ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮೬ ಶ್ರೀಮದ್ರಾಮಾಯಣವು [ಸರ್ಗ ೪೩. ಆಗ್ರಹಿಸಿ, ಆತನ ಅನುಮತಿಯನ್ನು ಪಡೆದು ವರುಣಪಾಲಿತವಾದ ಪತ್ನಿ ಮದಿಕ್ಕಿಗೆ ಹೊರಡಲು ಸಿದ್ಧರಾದರು ಇಲ್ಲಿಗೆ ನಾಲ್ವತ್ತೆರಡನೆಯ ಸರ್ಗವು ಶತಬಲಿ ಮೊದಲಾದ ವಾನರರನ್ನು ಉತ್ತರದಿಕ್ಕಿಗೆ ). {w ಕಳುಹಿಸಿದದು ಧರ ಜ್ಞನಾಗಿಯೂ, ಕಪಿರಾಜನಾಗಿಯೂ ಇರುವ ಸುಗ್ರೀವನು, ಹೀಗೆ ತನ್ನ ಮಾವನಾದ ಸುಷೇಣನನ್ನು ಪಶ್ಚಿಮಕ್ಕಿಗೆ ಹೋಗುವಂತೆ ಪ್ರಾರ್ಥಿಸಿ ಕಳುಹಿಸಿದಮೇಲೆ, ಶತಬಲಿಯಂಬ ಮತ್ತೊಬ್ಬ ಯೋಧಪತಿಯ ನ್ನು ನೋಡಿ, ತನಗೆ ಶ್ರೇಯಸ್ಕರವಾಗಿಯೂ, ರಾಮನಿಗೆ ಹಿತಕರವಾಗಿಯೂ ಇರುವ ಮಾತುಗಳಿಂದ (“ಎಲೈ, ವೀರನೆ ! ನೀನು, ನಿನ್ನ೦ತಯ ಬಲಯುಕ್ತ ರಾದ ಲಕ್ಷವಾನರರೊಡಗೂಡಿ, ಯಮಪುತ್ರರಾದ ನಿನ್ನ ಮಂತ್ರಿಗಳನ್ನೂ ಸಂಗಡಲೇ ಕರೆದುಕೊಂಡು, ಈಗಲೇ ಪ್ರಯಾಣಮಾಡಬೇಕು ನೀವೆಲ್ಲರೂ ವಿಶಾಲವಾಗಿಯೂ ಹಿಮವತ್ಸರೈತಶ್ರೇಣಿಗಳಿಂದಲಂಕೃತವಾಗಿಯೂ ಇ ರುವ ಉತ್ತರದಿಕ್ಕಿಗೆಹೋಗಿ, ಅಲ್ಲಿ ರಾಮಪತ್ನಿ ಯಾದ ಸೀತೆಯನ್ನು ಹುಡು ಕಿಬರಬೇಕು ಎಲೈ ವಾನರರೆ' ಸೀವು ಕಾಠ್ಯಸ್ವರೂಪವನ್ನು ಬಲ್ಲವರಲ್ಲಿ ಮೇ ಲೆನಿಸಿಕೊಂಡಿರುವವರಾದುದರಿಂದ,ಸೀವು ಈ ಕಾರಸಿದ್ಧಿಯನ್ನು ಹೊಂದಿ ಸೀತೆಯನ್ನು ತಂದು ರಾಮನಿಗೊಪ್ಪಿಸಿದ ಪಕ್ಷದಲ್ಲಿ, ನಾವೆಲ್ಲರೂ ಋಣಮು ಕರಾಗಿ ಕೃತಾರ್ಥರಾಗುವೆವು ಮಹಾತ್ಮನಾದ ರಾಮನು ಮೊದಲೇ ನಮಗೆ ಉಪಕಾರವನ್ನು ಮಾಡಿರುವನು ಅದಕ್ಕೆ ತಕ್ಕಂತೆ ನಾವೂ ಅವನಿಗೆ ಪ್ರ ತ್ಯುಪಕಾರವನ್ನು ಮಾಡಿ, ಅವನ ಮನಸ್ಸಿಗೆ ಸಂತೋಷವನ್ನು ಉಂಟುಮಾಡಿದ ಹೊರತು ನಮ್ಮ ಜನ್ಮವು ಸಾರ್ಥಕವಾಗಲಾರದು ಮೊದಲು ನಮಗೆ ಯಾ ವುದೊಂದುಪಕಾರವನ್ನೂ ಮಾಡದಿದ್ದರೂ, ನಮ್ಮಲ್ಲಿ ಕಾರ್ಯಾರ್ಥಿಗಳಾಗಿ ಬಂದವರ ಕೋರಿಕೆಯನ್ನು ಈಡೇರಿಸಿ ಕೊಡುವುದರಿಂದ ನಮ್ಮ ಜನ್ಮ ವೇ ಸಾರ್ಥಕವಾಗುವುದು ಹೀಗಿರುವಾಗ ನಮಗೆ ಮೊದಲು ಉಪಕಾರಮಾಡಿ ದವನೇ ತನ್ನ ಕಾಠ್ಯವನ್ನು ನೆರವೇರಿಸಬೇಕೆಂದು ಕೇಳಿಕೊಳ್ಳುವಾಗ, ಪ್ರ ತ್ಯುಪಕಾರರೂಪವಾಗಿಯಾದರೂ ಅವನಕಾಲ್ಯವನ್ನು ಈಡೇರಿಸಿಕೊಡುವು ದರಿಂದ ನಾವು ಕೃತಾರ್ಥರಾಗುವೆವೆಂಬುದನ್ನು ಹೇಳಬೇಕಾದುದೇನು ?