ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮೦ ಶ್ರೀಮದ್ರಾಮಾಯಣವು [ಸರ್ಗ, ೪೨ ಲಕ್ಷವಾನರರನ್ನು ನಿಮಗೆ ಬೆಂಬಲವಾಗಿಯೂ ಕರೆದುಕೊಂಡು, ಪಶ್ಚಿಮ ದಿಕ್ಕಿನಲ್ಲಿ ಸೀತೆಯನ್ನು ಹುಡುಕಿಬರಬೇಕು ನೀವು ಕ್ರಮವಾಗಿ ಸುರಾಷ್ಟ್ರ ಬಾಹ್ಲಿಕ, ಶೂರ ದೇಶಗಳನ್ನೂ, ಅಲ್ಲಲ್ಲಿ ಸಸ್ಯಾದಿಗಳಿಂದ ತುಂಬಿ ರಮ ನೇಯಗಳಾದ ಬೇರೆ ಜನಪದಗಳನ್ನೂ, ವಿಸ್ತಾರವಾದ ಪಟ್ಟಣಗಳನ್ನೂ , ಪನ್ನಾ ಗವನವನ್ನೂ, ಮತ್ತು ಪಗಡೆ ಮುಂತಾದ ವೃಕ್ಷಗಳಿಂದ ತುಂಬಿದ ಕುಕ್ಷಿದೇಶವನ್ನೂ ಹುಡುಕಬೇಕು ಎಲೈ ವಾನರರೆ' ಅಲ್ಲಲ್ಲಿ ಹೇರಳವಾದ ತಾಳೆಗಿಡಗಳಿಂದ ತುಂಬಿದ ಕಾಡುಗಳು ಬಹಳವಾಗಿರುವುವು ಅವೆಲ್ಲವನ್ನೂ ಸುತ್ತಿ ನೋಡಬೇಕು ಅಲ್ಲಲ್ಲಿ ಪಶ್ಚಿಮಾಭಿಮುಖವಾಗಿ ಪ್ರವಹಿಸುವ ಶೀತಲ ಜಲವುಳ್ಳ ಪವಿತ್ರಗಳಾದ ನದಿಗಳನ್ನೂ , ಮಷಿಗಳ ತಪೋವನಗಳನ್ನೂ, ಅ ರಣ್ಯಗಳನ್ನೂ , ಬೆಟ್ಟಗಳನ್ನೂ, ಹುಡುಕಿ ನೋಡಬೇಕು ಅಲ್ಲಲ್ಲಿ ನಿರ್ಜಲ ವಾದ ಮರುಭೂಮಿಗಳಂಟು ಮಹೋನ್ನ ತಗಳಾದ ಶಿಖರಗಳುಳ್ಳ ಬೆಟ್ಟ ಗಳುಂಟು ಆ ಪತ್ನಿ ಮದಿಕ್ಕಿನ ದಾರಿಯು ಅನೇಕಪರೈತಗಳ ಸಮೂಹದಿಂ ದ ನಿಬಿಡವಾಗಿ ಸಂಚರಿಸುವುದಕ್ಕೂ ಅಸಾಧ್ಯವಾಗಿರುವುದು ಆವಲ್ಲವನ್ನೂ ನೀವು ನಿಮ್ಮ ಸಾಹಸದಿಂದ ದಾಳೆ, ಅಲ್ಲಲ್ಲಿ ಸೀತೆಯನ್ನು ಹುಡುಕುತ್ತ, ಆ ದಿಕ್ಕಿನ ಭೂಪ್ರದೇಶಗಳೆಲ್ಲವನ್ನೂ ದಾಟಿಹೋದ ಮೇಲೆ ನಿಮಗೆ ಸಮಸ ಮುದ್ರವು ಸಿಕ್ಕುವುದು ಆ ಸಮುದ್ರದಲ್ಲಿ ತಿಮಿಗಳೆಂಬ ಮಹಾಮತೃಗಳೂ ಮೊಸಳಗಳೂ ಅನೇಕವಾಗಿರುವುವು ಹೀಗೆ ಆಕ್ಷೇಭ್ಯವಾಗಿಯೂ, ಗಂ ಭೀರವಾಗಿಯೂ ಇರುವ ಆ ಪತ್ತಿಮಸಮುದ್ರತೀರವನ್ನು ಸೇರಿದಮೇಲೆ, ನೀವೂ ನಿಮ್ಮ ಪುಜನರೂ ಅಲ್ಲಲ್ಲಿನ ತಾಳೆಯ ಕಾಡುಗಳಲ್ಲಿಯೂ, ಹೋಂ ಗೆಯ ಕಾಡುಗಳಲ್ಲಿಯೂ, ತೆಂಗಿನ ತೋಟಗಳಲ್ಲಿಯೂ ವಿನೋದದಿಂದ ವಿ ಹರಿಸಬಹುದು ಅಲ್ಲಿನ ತೀರಪ್ರತಗಳಲ್ಲಿಯೂ, ಕಾಡುಗಳಲ್ಲಿಯೂ ಸೀತೆ ಯನ್ನೂ , ರಾವಣನ ಸ್ಥಳವನ್ನೂ ಚೆನ್ನಾಗಿ ಹುಡುಕಬೇಕು ಮತ್ತು ಅಲ್ಲಿ ರುವ ಮುರಚೀಪಟ್ಟಣವನ್ನೂ, ರಮಣೀಯವಾದ ಜಟೇಪುರವನ್ನೂ, ಅವಂ ತಿ, ಅಂಗಲೋಪೆ,ಎಂಬ ಎರಡು ಪಟ್ಟಣಗಳನ್ನೂ ಚೆನ್ನಾಗಿ ಸುತ್ತಿ ನೋಡ ಬೇಕು ಮತ್ತು ಅಲ್ಲಿ ಒಳಗಿರುವ ಜನರೇ ಕೆ: ಣದಂತೆಮರಗಳಿಂದದಟ್ಟವಾ ಗಿ ತುಂಬಿದ ಆಲಕ್ಷಿತವೆಂಬ ಮಹಾರಣ್ಯದಲ್ಲಿ ಪ್ರವೇಶಿಸಿ, ಅಲ್ಲಿಯೂ ಚೆನ್ನಾ ಗಿ ಹುಡುಕಿ ಬರಬೇಕು ಮತ್ತು ಅಲ್ಲಲ್ಲಿರುವ ವಿಸ್ತಾರವಾದ ರಾಷ್ಟ್ರಗಳಲ್ಲಿ