ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮ ಶ್ರೀಮದ್ರಾಮಯಳು [ಸರ್ಗ, 16 ನನ್ನು ಮೇಲಕ್ಕೆತ್ತಿ, ಪ್ರೇಮದಿಂದಲೂ, ಗೌರವದಿಂದಲೂ ಆತನನ್ನು ಬಿಗಿಯಾಗಿ ಅಪ್ಪಿಕೊಂಡು, “ಎಲೈ ಮಿತ್ರನೆ' ಕುಳ್ಳಿರು” ಎಂದನು ಸುಗ್ರಿ ವನು ವಿನಯದಿಂದ ನೆಲದಮೇಲೆಯೇ ಕುಳಿತನು. ಆಗ ರಾಮನು ಅವನನ್ನು ನೋಡಿ, “ಎಲೈ ವೀರನೆ' ಯಾವನು ಧರವನ್ನೂ ,ಅರ್ಥವನ್ನೂ, ಕಾಲೋ ಚಿತವಾಗಿ ವಿಭಾಗಿಸಿಕೊಂಡು, ಆಯಾಕಾಲಗಳಲ್ಲಿಯೇ ಅವನ್ನು ಸೇರಿಸು ವನೋ, ಅವನೇ ರಾಜನೆಂದು ಹೇಳಿಸಿಕೊಳ್ಳುವುದಕ್ಕೆ ಯೋಗ್ಯನು ಧಾ ರಗಳೆರಡನ್ನೂ ಬಿಟ್ಟು, ಕಾಮವನ್ನೇ ಯಾವನು ಹೆಚ್ಚಾಗಿ ಸೇವಿಸುವನೋ ಅವನು, ಮರದಮೇಲೆ ಮಲಗಿ ಮೈಮರೆತವನು ಕೆಳಗೆ ಬಿದ್ದ ಮೇಲೆ ಎಚ್ಚರಗೊಳ್ಳುವಂತೆ, ಅಧೋಗತಿಯನ್ನು ಹೊಂದಿದಮೇಲೆಯೇ ಜಾಗರೂಕ ನಾಗುವನು, ಶತ್ರುಗಳನ್ನು ಕೊಲ್ಲುವುದರಲ್ಲಿಯೂ ಮಿತ್ರರನ್ನು ಆದರಿಸು ವುದರಲ್ಲಿಯೂ ಯಾವಾಗಲೂ ಜಾಗರೂಕನಾಗಿದ್ದು, ಥರಾ ರ್ಥಕಾಮಗ ಛಂಬ ತ್ರಿವರ್ಗದ ಫಲವನ್ನೂ ಕಾಲೋಚಿತವಾಗಿ ಯಾವನು ಸೇವಿಸುವ ನೋ, ಆ ರಾಜನುಮಾತ್ರವೇ ತನ್ನ ರಾಜಧವನ್ನು ಚೆನ್ನಾಗಿ ನಿರಹಿಸಿದ ವನಾಗುವನು ಎಲೈ ಶತ್ರುಸೂದನನೆ! ಯುದ್ಧ ಪ್ರಯತ್ನಕ್ಕೆ ತಕ್ಕ ಕಾಲವು ಬಂದೊದಗಿರುವುದು ಶರದೃತುವು ಪ್ರಾಪ್ತವಾಯಿತು ಈಗ ನೀನು ನಡೆಸ ಬೇಕಾದ ಕಾಠ್ಯವನ್ನು ಕುರಿತು ನಿನ್ನ ವಾನರಮಂತ್ರಿಗಳೊಡನೆ ಚೆನ್ನಾಗಿ ಅಲೋಚಿಸು!” ಎಂದನು ಇದನ್ನು ಕೇಳಿ ಸುಗ್ರೀವನು ರಾಮನನ್ನು ಕುರಿ ತು, “ಎಲೈ ಆರನೆ' ನಾನು ಬಹುಕಾಲದಿಂದ ಕಳೆದುಕೊಂಡಿದ್ದ ಭಾಗ್ಯವೂ ನನ್ನ ಯಶಸ್ಫೂ ಶಾಶ್ವತವಾದ ಈ ನನ್ನ ವಾನರರಾಜ್ಯವೂ, ನಿನ್ನ ಮತ್ತು ನಿನ್ನ ತಮ್ಮನ ಅನುಗ್ರಹದಿಂದಲೇ ಈಗ ತಿರುಗಿ ನನಗೆ ಲಭಿಸಿರುವುವು. ಯಾವನು ತನಗೆ ಬೇರೊಬ್ಬರು ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವುದಿಲ್ಲವೋ ಅವರು ಪುರುಷಾಥಮನು ಎಲೈ ವೀರನೆ! ಈಗ ನೂರಾ ರುಮಂದಿ ವಾನರವೀರರು ಸಮಸ್ತಭೂಮಿಯನ್ನೂ ಸು ಬಲಾಡ್ಯರಾದ ಆನೇಕವಾನರರನ್ನು ಕರೆತಂದಿರುವರು ದೊಡ್ಡ ದೊಡ್ಡ ಕಾಡುಗಳನ್ನೂ, ವನಗಳನ್ನೂ, ದುರ್ಗಗಳನ್ನೂ, ಸಂದುಗೊಂದುಗಳನ್ನೂ ಹುಡುಕಿ, ಅಲ್ಲಲ್ಲಿದ್ದ ಭಯಂಕರಾಕಾರವುಳ್ಳ ಭಲ್ಲಕಗೋಲಾಂಗೂಲಗಳೇ ಮೊದ