ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೪೩ ] ಕಿಷಿಂಧಾಕಾಂಡವು. ೧೫೯೧ ಲೂ, ನೀಲವೈಡೂರ್ಯವರ್ಣದ ತಾವರೆ ಬಳ್ಳಿಗಳಿಂದಲೂ ಅಲಂಕೃತವಾಗಿ, ಸಮೃದ್ಧವಾದ ನೀರು ನದಿಗಳು ಸಾವಿರಾರುಸಂಖ್ಯೆಯಿಂದ ಪ್ರವಹಿಸು ವುವು ಆ ಉತ್ತರಕುರುದೇಶದ ಕೊಳಗಳೆಲ್ಲವೂ, ಸುವರ್ಣಮಯಗಳಾಗಿ ಸೂರ್ಯನಂತೆ ಹೊಳೆಯುತ್ತಿರುವ ರಕೊತ್ಸಲವನಗಳಿಂದಲಂಕೃತಗಳಾಗಿ ರುವುವು ಮತ್ತು ಆ ಪ್ರದೇಶವು, ಸುತ್ತಲೂ ನೀಲಮಣಿಯಂತಿರುವ ಎಲೆ ಗಳಿಂದಲೂ, ಚಿನ್ನದ ಕೇಸರಗಳಿಂದಲೂ ಕೂಡಿ ಚಿತ್ರವಿಚಿತ್ರಗಳಾದ ನೀ ಲೋತ್ಪಲವನಗಳಿಂದ ಅತಿಮನೋಹರವಾಗಿರುವುದು ಎಣೆಯಿಲ್ಲದ ಮು ತಿನಮಣಿಗಳೂ, ಬೆಲೆಬಾಳುವ ನವರತ್ನಗಳೂ, ಸುವರ್ಣಗಳೂ, ಪುಡಿಪುಡಿ ಯಾಗಿ ಉದಿಸಿ, ಅಲ್ಲಿನ ನದೀತೀರದ ಮಳಲುದಿಣ್ಣೆಗಳಾಗಿರುವುವು ರತ್ನಖ ಚಿತಗಳಾಗಿ, ವಿಚಿತ್ರವರ್ಣದಿಂದ ಶೋಭಿಸುವ ಅನೇಕಸ್ವರ್ಣಪರ್ವತಗಳು, ಅಲ್ಲಿನ ನದಿಗಳ ನೀರಿನ ನಡುವೆ, ಅಲ್ಲಲ್ಲಿ ಅಗ್ನಿ ಯಂತೆ ಜ್ವಲಿಸುತ್ತ ಗೋ ಚರಿಸುವುವು ಅಲ್ಲಿನ ವೃಕ್ಷಗಳು ಯಾವಾಗಲೂ ಪುಷ್ಟ ಫಲಗಳಿಂದ ತುಂಬಿ, ಪಕ್ಷಿಗಳಿಗೆ ಸುಖಾಶ್ರಯವಾಗಿ, ಸುತ್ತಲೂ ಸುವಾಸನೆಯನ್ನು ಹರಡಿಸಿ ಸೀಯಾದ ರಸವನ್ನು ಸುರಿಸುತ್ತಿರುವುವಲ್ಲದೆ, ಕೋರಿದ ಕೋರಿಕಗಳನ್ನೆಲ್ಲಾ ಕೊಡುವುವು ಕೆಲವು ಉತ್ತಮವೃಕ್ಷಗಳು, ಕೇಳಿದ ವಸ್ತ್ರಗಳನ್ನು ಕೂಡುವುವು ಮತ್ತೆ ಕೆಲವು, ಸ್ತ್ರೀಯರಿಗಾಗಲಿ ಪುರುಷರಿ ಗಾಗಲಿ ಅವರವರ ವೇಷಕ್ಕನುಗುಣವಾಗಿ ಮುತ್ತು ವೈಡೂರ್ಯ ದಿಂದ ವಿಚಿತ್ರಗಳಾದ ಆಭರಣಗಳನ್ನು ಕೊಡುವುವು ಅಲ್ಲಿನ ವೃಕ್ಷಗಳು ಸ ಮಸ್ತ ಋತುಗಳಿಗೂ, ಹಿತಕರವಾದ ವಸ್ತುಗಳನ್ನೆ ಫಲಿಸುವುವು ಮತ್ತ ಕೆಲವು ಗಿಡಗಳು ಬೆಲೆಯುಳ್ಳ ಚಿತ್ರವಿಚಿತ್ರಗಳಾದ ಸುವರ್ಣಾಭರಣಗಳ ವೇ ಫಲವಾಗಿ ಬಿಡುವುವು ಮತ್ತಕಲವು ವಿಚಿತ್ರಾಸ್ತರಣವುಳ್ಳ ಶಯನಗ ಳನ್ನು ಕೊಡುವುವು ಇನ್ನು ಕೆಲವುವೃಕ್ಷಗಳು ಅವರವರ ಮನಸ್ಸಿಗಿಂಪಾಗು ವ ಪುಷ್ಪಮಾಲಿಕಗಳನ್ನು ಫಲಿಸುವುವು ಕಲವುಗಿಡಗಳು ಸರೂ, ಮಗಳಾ ದ ಪಾವರಸಗಳನ್ನೂ ವಿವಿಧಭಕ್ಷಗಳನ್ನೂ ಫಲಿಸುವುವು ಸದ್ಗುಣಸಂಪನ್ನ ರಾಗಿ ರೂಪಯೌವನಗಳುಳ್ಳ ಸ್ತ್ರೀಯರನ್ನೇ ಕೆಲವು ವೃಕ್ಷಗಳು ತಮ್ಮ ಫಲ ರ ಪವಾಗಿ ಕೊಡುವುವು ಗಂಧರ್ವರೂ, ಕಿನ್ನರರೂ,ಸಿದ್ದರೂ, ನಾಗರೂ ಅ