ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮೬ ಸರ್ಗ, ೪೩ ] ಕಿಷಿಂಧಾಕಾಂಡವು. ನೀವು ನನಗೆ ಪ್ರಿಯವನ್ನೂ , ಹಿತವನ್ನೂ ಕೋರುವವರಾದುದರಿಂದ, ಪ್ರ, ತ್ಯುಪಕಾರರೂಪವಾದ ಈ ಕಾರ್ಯಕ್ಕೆ ಮನಃಪೂರ್ವಕವಾಗಿ ಪ್ರಯತ್ನಿಸಿ, ಸೀತೆಯನ್ನು ಕಂಡುಹಿಡಿಯುವವಿಷಯದಲ್ಲಿ ಸಾಧ್ಯವಾದಷ್ಟು ಸಾಹಸವನ್ನು ಮಾಡಬೇಕು ಪರಂತಪನಾಗಿ ಪುರುಷೋತ್ತಮನೆನಿಸಿಕೊಂಡ ಈ ರಾಮ ನಾದರೋ ಸಮಸ್ತಭೂತಗಳಿಗೂ ಪೂಜ್ಯನು ನಮ್ಮಲ್ಲಿಯೂ ವಿಶೇಷ ತಿಯುಳ್ಳವನು. ಆದುದರಿಂದ ಇವನ ಕಾರ್ಯವನ್ನು ನಾವು ಮುಖ್ಯವಾಗಿ ನೆರವೇರಿಸಬೇಕು ನೀವು ಈ ಉತ್ತರದಿಕ್ಕಿಗೆ ಹೊರಟು, ಅಲ್ಲಿರುವ ಮೈಚ್ಛ, ಪಳಿಂದ, ಶೂರಸೇನ, ಪ್ರಸ್ಥಲಗಳೆಂಬ ದೇಶಗಳನ್ನೂ, ಇಂದ್ರಪ್ರಸ್ಥಾದಿ ಭರತ ದೇಶಗಳನ್ನೂ, ದಕ್ಷಿಣಕುರುದೇಶವನ್ನೂ , ಮದ್ರ,ಕಾಂಭೋಜ ಯವ ನ ಶಕದೇಶಗಳನ್ನೂ, ಆರವ್ವಕ, ಬಾಹ್ಲಿಕ, ಋಷಿಕ, ಪೌರವ, ಚಂಬಣ ಚೀನ, ಪರಮಚೀನ, ವಿಹಾರ, ದರದಗಳೆಂಬ ದೇಶಗಳನೂ, ಹಿಮವತ್ಪರ್ವ ತವನ್ನೂ , ಸುತ್ತಿನೋಡಿ, ಆಮೇಲೆ ಅಲ್ಲಿನ ದುರ್ಗಮಾರಣ್ಯಗಳನ್ನೂ ನಡಿಗ ಳನ್ನೂ, ಇತರಪರ್ವತಗಳನ್ನೂ ನಿಮ್ಮ ಪರಾಕ್ರಮದಿಂದಲೂ, ಬುದ್ದಿಚಾ ತುರದಿಂದಲೂ ಸಂಪೂರ್ಣವಾಗಿ ಪರಿಶೋಧಿಸಿನೋಡಬೇಕು ಅಲ್ಲಿನ ಲೋ ಗ್ರಕ, ಪದ್ಯ ಕ, ದೇವದಾರು ಮುಂತಾದ ಮರಗಳ ತೋಪುಗಳಲ್ಲಿಯೂ ಸೀ ತಾದೇವಿಯನ್ನೂ ರಾವಣನಿವಾಸವನ್ನೂ ಹುಡುಕಿನೋಡಿರಿ ! ಅಲ್ಲಿಂದಾಚೆ ಗೆ ದೇವಗಂಧರ್ವಸೇವಿತವಾದ ಸೋಮಾಶ್ರಮಕ್ಕೆ ಹೋಗಿ, ಅಲ್ಲಿಂದ ಮುಂ ದೆ ದೊಡ್ಡ ತಪ್ಪಲುಗಳಿಂದೊಪ್ಪತ್ತಿರುವ ಕಾಳಪಕ್ವತವನ್ನು ಸೇರಬಹು ದು, ಆ ಪರ್ವತದಲ್ಲಿ ವಿಶಾಲವಾದ ಗುಹೆಗಳೂ ಕಂದರಗಳೂ ಬಹಳವಾಗಿ ರುವುವು ಅವುಗಳನ್ನೆಲ್ಲಾ ಬಿಡದೆ ಸುತ್ತಿ, ಮಹಾಭಾಗೆಯಾದ ಸೀತೆಯನ್ನು ಕಂಡು ಹಿಡಿಯಬೇಕು ಬಂಗಾರದ ಗನಿಗಳಿಂದ ತುಂಬಿದ ಆ ಪರ್ವತೇಂದ್ರ ವನ್ನೂ ದಾಟಿ ಹೋದರೆ,ನಿಮಗೆ ಸುದರ್ಶನವೆಂಬ ಮತ್ತೊಂದು ಪರ್ವತವು ಸಿಕ್ಕುವುದು ಅದನ್ನೂ ಅತಿಕ್ರಮಿಸಿಹೋದರೆ ಪಕ್ಷಗಳಿಗೆ ಮುಖ್ಯನಿವಾಸ ವಾದ ದೇವಸಖವೆಂಬ ಪರ್ವತವು ಕಾಣಿಸುವುದು ಅದರಲ್ಲಿ ಬಗೆಬಗೆಯ ಪಕ್ಷಿಗಳು ತುಂಬಿರುವುವು ಬಗೆಬಗೆಯ ವೃಕ್ಷಗಳೂ ಶೋಭಿಸುತ್ತಿರುವುವು. ಆ ಪರ್ವತದ ವನಸಮೂಹಗಳಲ್ಲಿಯೂ, ಗಿರಿನದಿಗಳಲ್ಲಿಯೂ, ಗುಹೆಗಳಲ್ಲಿ