರ್ಶ್ವದಲ್ಲಿ ಮಣಿ ಶಿಲೆಗಳಿಂದ ತುಂಬಿದ ಗುಹೆಗಳೊಳಗೆ, ಬಂಗಾರದಂತೆ ಹೊಂಬಣ್ಣವಾದ ಮೈಯುಳ್ಳ ಕಲವು ವಾನರರಿರುವರು ಧೂಮ್ರಗಿರಿಯಲ್ಲಿ ಕೆಲವರು ಸೇರಿಕೊಂ ಡಿರುವರು ಸಂಜೆಯ ಮೇಫುದಂತೆ ಕಂಪಾದ ಉದಯಪರತದಮೇಲೆ, ಭ ಯಂಕರವಾದ ಪದ್ಮ ತಾಳವಂಬ ವನದಲ್ಲಿ ಕೆಲವು ವಾನರೂತ್ತಮರಿರುವರು ಮಹಾರುಣವೆಂಬ ಬೆಟ್ಟದಲ್ಲಿ ಬಾಲಸೂನಂತೆ ಮೈಬಣ್ಣವುಳ್ಳವರಾಗಿ, ಮೈರೇಯವಂಬ ಮದ್ಯವನ್ನು ಕುಡಿದು ಕೊಬ್ಬಿ, ವೇಗಶಾಲಿಗಳೆನಿಸಿಕೊಂಡ ಕೆಲವುವಾನರರುಂಟು ಮತ್ತು ಪುಷ್ಪಗಂಧದಿಂದ ಮನೋಹರಗಳಾಗಿ ಮಹ ರ್ಷಿಗಳ ವಾಸಕ್ಕೆ ಯೋಗ್ಯಗಳಾದ ಅಲ್ಲಲ್ಲಿನ ಮಹಾವನಗಳಲ್ಲಿಯೂ ಕೆಲವರು ವಾಸಮಾಡುತ್ತಿರುವರು ಇಷ್ಟೆ ಅಲ್ಲದೆ ಈ ಭೂಮಿಯ ಬೇರೆಕಡೆಗಳಲ್ಲಿ ವಾ ಸಮಾಡುತ್ತಿರುವ ಸಮಸ್ತವಾನರರನ್ನೂ ಇಲ್ಲಿಗೆ ಶೀಘ್ರದಲ್ಲಿ ಕರಸು ಅವ ರನ್ನು ಕರೆಯುವುದಕ್ಕಾಗಿ ಕೆಲವು ವಾನರದೂತರಿಗೆ ಸಾಮದಾನಾದ್ಯುಪಾ ಯಗಳಿಂದ ಮನಸ್ಸಿಪ್ತಿಯನ್ನು ಂಟುಮಾಡಿ ಆಯಾಸ್ಥಳಗಳಿಗೆ ಕಳುಹಿಸು ನಾನು ಮೊದಲೇ ಮಹಾವೇಗವುಳ್ಳ ಕೆಲವುದೂತರನ್ನು ಕಳುಹಿಸಿರುವನಷ್ಟೆ? ಅವರನ್ನೂ ಶೀಘ್ರದಲ್ಲಿ ಬರುವಂತ ತ್ವರೆಪಡಿಸುವುದಕ್ಕಾಗಿ, ಈಗ ನೀನುಮ ತೆ ಕೆಲವು ವಾನರರನ್ನು ಕಳುಹಿಸು' ಕಾಮಸುಖದಲ್ಲಿ ಮುಳುಗಿ ಸೊ ಮಾರಿಗಳಾಗಿ ಶೀಘ್ರದಲ್ಲಿ ಕೆಲಸಮಾಡಲಾರದ ವಾನರರಿದ್ದರೂ ಅವರನ್ನೂ ಬಿಡದೆ ನನ್ನ ಬಳಿಗೆ ಕರೆದುಕೊಂಡುಬಾ ? ಈ ನನ್ನಾಜ್ಞೆಯಂತೆ ಇನ್ನು ಹತ್ತು ದಿನಗಳೊಳಗಾಗಿ ಯಾರು ಇಲ್ಲಿಗೆ ಬಂದು ಸೇರುವುದಿಲ್ಲವೋ, ಆ ದು ರ್ಬುದ್ಧಿಗಳನ್ನು , ರಾಜಾಜ್ಞೆಯನ್ನು ಮೀರಿ ನಡೆದ ಅಪರಾಧಕ್ಕಾಗಿ ಆಗಲೇ ಕೊಂದುಬಿಡಬೇಕು? ಇನ್ನು ಲಕ್ಷಕೋಟೆಸಂಖ್ಯೆಯುಳ್ಳ ಕಪಿದೂತರು ಈಗ ಲೇ ನನ್ನಾಜ್ಞೆಯಿಂದ ಇಲ್ಲಿಂದ ಹೊರಡಬೇಕು ಅವರೆಲ್ಲರೂ ಈ ರಾಜಾಜ್ಞೆ ಯನ್ನು ಸ್ಪಲ್ಪವೂ ಮೀರದೆ ನಡೆಯತಕ್ಕವರಾಗಿರಬೇಕು ಮೇಫುಗಳಂತೆ 98
ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೬೪
ಗೋಚರ