ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

c೫೫೪ ಶ್ರೀಮದ್ರಾಮಾಯಣವು [ಸರ್ಗ, ೩೭. ಯೂ, ಪಕ್ವತಗಳಂತೆಯೂ, ಮಹಾಕಾರವುಳ್ಳವರಾಗಿಯೂ, ಭಯಂಕರಪ್ಪ ರೂಪವುಳ್ಳವರಾಗಿಯೂ ಇರುವ ಆ ಕಪಿಶ್ರೇಷ್ಠರೆಲ್ಲರೂ ಸೇರಿ ಆಕಾಶವ ವೈ ಮರೆಸುವಂತೆ ಗುಂಪಾಗಿ ಇಲ್ಲಿಂದ ಹೊರಡಲಿ' ಭೂಮಿಯಲ್ಲಿರುವ ಸಮಸ್ತವಾನರರ ಸ್ಥಿತಿಗತಿಗಳನ್ನೂ ಚೆನ್ನಾಗಿ ತಿಳಿದ ಬುದ್ಧಿಶಾಲಿಗಳಾದೆವಾ ನರರೇ ಅಲ್ಲಲ್ಲಿಗೆ ಹೋಗಿ ತಿಳಿಸಬೇಕು ” ಎಂದನು ಸುಗ್ರೀವಾಜ್ಞೆಯನ್ನು ಕೇಳಿ ಹನುಮಂತನು ಪರಾಕ್ರಮಿಗಳಾದ ವಾನರರನ್ನು ಕರಸಿ ದಿಕ್ಕು ದಿಕ್ಕುಗ ಳಿಗೆ ಕಳುಹಿಸಿದನು ಹೀಗೆ ಹನುಮಂತನಿಂದ ಪ್ರೇರಿತರಾದ ವಾನರರೆಲ್ಲರೂ ರಾಜಾಜ್ಞೆಗೆ ಕಟ್ಟುಬಿದ್ದು ಆಕ್ಷಣವೇ ಅಲ್ಲಿಂದ ಹೊರಟು ಅತಿವೇಗ ದಿಂದ ಆಕಾಶಮಾರ್ಗದಲ್ಲಿಯೇ ಹಾರಿಬರುತಿದ್ದರು ರಾಮಕಾತ್ಯಾತುರದಿಂದ ಹೊರಟ ಆ ವಾನರವೀರು ಅಲ್ಲಲ್ಲಿ ಸಮುದ್ರಗಳಲ್ಲಿಯೂ, ದ್ವೀಪಗಳಲ್ಲಿ ಯ, ಪರತಗಳಲ್ಲಿಯೂ, ವನಗಳಲ್ಲಿಯೂ ವಾಸಮಾಡುತ್ತಿದ್ದ ವಾನರ ರೆಲ್ಲರಿಗೂ ಸುಗ್ರೀವಾಜ್ಞೆಯನ್ನು ತಿಳಿಸಿ ಕಿಷಿಂಧೆಗೆ ಹೊರಟು ಬರುವಂತೆ ಪ್ರೇರಿಸಿದರು ರಾಜರಾಜನಾದ ಸುಗ್ರೀವನು ಅಪರಾಧಿಗಳ ವಿಷಯದ ಕಾಲಮೃತ್ಯುವಂತೆ ಕ್ರೂರನಾದುದರಿಂದ, ಆ ಸುಗ್ರೀವಾಜ್ಞೆಯನ್ನು ಕೇಳಿದೊಡನೆ ಸಮಸ್ತವಾನರರೂ ಕಿಕ್ಕಿಂಧೆಗೆ ಹೊರಟುಬಿಟ್ಟರು ಕಾಡಿಗೆ ಯಂತೆ ಕಪ್ಪಾದ ಮೈಯ್ಯುಳ್ಳವರಾಗಿ, ಮಹಾವೇಗಶಾಲಿಗಳೆನಿಸಿಕೊಂಡು, ಅಂಜನಪರೈತದಲ್ಲಿದ್ದ ಮೂರುಕೋಟೆವಾನರರೂ ರಾಮನಿದಕಡೆಗೆ ಬಂದು ಸೇರಿದರು, ಅಸ್ತಪದ್ವತದಲ್ಲಿ ಚಿನ್ನದಂತೆ ಮೈಬಣ್ಣವುಳ್ಳವರಾಗಿ ವಾಸಮಾ ಡುತಿದ್ದ ಹತ್ತು ಕೋಟಿಮಂದಿ ವಾನರರೂ ಆಗಲೇ ಕಿಮ್ಮಿಂಥ ಬಂದು ಸೇ ರಿಬಿಟ್ಟರು ಸಿಕ್ಕದ ಕೇಸರಗಳಂತೆ 'ಮೈಬಣ್ಣವುಳ್ಳ ಸಹಸ್ರಕೋಟಿವಾನರ ರು ಕೈಲಾಸಶಿಖರಗಳಿಂದ ಹೊರಟುಬಂದರು ಹಿಮವತ್ಪರತದಲ್ಲಿ ಸೇರಿ ಕೊಂಡು ಫಲಮೂಲಗಳಿಂದಲೇ ಜೀವಿಸುತ್ತಿದ್ದ ಲಕ್ಷಕೋಟಿವಾನರರು ಆಗಲೇ ಆ ಪರತವನ್ನು ಬಿಟ್ಟು ಹೊರಟುಬಂದರು ಹಾಗೆಯೇ ಅಂಗಾರ ಕಗ್ರಹದಂತೆ ಕೆಂಪಾಗಿಯೂ, ಭಯಂಕರಸ್ವರೂಪವುಳ್ಳವರಾಗಿಯೂ, ಭ ಯಂಕರಕಾರವುಳ್ಳವರಾಗಿಯೂ ಇದ್ದ ಸಹಸ್ರಕೋಟಿವಾನರರು ವಿಂಧ್ಯ ಪರತದಿಂದ ಹೊರಟು ಬಂದರು. ಇಷ್ಟೇ ಅಲ್ಲದೆ ಕ್ಷೀರಸಮುದ್ರತೀರವ