೧೫೮೮ ಶ್ರೀಮದ್ರಾಮಾಯಣವು [ಸರ್ಗ, ೪೩. ಯೂ ಸುತ್ತಿ, ಅಲ್ಲಲ್ಲಿ ಸೀತೆಯನ್ನೂ ರಾವಣನನ್ನೂ ಹುಡುಕಬೇಕು ಆ ಪ ರ್ವತವನ್ನೂ ದಾಟಿದಮೇಲೆ, ನಾಲ್ಕು ಕಡೆಗಳಲ್ಲಿಯೂ ನೂರುಯೋಜನದ ಗಲವುಳ್ಳ ಶೂನ್ಯಪ್ರದೇಶವೊಂದಿರುವುದು ಅಲ್ಲಿ ಪರ್ವತಗಳಾಗಲಿ, ನಮಿಗಳಾ ಗಲಿ, ವೃಕ್ಷಗಳಾಗಲಿ ಕಾಣುವುದಿಲ್ಲ ಅಲ್ಲಿ ಯಾವುದೊಂದು ಪ್ರಾಣಿಯೂ ಇರುವುದಿಲ್ಲ ಮಹಾಭಯಂಕರವಾಗಿ ನಡುಕವನ್ನು ಹುಟ್ಟಿಸುವಂತಿರುವ ಆ ಶೂನ್ಯಾರಣ್ಯವನ್ನು ನೀವು ಶೀಘ್ರದಲ್ಲಿಯೇ ದಾಟಿಬಿಡಬೇಕು ಅಲ್ಲಿಂದ ಮುಂದ ಆತಿಧವಳವಾಗಿ ಪ್ರಕಾಶಿಸುವ ಕೈಲಾಸಪರ್ವತವು ಕಾಣಿಸುವುದು ಅದನ್ನು ನೋಡಿದಾಗಲೇ ನಿಮಗೆ ಅತ್ಯಾಹ್ಲಾದವುಂಟಾಗುವುದು ಆ ಪ ರ್ವತದಲ್ಲಿ ಚಿನ್ನದ ಕೆಲಸಗಳಿಂದಲಂಕೃತವಾಗಿ ಬಿಳೀಮೇಫುದಂತಿರುವ ಕು ಬೇರನ ದಿವ್ಯಭವನವಿರುವುದು ವಿಶ್ವಕರ್ಮನೇ ಅದನ್ನು ನಿರ್ಮಿಸಿರುವನು ಮತ್ತು ಅಲ್ಲಿ ತಾವರಗೃಹಿಲಗಳಿಂದ ತುಂಬಿದ ವಿಸ್ತಾರವಾದ ಒಂದು (ಮಾನಸ ಸರೋವರವುಂಟು ಅವರಲ್ಲಿ ಹಂಸಕಾರಂಡವಾದಿಪಕ್ಷಿಗಳು ಅಸಂಖ್ಯಾತವಾಗಿರುವುವು ಅಪ್ಪರಸ್ಸುಗಳು ಗುಂಪುಗುಂಪಾಗಿ ಅಲ್ಲಿಗೆ ಬಂ ದು ಅದರಲ್ಲಿ ವಿಹರಿಸುತ್ತಿರುವರು ಆ ಕೈಲಾಸದಲ್ಲಿ ವಿಶ್ರವಸ್ಸಿನ ಕುಮಾರ ನಾಗಿ ಯಕ್ಷರಾಜನೆನಿಸಿಕೊಂಡ ಕುಬೇರನು, ಸಮಸ್ತ ಭೂತಗಳಿಂದಲೂ ಭಕ್ತಿಯಿಂದ ಸೇವಿತನಾಗಿ ಯಕ್ಷರೂಡನೆ ವಿಹರಿಸುತ್ತಿರುವನು ನೀವು ಆ ಪರ್ವತಕ್ಕಹೋಗಿ, ಅಲ್ಲಿ ಚಂದ್ರನಂತೆ ಬಿಳುಪಾದ ಅದರ ಸಮೀಪಪರ್ವತ ಗಳಲ್ಲಿಯೂ, ಗುಹೆಗಳಲ್ಲಿಯೂ ಪ್ರವೇಶಿಸಿ, ಅಲ್ಲಲ್ಲಿ ಸೀತಾದೇವಿಯನ್ನೂ ರಾವ ಇನ ವಾಸಸ್ಥಳವನ್ನೂ ಹುಡುಕಿಬರಬೇಕು ಅದರಿಂದಾಚೆಗೆ ನಿಮಗೆ ಕಾಂ ಚಪರ್ವತವು ಸಿಕ್ಕುವುದು ಅದರಲ್ಲಿ ಷಣ್ಮುಖನು ತನ್ನ ಬಾಣದಿಂದ ಕೆರೆ ದಿಟ್ಟಿರುವ ಬಹಳ ದುರ್ಗಮವಾದ ಒಂದು ಮಹಾಬಲವುಂಟು ಸೀವು ಬ ಹಳ ಎಚ್ಚರಿಕೆಯಿಂದ ಆ ಬಿಲದಲ್ಲಿ ಪ್ರವೇಶಿಸಿ ನೋಡಬೇಕು ಅಲ್ಲಿ ಸ್ವಲ್ಪ ಮಾತ್ರವೂ ಪ್ರಮಾದದಿಂದಿರಕೂಡದು ಅದನ್ನು ಪ್ರವೇಶಿಸುವುದು ಬ ಹಳಕಷ್ಟವು ಆ ಬಿಲದಲ್ಲಿ ಸೂರ್ಯನಂತೆ ಕಾಂತಿಯಿಂದ ಬೆಳಗುತ್ತ, ಸಮ ಸ್ವದೇವತೆಗಳಿಗೂ ಪೂಜ್ಯರಾದ ಮಹಾಮಹಿಮೆಯುಳ್ಳ ಕೆಲವು ಮಹರ್ಷಿ ಗಳು ದೇವಸ್ವರೂಪದಿಂದ ವಾಸಮಾಡುತ್ತಿರುವರು 'ಇದರಿಂದಲೇ ಅಲ್ಲಿ
ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೯೯
ಗೋಚರ