ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩೯] ಕಿಷಿಂಧಾಕಾಂಡವು ೧೫೬೧ ಲೆಕ್ಕವಿಲ್ಲದಂತೆ ಬಂದು ಅಲ್ಲಿನ ಸಮಸ್ತಭೂಪ್ರದೇಶವನ್ನೂ ವ್ಯಾಪಿಸಿಬಿಟ್ಟ, ರು ಕಾಮರೂಪಿಗಳಾಗಿಯೂ ಬಲಿಷ್ಠರಾಗಿಯೂ ಇರುವ ಅನೇಕವಾನರ ವೀರರು ಮಹಾಮೇಫುಗಳಂತೆ ಬೊಬ್ಬೆಯಿಡುತ್ತ ಎದೆಹಾರಿಸುವಷ್ಟರಲ್ಲಿ ಬಂದು ಸೇರಿಬಿಟ್ಟರು ಆ ಯೋಧನಾಧರಲ್ಲಿ ಒಬ್ಬೊಬ್ಬರೂ ಕೋಟೆಕೊ ಟೆವಾನರಸೇನೆಯೊಡನೆ ಬಂದಿದ್ದರು ಅವರಲ್ಲಿ ನದೀತೀರವಾಸಿಗಳು ಕೆಲ ವರು ಪಕ್ವತವಾಸಿಗಳು ಕಲವರು ಸಮುದ್ರತೀರವಾಸಿಗಳು ಕೆಲವರು ಹಾಗೆಯೇ ಇನ್ನೂ ಬೇರೆಬೇರೆಸ್ಥಳಗಳಲ್ಲಿದ್ದ ವಾನರರೆಲ್ಲರೂ ಬಂದು ನೆರೆದ ರು ಪರಾಕ್ರಮವಂತನಾಗಿಯೂಶ್ರೀಮಂತನಾಗಿಯೂ ಇದ್ದ ಶತಬಲಿಯೆಂ ಬ ವಾನರವೀರನು, ತಾನಿದ್ಯ ಮೇರುಪ್ಪುತಪ್ರಾಂತಗಳಿಂದ ಹತ್ತು ಸಹ ಪ್ರಕೋಟೆವಾನರಸೈನ್ಯದೊಡನೆ ಬಂದು ಸೇರಿದನು ಆ ವಾನರಸೈನ್ಯದಲ್ಲಿ ಬಾಲಸೂರನಂತೆ ಹೊಳೆಯುವ ಮೈಬಣ್ಣ ವುಳ್ಳವರು ಕೆಲವರು ಕಲವರು ಚಂದ್ರನಂತೆ ಬಿಳುಪಾದ ದೇಹಕಾಂತಿಯುಳ್ಳವರು' ತಾವರೆಯಸಳಿನಂತೆ ಎ ಳಗೆಂಪುಬಣ್ಣದಿಂದ ಶೋಭಿಸುವ ಮೈಬಣ್ಣವುಳ್ಳವರು ಕಲವರು ಹೀಗೆ ಕಾಂತಿವಿಶಿಷ್ಟವಾದ ದೇಹವುಳ್ಳ ವಾನರರೆಲ್ಲರೂ ಒಂದುಕಡೆಯಲ್ಲಿ ಬಂದು ಸೇರಿದ್ದರು ಮೇರುವಿನಂತೆ ಬಣ್ಣವುಳ್ಳ ತಾರೆಯ ತಂದೆಯಾದ ಸುಷೇ ಣನೆಂಬ ವಾನರವೀರನು, ಹತ್ತುಸಹಸ್ರಕೋಟೆವಾನರಸೈನ್ಯದೊಡನೆ ಬಂ ದು ಸೇರಿದನು ಸುಗ್ರೀವಪತ್ತಿ ಯಾದ ರುಮೆಯ ತಂದೆಯಾದ ತಾರನೆಂಬ ವಾನರಯೂಥಪನು ಸಹಸ್ರಕೋಟಿವಾನರರೊಡನೆ ಬಂದು ಸೇರಿದನು ಮ ತ್ತು ಹನುಮಂತನ ತಂದೆಯಾಗಿ, ಕಮಲಕಿಂಜಲ್ಯದಂತಿರುವ ದೇಹಚ್ಛಾಯೆ ಯಿಂದಲೂ, ಬಾಲಸೂನಂತಿರುವ ಮುಖದಿಂದಲೂ ಕೂಡಿದ ಕೇಸರಿ ಯೆಂಬ ವಾನರೋತ್ತಮನು,ಒಂದೊಂದರಲ್ಲಿ ಇಪ್ಪತ್ತೊಂದು ಸಾವಿರದ ಎಂ ಟು ನೂರೆಪ್ಪತ್ತು ಮಂದಿ (ಆಕಹಿಣೀ ಸಂಖ್ಯೆಯ) ವಾನರರುಳ್ಳ ಸೇನೆಗಳ ಇು ಸಹಸ್ರಾಧಿಕಸಂಖ್ಯೆಯಿಂಥ ಸೇರಿಸಿ ಕರೆತಂದನು ಗೋಲಾಂಗೂಲಗಳಿಗೆ ರಾಜನಾದ ಗವಾಕ್ಷನೆಂಬವನು ಸಹಸ್ರಕೋಟೆವಾನರೊಡನೆ ಬಂದು ಸೇರಿದ ನು ಯಾವ ಶತ್ರುಗಳನ್ನಾದರೂ ಹುಟ್ಟಡಗಿಸತಕ್ಕ ಮಹಾವೀರವುಳ್ಳ ಧೂ. ಬ್ರನೆಂಬವನು ಎರಡುಸಹಸ್ರಭಲ್ಲಕವೀರರೊಡನೆ ಬಂದು ಸೇರಿದನು.