ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧] ಕಿಂಧಾಕಾಂಡವು ೧೨ ವೇಗಕ್ಕೆ ಸಿಕ್ಕಿದ ವ್ಯಕ್ತಶಾಖೆಳು ಒಂದಕ್ಕೊಂದು ತಗುಲಿ ಒಂದೊಂದಕ್ಕೆ ಸೇರಿಸಿ ಕಟ್ಟಿಟ್ಟಂತೆ ಕಾಣುವುವು ನೋಡು' ವ ಲಕ್ಷಣಾ ! * ಚಂದನ ರಸದಂತೆ ಶೀತಲವಾಗಿ ಸುಖಸ್ಪರ್ಶವುಳ್ಳ ಈ ಗಾಳಿಯು ಎಷ್ಟು ಸುವಾಸನೆ ಯನ್ನು ಹೊರಡಿಸುತ್ತಿರುವುದು ನೋಡಿದೆಯಾ ! ಇದನ್ನನುಭವಿಸುವವ ರಿಗೆ ಎಷ್ಟು ಬಳಲಿಕೆಯಿದ್ದರೂ ನೀಗಿಸುವಂತಿರುವುದು ಮಕರಂದದ ಸುವಾಸನೆಯುಳ್ಳ ಈ ವನಗಳಲ್ಲಿ ವೃಕ್ಷಗಳೆಲ್ಲವೂ ಭ್ರಮರಧ್ವನಿಗಳೆಂಬ ವ್ಯಾಜ್ಯದಿಂದ ಕೂಗುವಂತೆ ತೋರುವುದು ನೋಡು' ಮನೋಹರವಾದ ಈ ಬೆಟ್ಟದ ತಪ್ಪಲುಗಳಲ್ಲಿ ಪಷಿತಗಳಾದ ಗಿಡಗಳು, ಆ ಬೆಟ್ಟದ ಶಿಖರಗ ಛೇ ಗೋಚರಿಸದಂತೆ ದಟ್ಟವಾಗಿ ಬೆಳೆದಿರುವುದನ್ನು ನೋಡಿದೆಯಾ? + ಈ ಗಿಡಗಳು ಹೂಗಳಿಂದ ತುಂಬಿ ಗಾಳಿಯಿಂದಲುಗುತ್ತಿರುವಾಗ, ಅವುಗಳೊಳ ಗಿನ ಭ್ರಮರಗಳು ಕೂಗಿಡುತ್ತಿರಲು, ಈ ಮರಗಳೆಲ್ಲವೂ ಸೇರಿ ಗಾನನ ರ್ತನಗಳನ್ನು ಮಾಡುವಂತೆ ಕಾಣವವು ಪುಷ್ಪಗಳಿಂದ ತುಂಬಿದ ಕೊನೆಗೆ ಳುಳ್ಳುದಾಗಿ, ಸುತ್ತಲೂ ಕಾಣುತ್ತಿರುವ ಈ ಕಕಾರವೃಕ್ಷಗಳನ್ನು ನೋ ಡು # ಸುವರ್ಣಾಲಂಕೃತರಾಗಿ ಪೀತಾಂಬರವನ್ನು ಟೈರುವ ಪುರುಷರಂತೆ ಕಾಣುತ್ತಿರುವುವು ವತ್ಸ ಲಕ್ಷಣಾ ! & ಈ ವಸಂತಕಾಲವು, ಕಿವಿಗಿಂ

  • ಇಲ್ಲಿ ಸುಗಂಧಸುಸ್ಪರ್ಶಾದಿಗಳುಳ್ಳ ವಾಯುಏವ ಅಗಮನವನ್ನು ಹೇಳಿ ರುವುದರಿಂದ 'ಸರ್ವಗಂಧಸ್ಸರ್ವರಸಃ” ಎಂಬ ಲಕ್ಷಣೋಕ್ತವಾದ ಭಗವತ್‌ರೂ ಪವು ಭಕ್ತಜನಗಳಿಗೆ ಸನ್ನಿಹಿತವಾಗಿರುವುದೆಂಬ ಭಾವವು ಸೂಚಿತವು

↑ ಇಲ್ಲಿ ವಾಯುಪ್ರೇರಿತಗಳಾದ ಮರಗಳ ಶಾಖೆಗಳು ಚಲಿಸುವುದನ್ನೂ, ಅವು ಗಳಲ್ಲಿ ಭ್ರಮರಗಾನವನ್ನೂ ಹೇಳುವುದರಿಂದ, ಭಕ್ತಿ ವಶದಿಂದ ಆನಂದಪರವಶರಾದ ಭಕ್ತರು ಮಾಡುವ ಗಾನನರ್ತನಾದಿಗಳು ಸೂಚಿತಗಳಾಗಿವೆ.

  • ಇಲ್ಲಿ ವೃಕ್ಷಗಳನ್ನು ಪೀತಾಂಬರಧಾರಿಗಳಿಗೆ ಹೋಲಿಸಿರುವುದರಿಂದ ಭಗವ ಕ್ವಾರೂಪ್ಯವನ್ನು ಹೊಂದಿದ ಜ್ಞಾನಿಗಳೆಂದು ಸೂಚಿತವು.

... ಇಲ್ಲಿ ವಸಂತವು ನಾನಾಪಕ್ಷಿಧ್ವನಿಗಳಿಂದೊಪ್ಪತಿದ್ದರೂ, ಸೀತೆಯಿಲ್ಲದು ದರಿಂದ ನನಗೆ ದುಃಖವನ್ನುಂಟುಮಾಡುವದೆಂಬುದರಿಂದ, ತನ್ನ ಭಕ್ತರನೇಕರು ನನ್ನ «ನುಭವಿಸಿ ತೃಪ್ತರಾಗಿ ಆನಂದಿಸುತ್ತಿದ್ದರೂ,ಬದ್ದರು ಹಾಗಿಲ್ಲದುದರಿಂದ,ತನಗೆ ದು ವನ್ನುಂಟುಮಾಡುವರೆಂಬ ಭಾವವು ಸೂಚಿತವಾಗುವುದು, ರಾಮನು ಹಿಂದೆ ತನ್ನ 84