ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೭೧ ಸರ್ಗ ೪೦.] ಕಿಷಿಂಧಾಕಾಂಡವು *ಸಾವರಿ ಮೇರುಶಿಖರದಲ್ಲಿಯೂ ಇಡಲ್ಪಟ್ಟಿತು ಸೂರನು ಅಸ್ತಮಯಾ ನಂತರದಲ್ಲಿ ಜಂಬೂದ್ವೀಪವನ್ನು ಉತ್ತರದಿಂದ ಸುತ್ತಿಬಂದು, ಮಹೋನ್ನತ ವಾದ ಈ ಸೌಮನಸಶಿಖರಕ್ಕೆ ಸೇರಿದಮೇಲೆಯೇ ಮೇರುವಿನ ದಕ್ಷಿಣಪಾ ರ್ಶ್ವದಲ್ಲಿರುವ ನಮ್ಮೆಲ್ಲರಿಗೂ ಚೆನ್ನಾಗಿ ಗೋಚರಿಸುವನು ಆ ಸೌಮನಸ ಶಿಖರದಲ್ಲಿ ಮಹಾತಪಸ್ವಿಗಳಾಗಿಯೂ, ಸೂರತೇಜಸ್ಸುಳ್ಳವರಾಗಿಯೂ ಇರುವ ವೈಖಾನಸ ವಾಲಖಿಲ್ಯರೆಂಬ ಮಹರ್ಷಿಗಳು ದೇದೀಪ್ಯಮಾನರಾಗಿ ಕಾಣಿಸುವರು ಆ ಉದಯಪರತದ ಪಕ್ಕದಲ್ಲಿ ಸುದರ್ಶನವೆಂಬ ದ್ವೀ ಪವಿರುವುದು ಯಾವ ತೇಜಸ್ಸಿನ ಸಾನ್ನಿಧ್ಯದಿಂದಲೇ ಸಮಸ್ತಪ್ರಾಣಿಗಳ ಕಣ್ಣಿಗೂ ಪ್ರಕಾಶವುಂಟಾಗುವುದೊ,ಅಂತಹ ಸೂರನೆಂಬ ತೇಜಸ್ಸಿಗೆ ಪ್ರ ಥಮಾಶ್ರಯವಾಗಿ ಪ್ರಕಾಶಿಸುವ ಆ ದ್ವೀಪಕ್ಕ ಸುದರ್ಶನವೆಂಬ ಆ ಹೆಸರು ಅನ್ವರವಾಗಿಯೇ ಇರುವುದು ಆ ಉದಯಪರತದ ಶಿಖರಗಳನ್ನೂ ,ಗುಹೆ ಗಳನ್ನೂ , ವನಗಳನ್ನೂ ಸುತ್ತಿ, ಅಲ್ಲಲ್ಲಿ ನೀವು ಸೀತೆಯನ್ನೂ, ರಾವಣನನ್ನೂ ಹುಡಕಬೇಕು ಸುಮ್ಮಮಯವಾದ ಆ ಉದಯಪ್ಪತದ ಕಾಂತಿಯೂ, ಸೂರನ ಕಾಂತಿಯೂ, ಪ್ರಾತಃಕಾಲದಲ್ಲಿ ಒಂದಾಗಿ ಸೇರಿ ಬೆಳಗುವುದರಿಂ ದಲೇ ಬೆಳಗಿನ ಸಂಜೆಯು ರಕ್ತವಗ್ಗವಾಗಿ ಕಾಣುವುದು ಬ್ರಹ್ಮನು ತನ್ನ ಸೃಷ್ಮಾರಂಭದಲ್ಲಿ ಈ ದಿಕ್ಕನ್ನು ಭೂಮಿಗೂ, ಇತರಲೋಕಗಳಿಗೂ ಪ್ರಥಮದ್ವಾರವಾಗಿಯೂ, ಸೂರನಿಗೆ ಉದಯಸ್ಥಾನವಾಗಿಯೂ, ಕಲ್ಪಿ ಸಿರುವುದರಿಂದಲೇ ಇದು ಪೂತ್ವದಿಶೆಯೆಂದು ಹೇಳಲ್ಪಡುವುದು ಆ ಪ

  • ಇಲ್ಲಿ ಪೂರೈಪಶ್ಚಿಮದಿಕ್ಕುಗಳಿಗೆ ಎಲ್ಲೆಗಳಾದ ಉದಯ ಸಾವರ್ಣಿಮೇರುಕ ರತಗಳಮೇಲೆ ವಿಷ್ಣುವು ಅಡಿಯನ್ನಿಟ್ಟುದಾಗಿ ಹೇಳಿದುದು, ಬಲಿಯ ರಾಜ್ಯವನ್ನು ಸಾಕಲ್ಯವಾಗಿ ಗ್ರಹಿಸಿದನೆಂಬುದಕ್ಕಾಗಿಯೇಹೊರತು ಬೇರೆಯಲ್ಲ ಭೂಮಧ್ಯ ಮೇರು ವಿನಲ್ಲಿಯೇ ಕಾಲಿಟ್ಟುದಾಗಿ ಹೇಳಿದರೆ ಸಾಕಲ್ಯವಾಗಿ ಬಲಿರಾಜ್ಯವನ್ನು ಗ್ರಹಿಸಿದಂತಾಗು ವುದಿಲ್ಲ ಆದರೆ ವಾಸ್ತವದಿಂದ ಮೇರುಶಿಖರದಲ್ಲಿಯೇ ದ್ವಿತೀಯವಾದವು ಇಡಲ್ಪಟ್ಟು ದಾಗಿ ಗ್ರಾಹ್ಯವು ಮೇರುಶಿಖರವೇ ಸ್ವರ್ಗವೆನಿಸುವುದು ಒಂದಡಿಯಿಂದ ಭೂಮಿ ಯನ್ನೂ, ಎರಡನೆಯದರಿಂದ ಸ್ವರ್ಗವನ್ನೂ, ಮೂರನೆಯದರಿಂದ ಬ್ರಹ್ಮಲೋಕವ ನ್ಯೂ ಆಕ್ರಮಿಸಿದುದಾಗಿ ಕೆಲವು ಪುರಾಣಗಳಲ್ಲಿ ಪ್ರಸಿದ್ದಿ ಯು