ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೫೭ ಸರ್ಗ ೩೮ ] ಕಿಷಿಂಧಾಕಾಂಡವು. ಯನ್ನು ತೆಗೆದುಕೊಂಡು ಬನ್ನಿರಿ!” ಎಂದನು ಆ ಕ್ಷಣವೇ ತೀಪುಗಾಮಿಗ ಳಾದ ಕೆಲವು ವಾನರರು ಹೋಗಿ, ಸರೊತ್ತಮವಾದ ಒಂದು ಪಲ್ಲಕ್ಕಿಯ ನ್ನು ತಂದಿರಿಸಿದರು ಆಮೇಲೆ ಸುಗ್ರೀವನು ಲಕ್ಷಣವನ್ನು ಕುರಿತು, ಲಕ್ಷಣಾ' ಇನ್ನು ಪಲ್ಲಕ್ಕಿಯನ್ನೆ ಇರು!” ಎಂದನು ಸುವರ್ಣಯಮ ವಾಗಿ ಸೂರನಂತೆ ಜ್ವಲಿಸುತ್ತಿರುವ ಆ ಪಲ್ಲಕ್ಕಿಯನ್ನು ಲಕ್ಷಣಸುಗ್ರೀ ವರಿಬ್ಬರೂ ಏರಿ ಕುಳಿತರು ಮಹಾಕಾಯವುಳ್ಳ ಕೆಲವು ವಾನರರು ಆ ಪ ಲಕ್ಕಿಯನ್ನು ಹೊತ್ತು ನಿಂತರು, ಆಗಲೇ ಕೆಲವರು ಆಪಲ್ಲಕ್ಕಿಯಮೇಲೆ ದಿ ವ್ಯವಾದ ಶ್ವೇತಚ್ಛತ್ರವನ್ನು ತಂದುಹಿಡಿದರು ಕೆಲವುವಾನರರು ಆ ಪಲ್ಲ ಕ್ಕಿಯನ್ನು ಸುತ್ತಿನಿಂತು ಚಾಮರಗಳನ್ನು ಬೀಸುತಿದ್ದರು ಆ ಪಲ್ಲಕ್ಕಿಯ ಮುಂದೆ ಶಂಖಧ್ವನಿಗಳೂ ಭೇರೀಧ್ವನಿಗಳೂ ಆರಂಭಿಸಲ್ಪಟ್ಟವು ಕಲವು ವಾನರರು ಹೊಗಳುಭಟರಾಗಿ ನಿಂತು ಮಂಗಳಸ್ತುತಿಗಳನ್ನಾರಂಭಿಸಿದರು? ಹೀಗೆ ಸುಗ್ರೀವನು ತನ್ನ ಸಮಸ್ತರಾಜವೈಭವಗಳೊಡನೆ ಲಕ್ಷಣನನ್ನು ಕರೆದುಕೊಂಡು ಹೊರಟನು ಕೂರತೇಜಸ್ಸುಳ್ಳವರಾಗಿಯೂ, ಶಸ್ತ ಧಾರಿಗಳಾಗಿಯೂ ಇದ್ದ ಕೆಲವು ಕಪಿಭಟರು ಆ ಪಲ್ಲಕ್ಕಿಯನ್ನು ಸುತ್ತಿಬರು ತಿದ್ದರು ಈ ವೈಭವಗಳೊಡನೆಯ ಸುಗ್ರೀವನು ರಾಮನಿರುವಸ್ಥಳಕ್ಕೆ ಬಂದು ಸೇರಿದನು, ಶ್ರೀರಾಮಸಂಬಂಧದಿಂದ ಸರೋತಮವೆನಿಸಿಕೊಂ ಡ ಆಸ್ಥಳಕ್ಕೆ ಬಂದೊಡನೆಯೇ, ಮಹಾತೇಜಸ್ವಿಯಾದ ಸುಗ್ರೀವನು ಲಕ್ಷ ಇನೊಡಗೂಡಿ ಪಲ್ಲಕ್ಕಿಯಿಂದ ಕೆಳಕ್ಕಿಳಿದು, ರಾಮನನ್ನು ಕಂಡೊಡನೆ ಕೈ ಮುಗಿಯುತ್ತಮುಂದೆ ಬಂದು ನಿಂತನು ಹಾಗೆಯೇ ಅಲ್ಲಿದ್ದ ವಾನರರೆಲ್ಲರೂ ರಾಮನಮುಂದೆ ಬದ್ಧಾಂಜಲಿಗಳಾಗಲಿ ನಿಂತರು ಹೀಗೆ ವಾನರರೆಲ್ಲರೂ ಕೈ ಜೋಡಿಸಿಕೊಂಡು ಸುಗ್ರೀವನ ಸುತ್ತಲೂ ನಿಂತಿದ್ದರು ಹೀಗೆ ಸಮಸ್ತವಾ ನರರೂ ಕೈಜೋಡಿಸಿ ನಿಂತಿರಲು, ತಾವರೆಯ ಮೊಗ್ಗುಗಳಿಂದ ತುಂಬಿದ ದೊಡ್ಡ ಕೆರೆಯಂತೆ ತೋರುತ್ತಿದ್ದ ಆಮಹಾಸೇನೆಯನ್ನು ಕಂಡಾಗ ರಾಮನಿಗೆ ಪರಮಸಂತೋಷವುಂಟಾಯಿತು.ಅವನಿಗೆ ಸುಗ್ರೀವನಲ್ಲಿ ಅಸಾಧಾರಣವಾದ ಪ್ರೇಮವು ಹುಟ್ಟಿತು ಸುಗ್ರೀವನು ಮುಂದೆ ಬಂದು ರಾಮನ ಪಾದಗಳೆರಡ ನ್ಯೂ ಹಿಡಿದು ಸಾಷ್ಟಾಂಗಪ್ರಣಾಮವನ್ನು ಮಾಡಿದನು ರಾಮನು ಅವ