ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ ಶ್ರೀಮದ್ರಾಮಾಯಣವು - [ಸರ್ಗ, ೧ ಪಾದ ಅನೇಕಪಕ್ಷಿಗಳ ಕೋಲಾಹಲದಿಂದ ಕೂಡಿದ್ದರೂ, ಮೊದಲೇ ಸೀತಾ ವಿಯೋಗದಿಂದ ಕೊರಗುತ್ತಿರುವ ನನ್ನ ದುಃಖವನ್ನು ಮೇಲೆಮೇಲೆ ಹೆಚ್ಚಿ ಸುತ್ತಿರುವುದು ಮೊದಲೇ ದುಃಖಪೀಡಿತನಾದ ನನ್ನನ್ನು ಈಗ ಮನ್ನ ಧನು ಮತ್ತಷ್ಟು ಸಂತಾಪಪಡಿಸುವನು ಇದೋ ! ಇಲ್ಲಿ * ಕೋಗಿ ಲೆಯು ಈಗ ತನಗುಂಟಾಗಿರುವ ಸಂತೋಷಾತಿಶಯದ ಗತ್ವದಿಂದ, ದುಃಖಿ ತನಾದ ನನ್ನನ್ನು ಕೂಗಿ ಕರೆದು ಹಂಗಿಸುವಂತೆ ಧ್ವನಿಮಾಡುತ್ತಿರುವು ದು ಇದೊ' ಮನೋಹರವಾದ ಈ ನದಿಯ ಬಳಿಯಲ್ಲಿರುವ ಈ ನೀರು ಹಕ್ಕಿಗಳು, ಏನೋ ಸಂತೋಷದಿಂದ ಕೂಗಿಡುತ್ತ, ಮೊದಲೇ ಕಾಮಖಾ ಣಪೀಡಿತನಾದ ನನ್ನನ್ನು ಮತ್ತಷ್ಟು ಸಂಕಟಪಡಿಸುತ್ತಿರುವುವು ನೋಡಿದೆ ಯಾ?ಮೊದಲುಸೀತೆಯು ಈ ಆಶ್ರಮದಲ್ಲಿರುವಾಗ,ಇದರ ಕೂಗನ್ನು ಕೇಳಿ ದೊಡನೆ ಕಾಮೋದ್ರೇಕವನ್ನು ಹೆ ೧ಂದಿ ಆ ಕ್ಷಇವೇ ನನ್ನನ್ನು ಕರೆದು ನ ನ್ನೊಡನೆ ಯಥೇಚ್ಛವಾದ ಕ್ರೀಡಾರಸವನ್ನ ನುಭವಿಸಿ ಆನಂದಿಸಿದಳಲ್ಲವೆ ? ವತ್ಸನೆ ' ಚಿತ್ರವಿಚಿತ್ರಗಳಾದ ಈ ಪಕ್ಷಿಗಳೆಲ್ಲವೂ ಬಗೆಬಗೆಯ ಧ್ವನಿಗಳಿಂದ ಪಟ್ಟಾಭಿಷೇಕಕ್ಕಾಗಿ ನಿರ್ಣಯಿಸಲ್ಪಟ್ಟ ವಸಂತಋತುವಿನಲ್ಲಿಯೇ ಅಯೋಧ್ಯೆಯನ್ನು ಬಿಟ್ಟು ಹೊರಟನು ಈಗಲೂ ವಸಂತವು ವರ್ಣಿಸಲ್ಪಡ.ವುದರಿಂದ ಇಲ್ಲಿಗೆ ಸರಿಯಾಗಿ ಹದಿಮೂರು ವರ್ಷಗಳ ಕಾಲವು ವನವಾಸದಲ್ಲಿ ಕಳೆದುಹೋದುವೆಂದು ಗ್ರಾಹ್ಯವು.

  • ಇಲ್ಲಿ ಕೋಗಿಲೆಗಳು ತನ್ನನ್ನು ಹಂಗಿಸುವುವೆಂಬುದರಿಂದ ಜ್ಞಾನದಲ್ಲಿಯೇ ತನಗೆ ವಾತ್ಸಲ್ಯವೆಂಬುದನ್ನರಿಯದೆ, ಕೇವಲ ಕರ್ಮರರಾದವರು ತಮ್ಮ ಕರ್ಮಗಳಿಂದ ತನ್ನನ್ನು ಹಂಗಿಸುವರೆಂದು ಭಾವವು

↑ ಇಲ್ಲಿ ಸೀರುಹಕ್ಕಿಗಳೆಂಬುದರಿಂದ ಕೇವಲ ಜಪಪರರೆಂದು ಭಾವವು, ಜ್ಞಾನೀ ತಾವಮೇಮತಮ್ಎಂದೂ, ಭಕ್ತಿಶ್ರೀಜನಾರನ” ಎಂದೂ, ಜ್ಞಾನ ಭಕ್ತಿಗಳೇ ಭಗವಂತನಿಗೆ ಸದ್ಯ:ಪ್ರೀತಿಕರಗಳಾದುದರಿಂದ, ಜಪಾದಿಸಾಧನಾಂತರ ಪರರು ಆತನಿಗೆ ಅಷ್ಟು ಪ್ರಿಯರಲ್ಲವೆಂದು ಸೂಚಿತವು. ↑ ಇಲ್ಲಿ ಸೀತೆಯು ತನ್ನನ್ನು ಕರೆದು ಆನಂದಿಸಿದಳೆಂಬುದರಿಂದ, ತನ್ನನ್ನು ಹೊರ ತು ಬೇರೆ ಪ್ರಯೋಜನಾಂತರವನ್ನ ಪೇಕ್ಷಿಸದೆ ಮಾಡತಕ್ಕ ಜರಾದಿಗಳೇ ತನಗೆ ಪ್ರೀತಿ ಕರವೆಂದು ಭಾವವು ... ಇದರಿಂದ ಆಚಾರಪರತಂತ್ರವಾಗಿ ಸಾಮಗಾನವನ್ನು ಮಾಡತಕ್ಕ ಶಿಷ್ಯವರ್ಗ ನ ಸಚಿತವು.