ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೯ ಸರ್ಗ ೪> | ಕಿಷಿಂಧಾಕಾಂಡವ ಕಿವಿಗೆ ಬೀಳಿಸುವನೋ, ಅವನು ನನಗೆ ಸಮಾನವಾದ ವೈಭವಗಳನ್ನೇ ಹೊಂದಿ ಸುಖಿಸುವನು ಅವನಿಗಿಂತಲೂ ನನಗೆ ಬೇರೊಬ್ಬನು ಪ್ರಿಯನಲ್ಲ ಅಂತವನೇ ನನಗೆ ಪ್ರಾಣಿಗಳಿಗಿಂತಲೂ ಮೇಲೆನಿಸುವನು ಅವನು ಬೇರೆ ಯಾವವಿಧದಲ್ಲಿಯಾದರೂ, ಎಷ್ಟೇ ಅಪರಾಧಗಳನ್ನು ಮಾಡಿದ್ದರೂ ನನಗೆ ಬಂಧುವಂತೆ ಇಷ್ಯನೇ ಆಗುವನು ಎಲೈ ವಾನರರೆ ' ನೀವಾದರೋ ಎಣೆ ಯಿಲ್ಲದ ಪರಾಕ್ರಮವುಳ್ಳವರು ಶಲ್ಯಥೈಲ್ಯಾ ದಿಸಮಸ್ತಗುಣಗಳಿಂದಲೂ ಪ್ರಖ್ಯಾತವಾದ ಸತ್ಕುಲದಲ್ಲಿ ಜನಿಸಿದವರು ರಾಜಪುತ್ರಿಯಾದ ಸೀತೆಯು ಸಿಕ್ಕುವುದಕ್ಕೆ ನಿಮ್ಮಿಂದ ಸಾಧ್ಯವಾದ ಪುರುಷಪ್ರಯತ್ನ ವೆಲ್ಲವನ್ನೂ ಮಾಡ ಬೇಕು” ಎಂದನು ಇಲ್ಲಿಗೆ ನಾಲ್ವತ್ತೊಂದನೆಯ ಸರ್ಗವು ಸುಷೇಣನೇ ಮೊದಲಾದ ವಾನರರನ್ನು ಪಶ್ಚಿಮದಿಕ್ಕಿಗೆ ಕಳುಹಿಸಿದುದು ಹೀಗೆ ಸುಗ್ರೀವನು ಹನುಮದಾದಿವಾನರರನ್ನು ದಕ್ಷಿಣದಿಕ್ಕಿಗೆ ಹೊ ರಡುವಂತೆ ನಿಯಮಿಸಿ, ಆಮೇಲ ಮೇಫುದಂತೆ ಕಪ್ಪಾದ ದೂಡ್ಡ ಆಕಾರ ವುಳ್ಳ ಸುಷೇಣನೆಂಬ ಕಪಿಯೂಧಪನನ್ನು ನೋಡಿ, ತಾರೆಗೆ ತಂದೆಯಾಗಿ ಯೂ, ತನಗೆ ಮಾವನಾಗಿಯೂ, ಭಯಂಕರಪರಾಕ್ರಮವುಳ್ಳವನಾಗಿಯೂ ಇರುವ ಆ ಸುಷೇಣನಿಗೆ ನಮ್ರತೆಯಿಂದ ನಮಸ್ಕರಿಸಿ, ಅವನ ಮುಂದೆ ಕೈ ಮುಗಿದು ನಿಂತು, ಹಾಗೆಯೇ ಕಾಂತಿಮಂತನಾಗಿಯೂ, ಅನೇಕ ಕಪಿ ವೀರ ರಿಂದ ಪರಿವೃತನಾಗಿಯೂ, ಇಂದ್ರನಂತೆ ತೇಜಸ್ಸುಳ್ಳವನಾಗಿಯೂ, ಎಣೆಯಿಲ್ಲದ ಬುದ್ಧಿಪರಾಕ್ರಮಗಳುಳ್ಳವನಾಗಿಯೂ, ಗರುಡನಿಗೆ ಸಮಾ ನವಾದ ದೇಹಕಾಂತಿಯುಳ್ಳವನಾಗಿಯೂ ಇದ್ದ ಮರೀಚಪುತ್ರನಾದ ಮಾರೀಚನೆಂಬ ವಾನರಶ್ರೇಷ್ಠನನ್ನೂ , ಮತ್ತು ಅವನ ಪಕ್ಕದಲ್ಲಿದ್ದ ಅವನ ತಮ್ಮಂದಿರಾದ ಮಾರೀಚರೆಂಬ ಮಹಾಬಲಾಡ್ಯರಾದ ಕಪಿಗಳನ್ನೂ ನೋಡಿ ಮರೀಚಋಷಿಯ ಮಕ್ಕಳಾದ ಅವರೆಲ್ಲರನ್ನೂ ಪಶ್ಚಿಮದಿಕ್ಕಿಗೆ ಹೋಗು ವಂತೆ ನಿಯಮಿಸುವವನಾಗಿ, ಅವರನ್ನು ಕುರಿತು ಎಲೈ ವಾನರೋತ್ತಮರೆ' ನೀವೆಲ್ಲರೂ ಪೂಜ್ಯನಾದ ಈ ಸುಷೇಣನನ್ನು ಮುಂದಿಟ್ಟುಕೊಂಡು, ಎರಡು