ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪೧ ] ಕಿಷಿಂಧಾಕಾಂಡವು ೧೫೭೩ { ಸುಗ್ರೀವನು ಹನುಮದಾದಿಗಳನ್ನು ದಕ್ಷಿಣದಿಕ್ಕಿಗೆ ಕಳುಹಿಸಿದುದು ಹೀಗೆ ಸುಗ್ರೀವನು ಆ ದೊಡ್ಡವಾನರಸೈನ್ಯವನ್ನು ಪೂತ್ವದಿಕ್ಕಿಗೆ ಕಳುಹಿಸಿದಮೇಲೆ, ಅನೇಕಯುದ್ಧಗಳಲ್ಲಿ ಪ್ರಖ್ಯಾತವಾದ ವೀಠ್ಯವುಳ್ಳ ಮ ತೆ ಕೆಲವು ವಾನರರನ್ನು ದಕ್ಷಿಣಾಭಿಮುಖವಾಗಿ ಕಳುಹಿಸಿದನು ನಾನರೇಂ ದ್ರನಾದ ಸುಗ್ರೀವನು ವಾನರರ ಬಲತಾರತಮ್ಯವನ್ನು ಚೆನ್ನಾಗಿ ಬಲ್ಲವ ನಾದುದರಿಂದ, ಅಗ್ನಿ ಪುತ್ರನಾದ ನೀಲನನ್ನೂ, ಹನುಮಂತನನ್ನೂ, ಬ್ರಹ್ಮ ಪುತ್ರನಾಗಿ ಬಹಾಬಲಾಡ್ಯನೆನಿಸಿಕೊಂಡ ಜಾಂಬವಂತನನ್ನೂ, ಮತ್ತು ಸು ಹೋತ್ರ, ಶರಾರಿ, ಶರಗು ಗಜ, ಗವಾಕ್ಷ, ಗವಯ, ಸುಷೇಣ, ಋಷಭ, ಮೈಂದ, ದ್ವಿವಿದ, ವಿಜಯ, ಗಂಧಮಾದನ ಮುಂತಾದವರನ್ನೂ, ಅಗ್ನಿ ಕು ಮಾರರಾದ ಉಲ್ಫಾ ಮುಖ ಮತ್ತು ಆನಂಗನೆಂಬ ಇಬ್ಬರು ವಾನರವೀರರ ನ್ಯೂ ,ಮತ್ತು ವೇಗದಲ್ಲಿಯೂ, ಪರಾಕ್ರಮದಲ್ಲಿಯೂ ಹೆಸರುಗೊಂಡ ಅಂಗ | ದನೇ ಮೊದಲಾದ ವೀರರನ್ನೂ ಕರೆದು ದಕ್ಷಿಣದಶೆಗೆ ಹೋಗುವುದಕ್ಕಾಗಿ ಆಜ್ಞಾಪಿಸಿದನು ಶೀಘ್ರಗಾಮಿಗಳಾದ ಇನ್ನು ಕೆಲವು ವಾನರಸೈನಿಕರನ್ನು ಇವರ ಸಹಾಯಕ್ಕಾಗಿ ಮುಂದೆ ಕಳುಹಿಸಿಕೊಟ್ಟನು ಆ ವಾನರರಲ್ಲರಿಗೂ ದಕ್ಷಿಣದಿಕ್ಕಿನಲ್ಲಿ ಅವರಿಗೆ ತಿಳಿಯದ ಕೆಲವು ದೇಶಗಳನ್ನು ವಿವರಿಸಿ ತಿಳಿಸುವು ದಕ್ಕಾಗಿ ಅವರನ್ನು ಕುರಿತು, “ಎಲೈ ವಾನರರೆ' ನೀವು ಸಹಸ್ರಶಿಖರಗಳಿಂದ ಶೋಭಿತವಾಗಿ ನಾನಾವಿಧವೃಕ್ಷಗಳಿಗೂ, ಬಗೆಬಗೆಯ ಬಳ್ಳಿಗಳಿಗೂ, ಆಶ್ರ ಯವಾದ *ವಿಂಧ್ಯಪರತವನ್ನೂ , ಮಹಾಸರ್ಪಗಳಿಗೆ ನೆಲೆಯಾಗಿ ದುರ್ಗಮ ವಾದ ನರ ದಾನದಿಯನ್ನೂ , ವಿಂಧ್ಯಪರೂತದ ಸಮೀಪದಲ್ಲಿ ರಮಣೀಯವಾ ದ ಗೋದಾವರೀನದಿಯ ಭಾಗವನ್ನೂ , ಮಹಾನದಿಯಾದ ಕೃಷ್ಣಯನ್ನೂ, ಬಹಳ ಪೂಜ್ಯವಾಗಿಯೂ,ಮಹಾಸರ್ಪಗಳಿಗೆಡೆಯಾಗಿಯೂ ಇರುವ ವರದಾ - * ಇಲ್ಲಿಯೂ ಶರಾವತಿಗೆ ದಕ್ಷಿಕವೆಂದು ಗ್ರಹಿಸಬೇಕು ಮಧ್ಯದೇಶಕ್ಕೆ ನಿಂ ಧ್ವವು ದಕ್ಷಿಣದಲ್ಲಿರುವುದರಿಂದಲೇ ಇಲ್ಲಿ ಅದಕ್ಕೆ ದಕ್ಷಿಣ ವ್ಯಪದೇಶವು ಇದುಮೊದಲು ಕ್ರಮವಾಗಿ ವಿಂಧ್ಯದ ದಕ್ಷಿಣಪಶ್ಚಿಮಭಾಗಗಳಲ್ಲಿರುವ ನದೀನಗರದೇಶಾದಿಗಳನ್ನು ತಿ ಳಿಸಿ, ಮುಂದೆ ವಿದರ್ಭಗಳೇ ಮೊದಲಾದ ಅದರ ಪೂರೈಪ್ರದೇಶಗಳನ್ನೂ ತಿಳಿಸುವನು