ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪o ] ಕಿಷಿಂಧಾಕಾಂಡವು ೧೫೬೯. ರಿಂದ ಹತರಾಗಿ ಸಮುದ್ರದಲ್ಲಿ ಬಿಳುವರು, ಪುನಃ ಮೇಲಕ್ಕೆದ್ದು ಆ ಶಿಖರಗಳನ್ನೇರುವರು ನೀವು ಯಾರಿಗೂ ಈಡಾಗದ ಮಹಾಪರಾಕ್ರ ಮವುಳ್ಳವರಾದುದರಿಂದ, ಅವೆಲ್ಲವನ್ನೂ ದಾಟಿಹೋಗಬಲ್ಲಿರಿ' ಈ ದಾರಿಯಲ್ಲಿ ಸಿಕ್ಕುವ ಸ್ಟುತಸಮುದ್ರವನ್ನೂ , ಕುಶದೀಪವನ್ನೂ, ದಧಿಸಮುದ್ರವ ನ್ಯೂ, ಕೌಂಚದ್ವೀಪವನ್ನೂ, ಅತಿಕ್ರಮಿಸಿಹೋದಮೇಲೆ, ಬಿಳೀಮೇ ಫುದಂತೆ ಕಾಂತಿಯುಳ್ಳ ಕ್ಷೀರೋದವೆಂಬ ಸಮುದ್ರವನ್ನು ನೋಡುವಿರಿ ? ಮುತ್ತಿನಹಾರದಂತಿರುವ ಅಲೆಗಳ ಪರಂಪರೆಯಿಂದ ಕೂಡಿದ ಆ ಸಮು ದ್ರದ ಮಧ್ಯದಲ್ಲಿ, ಬಹಳಬಿಳುಪಾದ ಋಷಭವೆಂಬ ಒಂದು ಪರತವು ಕಾಣುವುದು ಆ ಪ್ರತವು ದಿವ್ಯಗಂಧದಿಂದ ಕೂಡಿದ ಹೂಗಳಿಂದ ಸು ವಾಸಿತಗಳಾದ ಅನೇಕವೃಕ್ಷಗಳಿಂದ ತುಂಬಿರುವುದು ಆ ವೃಕ್ಷಗಳೆಲ್ಲವೂ ರಜತಮಯವಾಗಿಯೇ ಇರುವುವು ಅಲ್ಲಿ ಚಿನ್ನ ದ ಕೇಸರಗಳಿಂದ ಕೂ ಡಿದ ಬೆಳ್ಳಿಯ ಕಮಲಗಳಿಂದಲೂ, ರಾಜಹಂಸಗಳಿಂದಲೂ ತುಂಬಿದ ಒಂದಾನೊಂದು ಸರೋವರವಿರುವುದು ಅದಕ್ಕೆ ಸುದರ್ಶನವೆಂದು ಹೆ ಸರು ದೇವತೆಗಳೂ, ಯಕ್ಷರೂ, ಚಾರಣರೂ, ಕಿನ್ನರರೂ ಅಪ್ಪರಸ್ಸು ಗಳೂ ಕ್ರೀಡಾರ್ಧವಾಗಿ ಆ ಸರೆ ವರಕ್ಕೆ ಬರುವರು ಎಲೈ ವಾನರರ! ನೀವು ಆ ಕ್ಷೀರಸಮುದ್ರವನ್ನೂ ದಾಟಿದ ಮೇಲೆ, ಸಲ್ವಭೂತಭಯಂಕರವಾಗಿ ಸಮಸ್ತಸಮುದ್ರಗಳಿಗೂ ಮಲೆನಿಸಿಕೊಂಡ ಶುದ್ಧ ಜಲಸಮುದ್ರವನ್ನು ನೋಡುವಿರಿ' ಔಧ್ವಮುನಿಯ ಕೋಪದಿಂದ ಹುಟ್ಟಿ ಬಡಬಾಗ್ನಿ ಯಂದು ಪ್ರ ಸಿದ್ಧಿ ಹೊಂದಿದ ಕುದುರೆಯ ಮುಖವುಳ್ಳ ಒಂದು ಮಹಾತೇಜಸ್ಸು ಆ ಸ ಮುದ್ರದ ನೀರಿನಲ್ಲಿ ಅಡಗಿರುವುದು ಆ ತೇಜಸ್ಸಿಗೆ ಪ್ರಳಯಕಾಲದಲ್ಲಿ ಜಂಗ

  • ಇಲ್ಲಿ ಮಧುಸಮುದ್ರದಿಂದಾಚೆಗೆ ಕೃತದಧಿಸಮುದ್ರಗಳನ್ನೂ, ಕುಶಕ್ ಚದ್ವೀಪಗಳನ್ನೂ ಹುಡುಕಬೇಕೆಂದು ಕ೦ರೋಕ್ತವಾಗಿ ಹೇಳಿದ್ದರೂ, “ಅವಣೇ ಕುಸುರಾಸರ್ಪಿದ್ರಧಿಕೀರಜಲಾರ್ಶವಾಃ” ಎಂದು ಹೇಳಲ್ಪಟ್ಟಿರುವ ಸಮುದ್ರಕ್ರಮ ವನ್ನನುಸರಿಸಿ, ಕ್ರಮವಾಗಿ ಸಪ್ತಸಮುದ್ರಗಳನ್ನೂ ಸಪ್ತದ್ವೀಪಗಳನ್ನೂ ಹೇಳಿದಂತ ಯೇ ಗ್ರಹಿಸಬೇಕು, ಅವುಗಳಲ್ಲಿ ಅಷ್ಟಾಗಿ ವಿಶೇಷವೇನೂ ಇಲ್ಲದುದರಿಂದಲೇ ಅವನ್ನು ವಾಚ್ಯವಾಗಿ ಹೇಳಲಿಲ್ಲವೆಂದು ಗ್ರಾಹ್ಯವು

99