ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬೪ ಶ್ರೀಮದ್ರಾಮಾಯಣವು [ಸರ್ಗ ೪೦, ಬಹುದೆಂದು ತಿಳಿಯಬೇಕೆಂಬ ಇಚ್ಛೆಯುಳ್ಳವನಾಗಿದ್ದನು ಇಲ್ಲಿಗೆ ಮೂವ ತೊಂಬತ್ತನೆಯ ಸರ್ಗವು (ಸುಗ್ರೀವನು ಸೀತಾನ್ವೇಷಣಾರವಾಗಿ, ವಿನತನೆಂಬ ). »{ ವಾನರ ಯಧಾಧಿಪತಿಯನ್ನು ಪೂರೈದಿಕ್ಕಿಗೆ ಕಳುಹಿಸಿದುದು ಹೀಗೆ ಸಮೃದ್ಧವಾದ ಸೇನಾಸಾಧನಗಳುಳ್ಳ ಸುಗ್ರೀವನು, ಪುರು ಷೋತ್ತಮನಾದ ರಾಮನನ್ನು ಕುರಿತು « ರಾಮಾ ! ನನಗೆ ತಿಳಿದಮಟ್ಟಿಗೆ ಸಮಸ್ತದೇಶಗಳಲ್ಲಿಯೂ, ನನ್ನ ರಾಜ್ಯದಲ್ಲಿಯೂ ಇರತಕ್ಕ ಬಲಾಡ್ಯರೂ, ಕಾಮರೂಪಿಗಳೂ, ಆನೆಯಂತೆ ಕೊಬ್ಬಿದವರೂ ಆಗಿರುವ ವಾನರರೆಲ್ಲ ರೂ ಬಂದಿಳಿದಿರುವರು ಭಯಂಕರಾಕಾರವುಳ್ಳ ದೈತ್ಯದಾನವರನ್ನೇ ಹೋ ಲತಕ್ಕ ಈ ವಾನರಯೂಥಪತಿಗಳೆಲ್ಲರೂ ತಮ್ಮ ತಮ್ಮ ಶಕ್ತಿಗೆ ತಕ್ಕಂತೆ ಮಹಾಪರಾಕ್ರಮಿಗಳಾಗಿಯೂ, ತೀಘ್ರಗಾಮಿಗಳಾಗಿಯೂ ಇರುವ ಅನೇ ಕವಾನರಸೈನಿಕರನ್ನೂ ಕರೆತಂದಿರುವರು ಇವರು ಪೂತ್ವದಲ್ಲಿ ನಡೆಸಿರುವ ಒಂದೊಂದುಕಾರವೂ ಬಹಳ ಹೆಸರುಗೊಂಡುದಾಗಿದೆ ಇವರ ಪೂಚ ರಿತ್ರಗಳೂ ಬಹಳ ವಿಖ್ಯಾತಗಳಾಗಿವೆ ಇವರೆಲ್ಲರೂ ಮಹಾಬಲಶಾಲಿಗಳು ಎಷ್ಟೆ ಶ್ರಮವನ್ನಾದರೂ ಲಕ್ಷಮಾಡುವವರಲ್ಲ ಪರಾಕ್ರಮಗಳಲ್ಲಿಯೂ ಸಾಹಸಗಳಲ್ಲಿಯೂ ಇವರೆಲ್ಲರೂ ಬಹಳ ಹೆಸರುಗೊಂಡವರು ಭೂಮಾ ರ್ಗದಲ್ಲಿಯಾಗಲಿ, ಜಲಮಾರ್ಗದಲ್ಲಿಯಾಗಲಿ ತಡೆಯಿಲ್ಲದೆ ಸಂಚರಿಸಬಲ್ಲರು ಅನೇಕಪರತಗಳಲ್ಲಿದ್ದು ಅಲ್ಲಲ್ಲಿನ ರಹಸ್ಯಗಳೆಲ್ಲವನ್ನೂ ಚೆನ್ನಾಗಿ ಬಲ್ಲವರು. ಇಂತಹ ವಾನರರು ಕೋಟಿಕೋಟಿ ಸಂಖ್ಯೆಯಿಂದ ನಿನ್ನ ಸೇವಾರವಾಗಿ ಬಂದಿರುವರು ಇವರೆಲ್ಲರೂ ನಿನ್ನ ಕಿಂಕರರು' ಯವಮಾತ್ರವಾದರೂ ನಿನ್ನಾ ಜ್ಞೆಯನ್ನು ಮೀರಿ ನಡೆಯಲಾರರು ಎಲ್ಲರೂ ಸ್ವಾಮಿಹಿತದಲ್ಲಿಯೇ ನಿರತ ರಾಗಿರುವರು ನಿನ್ನ ಇಷ್ಟಾನುಸಾರವಾಗಿ ನಡೆದುಕೊಳ್ಳುವುದಕ್ಕೆ ಶಕ್ತರಾಗಿ ಯೂ ಇರುವರು ಅದೋ ನೋಡು ಆ ವಾನರಯೂಥಪತಿಗಳಲ್ಲಿ ಒಬ್ಬೊ ಬ್ಬರೂ ಭಯಂಕರಪರಾಕ್ರಮವುಳ್ಳ ಅನೇಕಸಹಸ್ರಸೈನ್ಯಗಳೊಡನೆ ಬಂ ದು ಸಿದ್ಧರಾಗಿರುವರು. ಎಲೈ ಪುರುಷೋತ್ತಮನೆ! ಮುಂದೆ ನಿನಗೆ ಯಾವ