ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪೨ ] ಕಿಷಿಂಧಾಕಾಂಡವು ೧೫೮೫ ಮಾತ್ರವೇ,ಕತ್ತಲೆಯನ್ನು ನೀಗಿಸಿ ಪ್ರಕಾಶವುಂಟುಮಾಡಿ ಆ ಆಸ್ತಗಿರಿಯಲ್ಲಿ ಯ ಸೇರಿಬಿಡುವನು ಎಲೈ ವಾನರೋತ್ತಮರೆ' ಅದುವರೆಗೆ ಮಾತ್ರವೇ ನಿ ಮಗೆ ಸಂಚರಿಸಿಬರುವುದಕ್ಕೆ ಸಾಧ್ಯವು ಅದರಿಂ ಪ• ಚೆಗೆ ಸೂರಸಂಚಾರವಿಲ್ಲ ದೆ, ಕತ್ತಲೆಕವಿದು, ನಗರಗ್ರಾಮಗಳೇ ಮೊದಲಾದ ಎಲ್ಲಗಳೂ ಇಲ್ಲ ದುದರಿಂದ,ಅಲ್ಲಿ ಏನಿರುವುದೋ ನನಗೆ ತಿಳಿಯಲಾರದು ನೀವು ಅಸ್ತ್ರಗಿರಿಯ ವರೆಗೆ ಮಾತ್ರ ಹೋಗಿ ಸೀತೆಯನ್ನೂ,ರಾವಣನ ಸ್ಥಲವನ್ನೂ ಕಂಡುಹಿಡಿದು, ಇನ್ನೊಂದು ತಿಂಗಳೊಳಗಾಗಿ ಇಲ್ಲಿಗೆ ಹಿಂತಿರುಗಿಬಂದು ಸೇರಬೇಕು ಒಂ ದು ತಿಂಗಳಿಗೆ ಮೇಲೆ ನಿಲ್ಲಕೂಡದು ಅಷ್ಟರಲ್ಲಿ ಹಿಂತಿರುಗಿಬಾರದವ ರು ನನ್ನಿಂದ ಮರಣದಂಡನೆಗೆ ಪಾತ್ರರಾಗುವರು ನಿಮ್ಮೊಡನೆ ನನ್ನ ಮಾ ವನಾದ ಸುಷೇಣನು ಬರುವನು ನೀವು ಇವನ ಆಜ್ಞೆಗೆ ಬದ್ಧರಾಗಿ ಅವನು ಹೇಳಿದಂತೆ ನಡೆದುಕೊಳ್ಳಬೇಕು? ವಾನರೋತ್ತಮನಾಗಿಯೂ ಪೂಜ್ಯನಾಗಿ ಯೂ ಇರುವ ಈ ಸುಷನು, ಎಣೆಯಿಲ್ಲದ ಬಲವುಳ್ಳವನಾಗಿ ಮಹಾಭುಜ ನೆಂಬ ಖ್ಯಾತಿಯನ್ನು ಹೊಂದಿರುವನು ನೀವೂ ಬಹಳಪರಾಕ್ರಮವುಳ್ಳವ ರು ನೀವೆಲ್ಲರು ಕಲತು ಮುಂದಿನ ಕಾರ್ಯಗಳ ವ್ಯವಸ್ಥೆಯನ್ನು ಮಾಡಿಕೊ ಳ್ಳಬೇಕು ಮುಖ್ಯವಾಗಿ ನೀವು ಈ ಸುಷೇಣನನ್ನು ನಿಮಗೆ ಮುಂದಾಳಾಗಿ ಟ್ಟುಕೊಂಡು, ಅವನ ಇಚ್ಛೆಗೆ ವಿಧೇಯರಾಗಿ ಈ ಪಶ್ಚಿಮದಿಕ್ಕಿನಲ್ಲಿ ಸೀತೆಯ ನ್ಯೂ , ರಾವಣನನ್ನೋ ಹುಡುಕಿಬರಬೇಕು ರಾಮಪ ಯಾದ ಆ ಸೀತೆಯ ನ್ನು ನೀವು ಹೇಗಾದರೂ ಕಂಡು ಹಿಡಿದು ಹಿಂತಿರುಗಿಬಂದರ, ಆಗ ರಾಮ ನು ನಮಗೆ ಮಾಡಿದ ಉಪಕಾರಕ್ಕೆ ನಾವೂ ತಕ್ಕ ಪ್ರತ್ಯುಪಕಾರವನ್ನು ಮಾ ಡಿದಂತಾಗುವುದು ಆಗಲೇ ನಾವೂ ಕೃತಾರ್ಥರಾಗುವೆವು ಎಲೈ ವಾನರ ಈ ' ಇದುವರೆಗೆ ನಾನು ಹೇಳಿದುದು ಮಾತ್ರವಲ್ಲದೆ, ಇನ್ನೂ ನಿಮ್ಮ ಕಾರ್ ಕ್ಕೆ ಸಾಧಕವಾದ ಬೇರೆಯಾವಮಾರ್ಗವಾದರೂ ಇದ್ದರೆ, ಅದನ್ನೂ ನೀವು ಚೆನ್ನಾಗಿ ವಿಮರ್ಶಿಸಿ, ದೇಶಕಾಲಗಳನ್ನೂ, ಕಾಹ್ಯಾಕಾರಗಳನ್ನೂ ಪರಿಶೀಲಿ ಸಿ ನಡೆದುಕೊಳ್ಳಬೇಕು”ಎಂದನು, ಹೀಗೆ ಯುಕ್ತಿಯುಕ್ತವಾದ ಸುಗ್ರೀವನ ಆಜ್ಞೆಯನ್ನು ಸುಷೇಣನೇ ಮೊದಲಾದ ವಾನರರೆಲ್ಲರೂ ಗೌರವದಿಂದ ಪ್ರ 200