ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೭೫ ಸರ್ಗ ೪೧.] ಕಿಪ್ಲಿಂಧಾಕಾಂಡವು. ಲೈ ವಾನರರೆ' ಅಲ್ಲಿಂದ ನೀವು ಮುಂದೆ ಹೋದರೆ, ಪಾಂಡ್ಯನಗರದ ದ್ವಾ ರವು ಸಿಕ್ಕುವುದು ಅದರ ಕವಾಟವು ಸುವರ್ಣಮಯವಾಗಿ, ಬೆಲೆಯುಳ್ಳ ಮುತ್ತಿನ ಮಣಿಗಳಿಂದಲಂಕೃತವಾಗಿ ಶೋಭಿಸುತ್ತಿರುವುದನ್ನು ನೋಡಬ ಹುದು ಅಲ್ಲಿಂದ ಮುಂದೆ ಸಮುದ್ರತೀರವನ್ನು ಸೇರಿ,ಮುಂದೆ ಸೀತಾನ್ವೇ ಷಣಕ್ಕಾಗಿ ಆ ಸಮುದ್ರವನ್ನು ದಾಟಬೇಕಾದ ವಿಷಯವನ್ನು ಆಲೋಚಿ ಲಿ ನಿಶ್ಚಯಿಸಿಕೊಳ್ಳಿರಿ' ಅಲ್ಲಿ ಸಮುದ್ರದ ಪಕ್ಕದಲ್ಲಿ ಆಗಸ್ಟ್‌ನಿಂದಿಡಲ್ಪಟ್ಟ ಮಹೇಂದ್ರವೆಂಬ ಒಂದು ಪರತೋತ್ರಮವಿರುವುದು ಅದು ಚಿತ್ರಮಯ ವಾದ ಬಗೆಬಗೆಯ ವೃಕ್ಷಗಳಿಂದಲೂ, ಪುಷ್ಟ ಫಲಾದಿಸಮೃದ್ಧಿಗಳಿಂದಲೂ ನಿಬಿಡವಾಗಿ, ಸುವರ್ಣಮಯವಾಗಿ ಪ್ರಕಾಶಿಸುತ್ತಿರುವುದು ಆ ಪಕ್ವತದ ಒಂದುಭಾಗವು ಮಹಾಸಮುದ್ರದ ಜಲದಲ್ಲಿ ಚಾಚಿಕೊಂಡಿರುವುದು ಅಲ್ಲಿ ಸಮಸ್ತವಿಧಗಳಾದ ಗಿಡುಬಳ್ಳಿಗಳೂ ಬಳದಿರುವುವು ಸಿದ್ಧಚಾರಣಗಂಧ ಕ್ಯಾಸ್ಪರಸ್ಸುಗಳೇ ಮೊದಲಾದ ಸಮಸ್ತದೇವಜಾತಿಯವರೂ ಅದರಲ್ಲಿ ನಿತ್ಯವಾಸಮಾಡುತ್ತಿರುವರು ಆ ಪಕ್ವತವು ಅತಿಮನೋಹರವಾಗಿರುವುದು ದೇವೇಂದ್ರನು ಪ್ರತಿಪಕ್ಷ ಕಾಲಗಳಲ್ಲಿಯೂ ತಪ್ಪದೆ ಸಮುದ್ರಸ್ನಾ ನಾರ ವಾಗಿ ಆ ಪಕ್ವತಪ್ರಾಂತಕ್ಕ ಬರವನು ಆ ಸಮುದ್ರದ ಈ ಕಡೆಯ ತೀರ ದಲ್ಲಿ.ಶತಯೋಜನವಿಸ್ತೀರ್ಣವಾಗಿ ಮನುಷ್ಯರಿಗೆ ದುಷ್ಟವೇಶವಾದ ಒಂ ದು(ಲಂಕಾ)ದ್ವೀಪವಿರುವುದು ಆ ದ್ವೀಪದಲ್ಲಿ ಸ್ವಲ್ಪ ಮಾತ್ರವನ್ನೂ ಬಿಡದೆ ಸುತ್ತಲೂ ಸೀತೆಯನ್ನು ಹುಡುಕಬೇಕು ಇತರಸ್ಥಳಗಳಿಗಿಂತಲೂ ವಿಶೇಷ ವಾಗಿ ನಿಮ್ಮ ಸಮಸ್ತ ಪ್ರಯತ್ನಗಳಿಂದಲೂ ಅಲ್ಲಿ ಸೀತಾದೇವಿಯನ್ನು ಹು ಡುಕಬೇಕು ಏಕಂದರೆ, ದುರಾತ್ಮನಾಗಿಯೂ, ಇಂದ್ರಪರಾಕ್ರಮವುಳ್ಳವ ನಾಗಿಯೂ, ರಾಕ್ಷಸಪ್ರಭುವಾಗಿಯೂ,ನಮ್ಮ ಕೊಲೆಗೆ ಪಾತ್ರನಾಗಿಯೂ ಇರುವ *ರಾವಣನಿಗೆ ಅದೇ ವಾಸ್ಥಳವು ಆ ದ್ವೀಪಕ್ಕೆ ಉತ್ತರದಲ್ಲಿ ದಕ್ಷಿಣ

  • ಸುಗ್ರೀವನು ರಾವಣನಿವಾಸವು ಈ ಲಂಕೆಯೆಂದೇ ತಿಳಿದಿರುವಾಗ,ಬೇರೆ ದಿಕ್ಕು ಗಳಿಗೂ ವಾನರರನ್ನು ಕಳುಹಿಸಿದುದೇಕೆ” ಎಂದರೆ, ರಾವಣನು ಸೀತೆಯನ್ನು ಕದ್ದು ಬಹಳದಿನಗಳಾದುದರಿಂದ,ಇಷ್ಟರೊಳಗಾಗಿ ಬೇರೆಲ್ಲಿಗಾದರೂ ಸಾಗಿಸಿಬಿಟ್ಟಿರಬಹುದೆಂ ಬ ಶಂಕೆಯಿಂದಲೇ ಹೊರತು ಬೇರೆಯಲ್ಲ ಹಾಗೆ ಮೊದಲೇ ತಿಳಿದಿದ್ದರೆ ಹಿಂದೆ ರಾಮನು

ಇರುವ “ಕಾಳಸಪ್ರಭುವಾಗಿಯೂ, ಇಂದ್ರಪರಾಕು ಹು - -