ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬೦ ಶ್ರೀಮದ್ರಾಮಾಯಣವು [ಸರ್ಗ ೩೯. w+ವಾನರ ಸೈನ್ಯಗಳೆಲ್ಲವೂ ಬಂದು ಸೇರಿದುದು+w ಧಾರಿ ಕಶಿರೋಮಣಿಯಾದ ರಾಮನು, ತನ್ನ ಮುಂದೆ ಕೈಮುಗಿದು ನಿಂತು ಹೀಗೆ ಹೇಳುತಿದ್ದ ಸುಗ್ರೀವನನ್ನು ತೋಳುಗಳಿಂದಪ್ಪಿಕೊಂಡು, ಆತ ನನ್ನು ಕುರಿತು ಎಲೈ ಮಿತ್ರನೆ' ಇಂದ್ರನು ಮಳೆಯನ್ನು ಸುರಿಸುವುದಾಗಲಿ, ಸೂರನು ಕತ್ತಲೆಯನ್ನು ನೀಗಿಸಿ ಈ ಸಮಸ್ತ ಪ್ರಪಂಚವನ್ನೂ ಪ್ರಕಾಶಪ ಡಿಸುವುದಾಗಲಿ, ಅವರಿಗೆ ಸಹಜಧಮ್ಮವೇ ಆದುದರಿಂದ ಅದೇನೋ ಆಶ್ರನ ಲ್ಲ ಹಾಗೆಯೇ ಚಂದ್ರನು ತನ್ನ ಕಿರಣಗಳಿಂದ ಲೋಕಾಹ್ಲಾದವನ್ನು ಮಾಡು ವುದೂ ಅವನ ಸಹಜಧರವೇ ಹೊರತು ಅದರಲ್ಲಿಯೂ ಆಶ್ಚರವಿಲ್ಲ ಅದರಂತೆಯೇ ನೀನೂ ನಿನ್ನ ಮಿತ್ರರಾದವರಿಗೆ ಒಂದು ಪ್ರತ್ಯುಪಕಾರವನ್ನು ಮಾಡಿದರೂ ಅದು ನಿನ್ನಂತವನಿಗೆ ಸಹಜವಾಗಿಯೇ ಇರುವುದು ಆದುದರಿಂ ದ ನೀನೂ ನಿನ್ನ ಮಿತ್ರನಾದ ನನಗೆ ಉಪಕಾರಮಾಡುವುದೇನೂ ಆಶ್ಚರವ ಎಲೈ ಸುಗ್ರೀವನೆ' ನೀನು ಯಾವಾಗಲೂ ಪ್ರಿಯವಾದಿಯೆಂಬುದನ್ನು ನಾನು ಬಲ್ಲೆನು ನಿನ್ನ ಸಹಾಯವಿದ್ದ ಮೇಲೆ ಯಾವಶತ್ರುಗಳನ್ನಾ ದರೂ ನಾನು ಯುದ್ಧದಲ್ಲಿ ಜಯಿಸಬಲ್ಲೆನು ಈಗ ನೀನೊಬ್ಬನೇ ನನ್ನಲ್ಲಿ ಸಹೃದಯವುಳ್ಳ ಮಿತ್ರನು ನೀನೇ ನನಗೆ ಸಹಾಯವನ್ನು ಮಾಡತಕ್ಕವನು ಸೂಕ್ಷ್ಯದಲ್ಲಿ ಅನು ಹ್ಲಾದನೆಂಬವನು ಇಂದ್ರನನ್ನು ವಂಚಿಸಿ ಶಚಿ ಯನ್ನು ಕದ್ದು ತಂದಂತೆ, ರಾ (ಸಾಧಮನಾದ ರಾವಣನು ನನ್ನನ್ನು ವಂಚಿಸಿ ನನ್ನ ಪ್ರಿಯಪತ್ನಿ ಯಾದ ಸೀತೆಯನ್ನು ಕದ್ದುಯ್ದನು' ಇಂದ್ರನು ಯುದ್ಧದಲ್ಲಿ ಶಚಿಯ ತಂದೆಯಾ ದ ಪುಲೋಮನನ್ನು ಕೊಂದು ಆ ಶಚಿಯನ್ನು ತಂದಂತೆ, ಶೀಘ್ರದಲ್ಲಿ ನಾನೂ ರಾವಣನನ್ನು ಕೊಂದು ಸೀತೆಯನ್ನು ತರುವೆನು ” ಎಂದನ. ಹೀಗೆ ಸಂಭಾಷಿಸುತ್ತಿರುವಷ್ಟರಲ್ಲಿಯೇ ಆಕಾಶದಲ್ಲಿ ಸೂ‌ನನ್ನೇ ಮರೆಸುವಂತೆ ದೊಡ್ಡ ಥಳಿಯು ನೆಲದಿಂದ ಮೇಲಕ್ಕೆದ್ದಿತು ಆ ಧೂಳಿಯಿಂದ ದಿಕ್ಕುಗ ಳೆಲ್ಲವೂ ಮಾಸಿದಂತಾದುವು ಪಕ್ವತಗಳಿಂದಲೂ, ಮಹಾರಣ್ಯಗಳಿಂದಲೂ ತುಂಬಿದ ಈ ಸಮಸ್ತಭೂಮಿಯೂ ಅಕಸ್ಮಾತ್ತಾಗಿ ನಡುಗಿದಂತಾಯಿತು ಸ್ವಲ್ಪ ಕಾಲದೊಳಗಾಗಿ ಪಕ್ವತಾಕಾರವುಳ್ಳವರಾಗಿಯೂ, ಕವಾದ ಕೋರೆಗಳುಳ್ಳವರಾಗಿಯೂ, ಮಹಾಬಲಾಡ್ಯರಾಗಿಯೂ ಇರುವ ವಾನರರು,