ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೭೪ ಶ್ರೀಮದ್ರಾಮಾಯಣವು - [ಸರ್ಗ ೪೧ ನದಿಯನ್ನೂ, ಮೇಖಲೆ, ಉತ್ಕಲೆ ಎಂಬ ನದಿಗಳನ್ನೂ, ಕ್ರಮವಾಗಿ ದಾಟಿ ಹೋಗಬೇಕು ಅದಕ್ಕೆ ಮುಂದಿರುವ ದಶಾರದೇಶದ ಪಟ್ಟಣಗಳನ್ನೂ, ಅಶ್ವವಂತಪುರವನ್ನೂ , ಅಶ್ವಸಮೃದ್ಧಿಯುಳ್ಳ ಅವಂತೀಪುರವನ್ನೂ , ಚೆನ್ನಾ ಗಿ ಹುಡುಕಿ ನೋಡಿರಿ ವಿದರ್ಭ, ಋಷಿಕ, ಮಾಹಿಷಿಕ, ವಂಗ, ಕಳಿಂಗ, ಕೌಶಿಕ, ಮುಂತಾದ ದೇಶಗಳೆಲ್ಲವನ್ನೂ ಚೆನ್ನಾಗಿ ಸುತ್ತಿ, ಒಂದೊಂದು ಕ ಡೆಯನ್ನೂ ಶೋಧಿಸಬೇಕು ಪ್ರತಗಳಿಂದಲೂ, ಗುಹೆಗಳಿಂದಲೂ, ನದಿಗ ಳಿಂದಲೂ, ಶೋಭಿತವಾದ ದಂಡಕಾರಣ್ಯವನ್ನೂ, ಆ ದಂಡಕಾರಣ್ಯದೊಳ ಗಿನ ಗೋದಾವರೀನದಿಯನ್ನೂ ಸುತ್ತಿ ನೋಡಬೇಕು ಹಾಗೆಯೇ ಮುಂದೆ ಆಂಧ್ರದೇಶವನ್ನೂ, ಪುಂಡ್ರಚೋಳಪಾಂಡ್ಯದೇಶಗಳನ್ನೂ, ಕೇರಳದೇಶವ ನ್ನೂ ನೋಡಬೇಕು ಆಮೇಲೆ ಗೈರಿಕಾದಿಧಾತುಗಳಿಂದ ಚಿತ್ರಿತವಾದ ಸ ಹೈಪಲ್ವೇತಕ್ಕ ಹೋಗಿರಿ ' ಆ ಪಕ್ವತವು ವಿಚಿತ್ರತಿಖರಗಳಿಂದಲೂ, ಪಟ್ಟಿ ತಗಳಾದ ಗಿಡಗಳಿಂದಲೂ ತುಂಬಿರುವುದರಿಂದ, ಆದರ ಕಾಡುಳೆಲ್ಲವೂ ಚಿ ತ್ರಿಸಿದಂತೆಯೇ ತೋರುವುವು ಅಲ್ಲಿ ಚಂದನವೃಕ್ಷಗಳು ಹೇರಳವಾಗಿರುವುವು ನೀವು ಆ ಪ್ರತಪ್ರಾಂತಗಳೊಳಗೆಲ್ಲಾ ಸೀತೆಯನ್ನು ಹುಡುಕಿ ನೋಡಬೇ ಕು ಅದರ ನೀರು ಬಹಳ ನಿಕ್ಕಲವಾಗಿರುವುದು ಆ ನದಿಯು ಸದ್ಯ ಮಂಗಳಪ್ರದವಾದುದು ಅನವರತವೂ ಅಪ್ಪರಸ್ಸುಗಳು ಬಂದು ಆ ಪುಣ್ಯನದಿಯನ್ನು ಪೂಜಿಸುತ್ತಿರುವರು ಪ್ರಸಿದ್ಧವಾದ ಆ ಮಲಯಪ ತದ ಶಿಖರದಲ್ಲಿ, ಮಹಾತಪೋನಿಧಿಯಾಗಿ, ಸೂಯ್ಯನಂತೆ ತೇಜೋವಿಶಿಷ್ಟ ನಾದ ಅಗಸ್ಯ ಮಹರ್ಷಿಯನ್ನು ನೋಡಬಹುದು ಮಹಾತ್ಮನಾದ ಆ ಆಗಸ್ಯನನ್ನು ನಮಸ್ಕರಿಸಿ, ಅವನ ಅನುಗ್ರಹವನ್ನು ಪಡೆದು ಮುಂದೆ ಹೋ ರಟರೆ, ವಿಶೇಷವಾಗಿ ಮೊಸಳೆಗಳಿಂದ ತುಂಬಿದ ತಾಮ್ರಪರ್ಣಿಯೆಂಬ ಮ ಹಾನದಿಯು ಸಿಕ್ಕುವುದು ಅದನ್ನೂ ದಾಟಿ ಹೋಗಿರಿ ! ಉಬ್ಬಿದಸ್ತನಗಳು ಕೃ ಒಬ್ಬ ಯುವತಿಯು, ಚಂದನಾದ್ಯನುಲೇಪನಗಳಿಂದ ಮೈಯನ್ನಲಂಕರಿಸಿ ಕೊಂಡು, ತನ್ನ ಪತಿಯ ಸಂಕೇತಸ್ಥಳಕ್ಕೆ ಹೋಗುವಂತೆ, ಚಂದನವನಗಳಿಂ ದ ಪರಿವೃತವಾಗಿ, ನಡುನಡುವೆ ಉಬ್ಬಿದ ದ್ವೀಪಗಳಿಂದ ಶೋಭಿತವಾದ ಆ ತಾಮ್ರಪರ್ಣಿನಡಿಯು ಸಮುದ್ರಾಭಿಮುಖವಾಗಿ ಹೋಗುತ್ತಿರುವುದು ಎ