ವಿಷಯಕ್ಕೆ ಹೋಗು

ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪೩ } ಕಿಷಿಂಧಾಕಾಂಡವು ೧೫೮೯ ಇತರರು ಪ್ರವೇಶಿಸುವುದು ಕಷ್ಟವು ನೀವು ಆ ಕೌಂಚಪರ್ವತದಲ್ಲಿಯೂ ಅಲ್ಲಿನ ಗುಹೆಗಳಲ್ಲಿಯೂ, ತಪ್ಪಲುಗಳಲ್ಲಿಯೂ, ಶಿಖರಗಳಲ್ಲಿಯೂ, ಕಂದರ ಗಳಲ್ಲಯ, ಆ ಪರ್ವತದ ಮಧ್ಯಪ್ರದೇಶಗಳಲ್ಲಿಯೂ ಅಲ್ಲಲ್ಲಿ ತಿರುಗಿ ಸೀತಾ ದೇವಿಯನ್ನು ಹುಡುಕಿಬರಬೇಕು ಕೌಂಚಪರ್ವತದ ಪ್ರಧಾನಶಿಖರವ ನ್ಯೂ , ವೃಕ್ಷರಹಿತವಾದ ಕಾಮಪರ್ವತವನ್ನೂ, ಪಕ್ಷಿಗಳಿಗಾಶ್ರಯಸ್ಥಾನ ವಾದ ಮಾನಸಪರ್ವತವನ್ನೂ ಚೆನ್ನಾಗಿ ಸುತ್ತಿ ಹುಡುಕಿಬರಬೇಕು ಆ ಮಾನಸಪರ್ವತಕ್ಕೆ ಸಾಮಾನ್ಯಜಂತುಗಳುಮಾತ್ರವೇ ಅಲ್ಲದೆ, ದೇವದಾನ ವರಾಕ್ಷಸಾದಿಗಳುಕೂಡ ಪ್ರವೇಶಿಸಲಾರರು ಆದರೂ ಅದರಸುತ್ತಿನ ಭೂಪ್ರದೇಶಗಳನ್ನೂ , ಸಮೀಪದ ತಿಟ್ಟುಗಳನ್ನೂ, ಮೇಲಿನ ಪ್ರದೇಶಗಳ ನ್ಯೂ ವಲ್ಲರೂ ಸಾಹಸದಿಂದ ಹುಡುಕಿಬರಬೇಕು ಕೌಂಚಪರ್ವತದಿಂ ದಾಚೆಗೆ ಮೈ ನಾಕಪರ್ವತವಿರುವುದು ಅದರಮೇಲ ಮಯನೆಂಬ ದಾನ ವನು ತನ್ನ ಮನೆಯನ್ನು ಕಟ್ಟಿಕೊಂಡಿರುವನು ಆ ಪರ್ವತದ ಸಾನುಗಳಲ್ಲಿ ಯೂ, ಮಧ್ಯಪ್ರದೇಶಗಳಲ್ಲಿಯೂ, ಗುಹೆಗಳಲ್ಲಿಯೂ ಸುತ್ತಿನೋಡಬೇಕು ಮತ್ತು ಅಲ್ಲಿ ಕಿಂಪುರುಷಸಿಯರ ವಾಸಸ್ಥಾನಗಳುಂಟು ಅಲ್ಲಿಯೂ ನೀ ವು ಚೆನ್ನಾಗಿ ನೋಡಿ ಬರಬೇಕು ಆ ಪರ್ವತವನ್ನೂ ದಾಟಿಹೋದರ ಸಿದ್ಧ ಸೇವಿತವಾದ ಒಂದು ಪುಣ್ಯಾಶ್ರಮವು ಕಾಣುವುದು ಅಲ್ಲಿ ಅಣಿಮಾದ್ಯಷ್ಟೆ ಶ್ವರ್ಯಸಿದ್ಧಿಯನ್ನು ಪಡೆದವರಾಗಿಯೂ, ತಪಸ್ಸಂಪನ್ನರಾಗಿಯೂ ಇರುವ ವೈಖಾನಸರೂ, ವಾಲಖಿಲ್ಯರೂ ವಾಸಮಾಡುತ್ತಿರುವರು ತಮ್ಮ ತಪೋ ಬಲದಿಂದಲೇ ಆಷ್ಯಶ್ವರ್ಯಸಿದ್ಧಿಯನ್ನು ಪಡೆದು ಪಾಪರಹಿತರಾದ ಆ ಮಹಾತ್ಮರಿಗೆ ನೀವು ಅವಶ್ಯವಾಗಿ ನಮಸ್ಕರಿಸಬೇಕು ಅವರನ್ನು ನಮಸ್ಕ ರಿಸಿ, ವಿನಯಪೂರ್ವಕವಾಗಿ ಸೀತಾದೇವಿಯ ವೃತ್ತಾಂತವನ್ನು ವಿಚಾ ರಿಸಬೇಕು ಆ ಆಶ್ರಮದಲ್ಲಿಯೇ ವೈಖಾನಸವೆಂಬ ಒಂದು ಸರೋವರ ವಿರುವುದು ಅದು ಸುವರ್ಣಕಮಲಗಳಿಂದ ತುಂಬಿ, ಅನೇಕಹಂಸ ಗಳಿಗಾಶ್ರಯವಾಗಿ ಬಾಲಸೂರ್ಯನಂತೆ ಪ್ರಕಾಶಿಸುತ್ತಿರುವುದು ಕು ಬೇರನಿಗೆ ಪಟ್ಟದಾನೆಯಾದ ಸಾರ್ವಭೌಮವೆಂಬ ದಿಗ್ಗಜವು,ತನ್ನ ಹೆಣ್ಣಾನೆ