ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪೨ ] ಕಿಷಿಂಧಾಕಾಂಡವು ೧೫೮೧ ಯೂ, ಪಟ್ಟಣಗಳಲ್ಲಿಯೂ ಚೆನ್ನಾಗಿ ಸುತ್ತಿ ನೋಡಬೇಕು ಸಿಂಧನದವು ಸಮುದ್ರವನ್ನು ಸೇರುವ ಸಂಗಮಸ್ಥಳದಲ್ಲಿ ಹೇಮಗಿರಿಯೆಂಬ ದೊಡ್ಡ ಪ ರೈತವೊಂದಿರುವುದು ಅದು ನೂರುಶಿಖರಗಳುಳ್ಳವಾಗಿ ಮಹೋನ್ನ ತಗ ಳಾದ ಅನೇಕವೃಕ್ಷಗಳಿಗೆ ನೆಲೆಯಾಗಿರುವುದು ಮನೋಹರಗಳಾದ ಆ ಪಕ್ಷ ತದ ತಪ್ಪಲುಗಳಲ್ಲಿ ರಕ್ಕೆ ಯುಳ್ಳ ಸಿಹ್ನಗಳುಂಟು ಅವು ತಿಮಿತಿಮಿಂಗಲಾ ದಿ ಮತ್ತ್ವಗಳನ್ನೂ, ಅನೆಗಳನ್ನೂ ಎತ್ತಿಕೊಂಡು ಹೋಗಿ, ಅಲ್ಲಿನ ಮಹಾವೃ ಕ್ಷಗಳ ಕೆಳಗಿರುವ ತಮ್ಮ ಗೂಡುಗಳಲ್ಲಿ ಆಹಾರಾರವಾಗಿ ಬಚ್ಚಿಟ್ಟುಕೊಳ್ಳು ವುವು ಸುತ್ತಲೂ ಜಲಪೂರ್ಣವಾದ ಆ ತೀರಪ್ರದೇಶಗಳಲ್ಲಿಯೂ, ಆ ಹೇ ಮಗಿರಿಪ್ಪತದ ಶಿಖರಗಳಲ್ಲಿಯೂ ಇರುವ ಆನೆಗಳು, ಅಲ್ಲಿ ಸಿಕ್ಕುವ ಆಹಾರ ಸಮೃದ್ಧಿಯಿಂದ ಯಾವಾಗಲೂ ತೃಪ್ತಿ ಹೊಂದಿದುವುಗಳಾಗಿ, ಮದದಿಂದ ಮೈಮರೆತು, ಮೇಫುಧ್ವನಿಯಂತೆ ಗರ್ಜನೆಗಳನ್ನು ಮಾಡುತ್ತ ತಮ್ಮ ಭಯ ವನ್ನೂ ಮರೆತು, ಆ ಸಿಕ್ಕಗಳ ಗೂಡಿನ ಸಮೀಪಕ್ಕೆ ಬಂದು ಅವುಗಳಿಗೆ ತು ತಾಗುವುವು ಆಕಾಶವನ್ನು ಮುಟ್ಟುವಂತೆ ಮಹೋನ್ನತವಾಗಿಯೂ, ಸು ವರ್ಣಮಯವಾಗಿಯೂ, ಚಿತ್ರವಿಚಿತ್ರಗಳಾದ ಮರಗಳಿಂದ ತುಂಬಿರುವಾ ಗಿಯೂ ಇರುವ ಆ ಹೇಮಪರತದ ಒಂದೊಂದು ಶಿಖರವನ್ನೂ, ನೀವು ಕಾಮರೂಪಿಗಳಾದ ನಿಮ್ಮ ನಿಮ್ಮ ವಾನರಸೈನ್ಯಗಳೊಡನೆ ಚೆನ್ನಾಗಿ ಹು ಡುಕಿ ನೋಡಬೇಕು ಎಲೈ ವಾನರರೆ ! ನೀವು ಆ ಪತ್ತೆ ಮಸಮುದ್ರದಲ್ಲಿ ಸ್ವಲ್ಪ ದೂರದವರೆಗೆ ಹೋದರೆ, ಅದರ ನಡುವೆ ಸುವರ್ಣಮಯವಾಗಿಯೂ ನೂರಯೋಜನಗಳ ವಿಸ್ತಾರವುಳ್ಳುದಾಗಿಯೂ, ತೇಜೋವಿಶೇಷದಿಂದ ನೋಡಲಸಾಧ್ಯವಾಗಿಯೂ ಇರುವ ಪಾಯಾತ್ರವೆಂಬ ಪಕ್ವತದ ಶಿಖರ ವನ್ನೂ ಕಾಣುವಿರಿ ಆ ಶಿಖರದಲ್ಲಿ ಬಲಾಡ್ಯರಾಗಿಯೂ, ಅಗ್ನಿ ಯಂತೆ ತೀ ಕ್ಷರಾಗಿಯೂ ಭಯಂಕರಸ್ವರೂಪವುಳ್ಳವನಾಗಿಯೂ, ತಮಗಿಷ್ಟಬಂದ ರೂಪವನ್ನು ಹೊಂದಬಲ್ಲವರಾಗಿಯೂ ಇರುವ ಮಹಾವೇಗಶಾಲಿಗಳಾದ ಇಪ್ಪತ್ತುನಾಲ್ಕು ಕೋಟೆಗಂಧತ್ವರು ವಾಸಮಾಡುತ್ತಿರುವರು ಅವರು ಅಲ್ಲಲ್ಲಿ ಸಾವಿರಾರುಸಂಖ್ಯೆಯಿಂದ ಗುಂಪುಗುಂಪಾಗಿರುವರು ನಿಮ್ಮಲ್ಲಿ ಎ ಪೈ ಪರಾಕ್ರಮವುಳ್ಳವರಾದರೂ ಅವರ ಸಮೀಪಕ್ಕೆ ಹೋಗಕೂಡದು.