ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೭೮ ಶ್ರೀಮದ್ರಾಮಾಯಣವು (ಸರ್ಗ ೪೧ ಶೋಭಿಸುತ್ತಿರುವುದು ಆ ಪಕ್ವತದಲ್ಲಿ ದಿವ್ಯವಾದ ಚಂದನವೃಕ್ಷಗಳು ಹೇ ರಳವಾಗಿ ಹುಟ್ಟುವುವು ಅವುಗಳಲ್ಲಿ ಕೆಲವು ಗೋರೋಚನದ ಬಣ್ಣದಿಂದ ಲೂ, ಮತ್ತೆ ಕೆಲವು ತಾವರೆಯಸಳಿನ ಬಣ್ಣದಿಂದಲೂ, ಮತ್ತೆ ಕೆಲವು ಎಲೆ ಹಸುರಿನ ಬಣ್ಣದಿಂದಲೂ,ಇನ್ನು ಕೆಲವು ಕೆಂಡದಂತೆ ಕೆಂಪುಬಣ್ಣದಿಂದಲೂ ಶೋಭಿಸುತ್ತಿರುವವು ನೀವು ಆ ಚಂದನವೃಕ್ಷಗಳನ್ನು ನೋಡಿದರೂ ಅವು ಗಳಿಗೆ ಆಸೆಪಟ್ಟು ಯಾವಾಗಲೂ ಎಷ್ಟು ಮಾತ್ರವೂ ಕೈಹಾಕಬಾರದು ಭಯಂಕರಾಕಾರವುಳ್ಳ ಲೋಹಿತರೆಂಬ ಕೆಲವು ಗಂಧರೂರು ಆ ಚಂದನ ವನಕ್ಕೆ ಕಾವಲಾಗಿರುವರು ಆ ಋಷಭಪತದಲ್ಲಿ, ಶೈಲೂಷ, ಗ್ರಾಮಣಿ, ಶಿಗು ಶುಭ್ರ, ಬಭ್ರು, ಎಂಬ ಐದುಮಂದಿ ಗಂಧರಾಜರು ಸೂರತೇಜ ಸ್ಸುಳ್ಳವರಾಗಿ ಜ್ವಲಿಸುತ್ತಿರುವರು ಪುಣ್ಯಕಮ್ಮಕಳನ್ನು ಮಾಡಿ ಸದ್ಧತಿಯನ್ನು ಹೊಂದಿದವರಲ್ಲಿಯೂ, ಕೆಲವರು ಸೂರತೇಜಸ್ಸಿನಿಂದಲೂ, ಕೆಲವರು ಚಂ ದ್ರಕಾಂತಿಯಿಂದಲೂ, ಮತ್ತೆ ಕೆಲವರು ಅಗ್ನಿ ತೇಜಸ್ಸಿನಿಂದಲೂ ಕೂಡಿ ಆ ಪ ರೈತದಲ್ಲಿ ವಾಸಮಾಡುತ್ತಿರುವರು ಪ್ರಳಯಕಾಲದಲ್ಲಿ ಭೂಮಿಯು ನಾಶ ಹೊಂದುವಾಗ, ಸ್ವರ್ಗಾದಿಲೋಕಗಳನ್ನು ಹೊಂದಿದ ಕಲವುಮಹಾಪುರುಷ ರು ಇತರರಿಗೆ ಅಗೋಚರವಾದ ತೇಜಸ್ಸಿನಿಂದ ಪ್ರಕಾಶಿಸುವ ಆ ಪತದಲ್ಲಿ ಸೇರಿ ವಾಸಮಾಡುವರು ಆ ಪತದಿಂದಾಚೆಗೆ ಬಹಳ ಭಯಂಕರವಾದ ಪಿತೃಲೋಕವಿರುವುದು ಅದೇ ಯಮನ ರಾಜಧಾನಿಯು ಇದರಲ್ಲಿ ಯಾ ವಾಗಲೂ ಭಯಂಕರವಾದ ಗಾಢಾಂಧಕಾರವು ವ್ಯಾಪಿಸಿರುವುದರಿಂದ, ನಿ ಮಗೆ ಅಲ್ಲಿ ಪ್ರವೇಶಿಸಲು ಸಾಧ್ಯವಿಲ್ಲ ಎಲೈ ವಾನರರೆ'ನೀವು ಮಹಾವೀರರಾ ಗಿದ್ದರೂ, ಇಷ್ಟು ದೂರದವರೆಗೆ ಮಾತ್ರವೇ ಹೋಗಿ ಹುಡುಕುವುದಕ್ಕೆ ಸಾ ಧ್ಯವೇಹೊರತು ಮುಂದೆ ಹೋಗಲಾರಿರಿ' ಇಲ್ಲಿಂದ ಮುಂದಕ್ಕೆ ಎಷ್ಟೆ ಗಮನಶಕ್ತಿಯುಳ್ಳವರಿಗೂ ಹೋಗಲು ಸಾಧ್ಯವಾಗದು ಈಗ ನಾನು ಇದುವರೆಗೆ ಹೇಳಿದ ಸ್ಥಳಗಳನ್ನು ಮಾತ್ರವೇ ಅಲ್ಲದೆ, ನಾನು ಹೇಳದಿದ್ದ ರೂ, ಅಲ್ಲಲ್ಲಿ ನಿಮಗೆ ಗೋಚರಿಸುವ ಇತರಸ್ಥಳಗಳೆಲ್ಲವನ್ನೂ ನೀವು ಚೆನ್ನಾಗಿ ಹುಡುಕಿನೋಡಿ, ಸೀತಾದೇವಿಯ ವೃತ್ತಾಂತವನ್ನು ತಿಳಿದು ಹಿಂತಿರುಗಿ ಬರ ಬೇಕು ಒಂದುತಿಂಗಳೊಳಗಾಗಿ ನಿಮ್ಮಲ್ಲಿ ಯಾವನು ಹಿಂತಿರುಗಿ ಇಲ್ಲಿಗೆ ಬಂದು ಸಿಕ್ಕಿದಳು ಸೀತೆ” ಎಂಬೀ ಎರಡುಮಾತುಗಳನ್ನಾದರೂ ನನ್ನ