ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೩೨ ಶ್ರೀಮದ್ರಾಮಾಯಣವು [ಸರ್ಗ, ೧, ನನ್ನ ಪ್ರಿಯೆಯಾದ ಸೀತೆಗೆ ಬಹಳ ಇಷ್ಟವಾದುದು ಎಲೆವನೆ' ವಸಂತ ನು ಮನ್ಮಥನಿಗೆ ಪರಮಾಪ್ತನೆಂಬುದು ಈಗ ಚೆನ್ನಾಗಿ ನಿದರ್ಶನಕ್ಕೆ ಬರು ವುದು ಈಗ ನನ್ನ ದೇಹದಲ್ಲಿರುವ ದುಃಖಾಗ್ನಿ ಯು ಮನ್ಮಧತಾಪದಿಂದ ಲೇ ಹುಟ್ಟಿತೆಂದು ತಿಳಿದು, ಅದನ್ನು ಈ ವಸಂತನು ತನ್ನ ಸೊಂಪಿನಿಂದ ಮೇ ಲೆಮೇಲೆ ಉರಿಸುತ್ತಿರುವನು?ಇವನು ಇನ್ನು ಶೀಘ್ರದಲ್ಲಿಯೇ ನನ್ನನ್ನು ದಹಿ ಸದೆ ಬಿಡನು ಆ ಪ್ರಿಯೆಯನ್ನು ಕಾಣದೆ ಇಲ್ಲಿನ ಮನೋಹರಗಳಾದ ವೃ ಕ್ಷಗಳನ್ನು ನೋಡುತ್ತಿರುವ ನನಗೆ ಮನ್ಮಥತಾತವು ಕೊನೆಗಾಣದಂತೆ ಬೆಳೆದು ಹೋಗುತ್ತಿರುವುದು ಆ ಸೀತೆಯನ್ನು ಕಾಣದಿರುವುದರಿಂದಲೇ ನನ್ನ ದುಃಖವು ಕ್ಷಣಕ್ಷಣಕ್ಕೂ ಹೆಚ್ಚು ತಿರವುದು. ಇದರಮೇಲೆ ಈಗಲಾದರೋ, ಮಂದಮಾರುತದಿಂದ ನಾಯಿಕಾನಾಯಕರಿಗೆ ರತಿಶ್ರಮಜನ್ಯವಾದ ಬೆವರ ನ್ಯಾರಿಸತಕ್ಕುದಾಗಿಯೂ, ಫಲಪುಷ್ಪಗಳಿಂದ ತುಂಬಿ ನೇತ್ರಾನಂದಕರವಾಗಿ ಯೂ ಇರುವ ಈ ವಸಂತವು,ಅದನ್ನು ಮತ್ತಷ್ಟು ಹೆಚ್ಚಿಸುತ್ತಿರುವುದು ಎಲೆ ವತ್ರನೆ' ಈ ತಂಗಾಳಿಯ ಕ್ರೂರಸ್ವಭಾವವನ್ನು ನೋಡಿದೆಯಾ? ಜಿಂಕೆಯ ಕಣ್ಣುಗಳಂತೆ ಕಣ್ಣುಗಳುಳ್ಳ ಆ ಸೀತೆಯವಿಷಯವಾಗಿ ನಾನು ಮೊದಲೇ। ಚಿಂತಿಸಿ ಕೊರಗುತ್ತಿರುವೆನು ಈ ದುರವಸ್ಥೆಯಲ್ಲಿರುವಾಗಲೂ ನನ್ನಲ್ಲಿ ಸ್ವಲ್ಪ ವೂ ಮರುಕವಿಲ್ಲದೆ ಈ ವಸಂತಮಾರುತವು ನನ್ನನ್ನು ಮೇಲೆಮೇಲೆ ಪೀಡಿಸು ತಿರುವುದಲ್ಲಾ ವತ್ಸನೆ'ಆಟೋ' *ಅಲ್ಲಲ್ಲಿ ಕುಣಿಯುತ್ತಿರುವ ಈ ನವಿಲುಗಳ ಸೊಗಸನ್ನು ನೋಡಿದೆಯಾ?ಅವು ಬಿಚ್ಚಿಟ್ಟಿರುವ ಗರಿಗಳು, ಆಗಾಗ ಗಾಳಿಗೆ ಅಲುಗುತ್ತಿರುವುದರಿಂದ, ನಡುನಡುವೆ ಸಂದುಗಳು ಬಿಟ್ಟು,ಸ್ಪಟಿಕದ ಗವಾ ಕ್ಷಜಾಲಗಳಂತೆ ಕಾಣುವುವು ನೋಡು' ಇದೋ' +ಇಲ್ಲಿ ಕೆಲವು ನವಿಲುಗಳು

  • ಇಲ್ಲಿ ವಾಯುಪ್ರೇರಿತಗಳಾದ ಗರಿಗಳೊಡನೆ ನವಿಲುಗಳು ಆಡುವುವೆಂದು ಹೇಳಿರುವುದರಿಂದ, ಭಗವತ್ಮಪಾಪ್ರೇರಿತರಾಗಿ ನಾನಾವಿಧಕರ್ಮಗಳನ್ನಾಚರಿಸುವರು ಸೂಚಿತರಾಗುವರು

↑ ಇಲ್ಲಿ ಹೆಣ್ಣು ನವಿಲು ಗಂಡುನವಿಲಿನೊಡನೆ ಕೂಡಿರುವುದನ್ನು ನೋಡಿ ತನಗೆ ತಾಪವು ಹಚ್ಚುವುದಾಗಿ ಹೇಳಿದುದರಿಂದ, ಶಿಷರೊಡಗೂಡಿದ ಭಕ್ತರನ್ನು ನೋಡಿದ ಮಾತ್ರಕ್ಕೆ ಮೊದಲು ಅವರಲ್ಲಿ ಭಕ್ತಿಯನ್ನು ಹುಟ್ಟಿಸಬೇಕೆಂಬ ವ್ಯಾಮೋಹವು ಭಗೆ ವಂತನಿಗುಂಟಾಗುವುದೆಂದು ಸೂಚಿತವು.