ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೯o ಶ್ರೀಮದ್ರಾಮಾಯಣವು | [ಸರ್ಗ, ೪೩. ಗಳೊಡಗೂಡಿ ಯಾವಾಗಲೂ ಅಲ್ಲಿ ವಿಹರಿಸುತ್ತಿರುವುದು * ಆ ಸರೋವರ ದಿಂದಾಚೆಗೆ ಆಕಾಶದಲ್ಲಿ ಚಂದ್ರಸೂರ್ಯರ ಸಂಚಾರವಾಗಲಿ, ನಕ್ಷತ್ರಸಂ ಚಾರವಾಗಲಿ ಸ್ವಲ್ಪ ಮಾತ್ರವೂ ಇಲ್ಲ ಅಲ್ಲಿ ಮೇಘಗಳೂ ಸಂಚರಿಸುವು ದಿಲ್ಲ ಅದು ನಿಶ್ಯಬ್ದವಾಗಿ ಶೂನ್ಯವಾಗಿರುವುದು ಆದರೆ ಅಲ್ಲಿ ಚಂದ್ರಸೂರ ಸಂಚಾರವಿಲ್ಲದಿದ್ದರೂ, ದೇವಸಮಾನರಾಗಿಯೂ, ಸ್ವತಸ್ಸಿದ್ಧಜ್ಞಾನವುಳ್ಳ ವರಾಗಿಯೂ, ತಪಸ್ಸಿದ್ದರಾಗಿಯೂ ಇರುವ ಮಹಾಯೋಗಿಗಳು ವಿಶ್ರಮಿಸಿ ಕೊಂಡಿರುವರಾದುದರಿಂದ, ಅವರ ದೇಹಕಾಂತಿಯಿಂದಲೇ ಸೂರ್ಯಕಿರಣ ದಿಂದ ಹೇಗೋಹಾಗೆ ಆ ಪ್ರದೇಶವೆಲ್ಲವೂ ಯಾವಾಗಲೂ ಬೆಳಗುತ್ತಿರುವು ದು ಆ ಪ್ರದೇಶವನ್ನೂ ದಾಟಿಹೋದರೆ ಮುಂದೆ ಶೈಲೋದೆಯೆಂಬ ಒಂ ದು ನದಿಯಿರುವುದು ಆ ನದಿಯ ಎರಡತೀರಗಳಲ್ಲಿಯೂ ಯಾವಾಗಲೂಗಾ ಳೆಯಿಂದ ಶಬ್ಬಿಸುತ್ತಿರುವ ಕೀಚಕಗಳೆಂಬ ಬಿದಿರಿನ ಮೆಳೆಗಳು ಒಂದಕ್ಕೊಂ ದು ಹೆಣೆದಿಟ್ಟಂತೆ ಸೇರಿ ದಟ್ಟವಾಗಿ ಬೆಳೆದಿರುವುದರಿಂದ,ಅಲ್ಲಿನ ಸಿದ್ದರು ಆ ವುಗಳ ಮೇಲೆಯೇ ಏರಿ, ಆ ನದಿಯ ಒಂದು ಪಾರ್ಶ್ವದಿಂದ ಮತ್ತೊಂದು ಪಾರ್ಶ್ವಕ್ಕೆ ಬಹಳ ಸುಲಭವಾಗಿ ಹೋಗಿಬರುತ್ತಿರುವರು ಅದರಿಂದಾಚೆಗೆ ಪುಣ್ಯಾತ್ಮರಿಗೆ ವಾಸಸ್ಥಾನವಾದ ಉತ್ತರಕುರುದೇಶವಿರುವುದು ಆ ಪ್ರದೇ ಶವು, ಪುಣ್ಯವನ್ನು ಮಾಡಿದವರು ತಮ್ಮ ಪುಣ್ಯಫಲವನ್ನನುಭವಿಸುವುದಕ್ಕಾ ಗಿಯೇ ಹುಟ್ಟಿದ ಭೂಮಿಯಾದುದರಿಂದ, ಅಲ್ಲಿ ಸುವರ್ಣಕಮಲಗಳಿಂದ

  • ಮುಂದೆ, “ಹಿಮವಂತಂಭ ಮೇರುಂಚ, ಸಮುದ್ರಂಚ ತಥತ್ತರಂ” ಎಂಬುವಾಗಿ ಸುಗ್ರೀವನಮಾತಿನಿಂದ ವ್ಯಕ್ತವಾಗುವುದರಿಂದ, ಇಲ್ಲಿ ಆ ಮೇರುವಿನ ಪ್ರಸಕ್ತಿಯೇ ಇಲ್ಲವೆಂಬುದಕ್ಕಾಗಿ ಭ್ರಮಿಸಕೂಡದು ಮಹಾಮೆರುವಿನ ಪಕ್ಕದ ಇಳಾವೃತಪ್ರದೇಶಗಳನ್ನೇ ಇಲ್ಲಿ ತಿಳಿಸಿದುದಾಗಿ ಗ್ರಾಹ್ಯವೂ.

ಯಾವತ್ತುರಸ್ತಾತ್ ತಪತಿ ತಾವಹೈಚಪಾರ್ಶ್ವಯೋ | ಋತೇಹೇ ಮಗಿರೇರೋರುಪರಿ ಬ್ರಹ್ಮಣಸ್ಸಭಾಮIIಇಂದು ವಿಷ್ಣು ಪುರಾಣದಲ್ಲಿ ಹೇಳಿರುವಂ ತೆ, ಮೇರುವಿನ ಮುಂದೆಯೂ, ಹಿಂದೆಯ, ಪಕ್ಕಗಳಲ್ಲಿ ಯ ಚಂದ್ರಸೂಯ್ಯಾದಿ ಗ್ರಹಗಳ ಗತಿಯು ನಿಯತವಾಗಿರುವುದರಿಂದ ಅದರ ನಿಕಟಪ್ರದೇಶಗಳಲ್ಲಿ ಅವರ ಕಿರ ಕಗಳ ಪ್ರಸಾರವಿಲ್ಲವು ಅದರಿಂದಲೇ ಇಲ್ಲಿ ಆಕಾಶಕ್ಕೆ ಚಂದ್ರಸೂರ್ಯಪ್ರಕಾತವಿಲ್ಲ ವೆಂದು ತಿಳಿಸಲ್ಪಟ್ಟಿರುವುದು