ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೭೨ ಶ್ರೀಮದ್ರಾಮಾಯಣವು [ಸರ್ಗ ೪೦ಊತದ ಸೃಷ್ಣ ಭಾಗಗಳಲ್ಲಿಯೂ, ಗಿರಿನದಿಗಳಲ್ಲಿಯೂ, ಗುಹೆಗಳಲ್ಲಿಯೂ, ಸೀ ತೆಯನ್ನೂ, ರಾವಣನನ್ನೂ ನೀವು ಹುಡುಕಬೇಕು ಆ ಉದಯಪಕ್ವತದಿಂ ದಾಚೆಗಿರುವ ಪೂರೈದಿಗ್ಟಾಗದಲ್ಲಿ, ಚಂದ್ರಸರಸಂಚಾರವೇ ಇಲ್ಲದೆ, ಅ೦ ಧಕಾರಾವೃತವಾಗಿ ಅದೃಶ್ಯವಾಗಿರುವುದರಿಂದ, ಅಲ್ಲಿಂದಾಚೆಗೆ ನೀವು ಹೋ ಗಲಾರಿರಿ' ಅಲ್ಲಿ ದೇವತೆಗಳುಮಾತ್ರವೇ ವಾಸಮಾಡುತ್ತಿರುವರಲ್ಲದೆ ಬೇರೆ ಬ್ಬರಿಗೆ ಹೋಗಲು ಸಾಧ್ಯವಲ್ಲ ಎಲೆ ಕಪಿವೀರರೆ' ನಾನು ಇದುವರೆಗೆ ಈ ಳಿದ ಸ್ಥಳಗಳಲ್ಲಿಯೇ ಅಲ್ಲದೆ, ನೀವು ಹೋಗುವ ದಾರಿಯಲ್ಲಿ ಕಾಣುವ ಇತರ ಪಕ್ವತಗಳನ್ನೂ, ಗುಹೆಗಳನ್ನೂ, ವನಗಳನ್ನೂ, ದೇಶಗಳನ್ನೂ ಚೆನ್ನಾಗಿ ಹುಡುಕಿ ನೋಡಬೇಕು ನಾನು ಹೇಳದಿದ್ದರೂ ನಿಮ್ಮ ಕಣ್ಣಿಗೆ ಬಿದ್ದ ಕಡೆ ಗಳೆಲ್ಲವನ್ನೂ ಚೆನ್ನಾಗಿ ಪರಿಶೋಧಿಸಬೇಕು ಎಲೈ ವಾನರೋತ್ತಮರೆ ! ವಾನರರಾದ ನಮಗೆ ಆ ಉದಯಸತದವರೆಗೆಮಾತ್ರವೇ ಹೋಗಲು ಸಾ ಧ್ಯವೇಹೊರತು, ಅದರ ಮುಂದಿನ ಪ್ರದೇಶದಲ್ಲಿ ಸೂರ ಸಂಚಾರವಾಗಲಿ, ಗ್ರಾಮನಗರ, ಪಕ್ವತಾರಣ್ಯಗಳೆಂಬ ವಿಭಾಗಗಳಾಗಲಿ ಇಲ್ಲದಿರುವುದರಿಂದ ಅದರ ಸ್ವರೂಪವೇ ನಮಗೆ ತಿಳಿಯದು ಹೇಗಾದರೂ ನೀವು ಆ ಉದಯಾ ಕ್ರಿಯವರಗೆ ಹೋಗಿ, ಸೀತೆಯಾಗಲಿ, ರಾವಣನಾಗಲಿ ಇರುವ ಸ್ಥಳವನ್ನು ತಿಳಿದು, ಇನ್ನೊಂದು ತಿಂಗಳೊಳಗಾಗಿಯೇ ಹಿಂತಿರುಗಿ ಬರಬೇಕು ಎಂದು ತಿಂಗಳಿಗಿಂತ ಒಂದು ಮುಹೂರ್ತಕಾಲವಾದರೂ ವೀರಕೂಡದು ಅಷ್ಯ ರಲ್ಲಿ ಬಾರದವರು ನನ್ನಿಂದ ಮರಣದಂಡನೆಗೆ ಪಾತ್ರರಾಗುವರು ಮುಖ್ಯ ವಾಗಿ ನೀವು ಸೀತೆಯನ್ನು ಹುಡುಕಿ ಕಾರೈಸಿದ್ದಿಯನ್ನು ಹೊಂದಿ ಬರಬೇಕು ಎಲೆ ವಾನರೋತ್ತಮರೆ ' ನಾನಾವಿಧವನಸಮೂಹಗಳಿಂದ ಶೋಭಿಸು ತ್ರ, ಮಹೇಂದ್ರನಿಗೆ ಪ್ರಿಯವಾದ ಪೂರದಿಕ್ಕಿನ ಪ್ರದೇಶಗಳೆಲ್ಲವನ್ನೂ ಸು , ನೀವು ರಾಮನ ಪ್ರಿಯಪತ್ತಿ ಯನ್ನು ಕಂಡುಹಿಡಿದರೆ ನಿಮಗೆ ಸುಖವುಂ ಟು ” ಎಂದನು ಇಲ್ಲಿಗೆ ನಾಲ್ವತ್ತನೆಯ ಸರ್ಗವು