ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೪೪ ] ಕಿಷಿ ಂಧಾಕಾಂಡವು, ೧೫೯೫ ಳನ್ನು ಸಾಧಿಸಿರುವುದರಿಂದಲೇ, ಇವನ ಶಕ್ತಿಯಲ್ಲಿ ಎಲ್ಲರಿಗೂ ನಂಬಿಕೆಯುಂ ಟು ಇದರಿಂದಲೇ ಸುಗ್ರೀವನೂಕೂಡ,ತಾನು ಕಪಿರಾಜನಾಗಿದ್ದರೂ, ಅವನ ನ್ನು ಬಹಳವಾಗಿ ಗೌರವಿಸಿ ಮಾತನಾಡುತ್ತಿರುವನು ಇಂತವನು ಪ್ರಯಾ ಣಮಾಡಿ ಹೊರಟಮೇಲೆ ನಮಗೆ ಕಾರೈಸಿದ್ದಿಯಾಗುವುದರಲ್ಲಿ ಎಷ್ಟು ಮಾ ತವೂ ಸಂದೇಹವಿರದು” ಎಂದು ನಿರ್ಧರಿಸಿಕೊಂಡು, ಆ ಮೇಲೆ ಆ ಹನು ಮಂತನನ್ನು ನೋಡಿ, ಮನಸ್ಸಿನಲ್ಲಿಯೇ ಉಕ್ಕಿಬರುವ ಸಂತೋಷದಿಂದ ಹಿ ಗುತ್ಯ, ಆಗಲೇ ತಾನು ಕೃತಾರ್ಥನಾದಂತೆ ಎಣಿಸಿಕೊಂಡನು ಹೀಗೆ ಸಂ ತೋಷಪರವಶನಾದ ರಾಮನು ತಾನು ಕೈಯ್ಯಲ್ಲಿಟ್ಟಿದ್ದ ತನ್ನ ನಾಮಾಂಕಿ ತವಾದ * ಉಂಗುರವನ್ನು ತಗೆದು,ಸೀತೆಗೆ ಗುರುತಿಗಾಗಿ ಹನುಮಂತನಕ್ಕಗೆ ಕೊಟ್ಟು 'ಎಲೆ ಕವಿಶ್ರೇಷ್ಠ ನೆ' ಒಂದುವೇಳೆ ಸೀತೆಯು ಮೊದಲು ನಿನ್ನ ನ್ನು ನೋಡುವಾಗ ಸಂದೇಹವನ್ನಾಗಲಿ, ಭಯವನ್ನಾಗಲಿ, ಹೊಂದಬಹು ದು ಅದಕ್ಕವಕಾಶವಿಲ್ಲದಂತೆ ನೀನು ನನ್ನ ಕಡೆಯಿಂದ ಬಂದವನೆಂಬ ನಿರ್ಧ ರವನ್ನು ತೋರಿಸುವುದಕ್ಕಾಗಿ, ಈ ಉಂಗುರವನ್ನು ತೆಗೆದುಕೊಂಡು ಹೋಗು ಇದನ್ನು ನೋಡಿದೊಡನೆ ಆಕೆಯ ಸಂದೇಹವೂ, ಭಯವೂ ನೀಗುವುದು

  • ಸಮಸ್ತಧನವನ್ನೂ ತ್ಯಜಿಸಿ ವನ್ಯವತಿ ಯಿಂದಿರುವ ರಾಮಸಿಗೆ, ಈ ಉಂಗುರ ವೆಲ್ಲಿಯದು' ಎಂದರೆ, ರಾಮನು ಸಮಸ್ತವನ್ನೂ ತ್ಯಜಿಸಿ ಒ೦ದಿದ್ದರೂ, ಈ ಉಂಗುರ ವೊಂದನ್ನು ಮಾತ್ರ ಬಚ್ಚಿಟ್ಟು, ಮುಂದಿ ಕಾತ್ಯಾರ್ಥವಾಗಿ ತನ್ನೊಡನೆ ತಂದವೆಂದು ಗ್ರಾಹ್ಯವು ಇದರಿಂದಲೇ ಈಗ ರಾಮನ) ಬೆರಳಿನಿಂದ ಉಂಗುರವನ್ನು ತೆಗೆದುಕೊಟ್ಟು ದಾಗಿ ಹೇಳದೆ, ಸುಮ್ಮನೆ ಕೈಯಲ್ಲಿದ್ದ ಉಂಗುರವನ್ನು ಹನುಮಂತನ ಕೈಗೆ ಕೊಟ್ಟ ನೆಂದು ಹೇಳಲ್ಪಟ್ಟಿದೆ ಆಥ ರಾ ರಾಮನಾಮಾಂಕಿತವಾಗಿ ಸೀತೆಯು ಧರಿಸಿದ್ದ ಉಂಗುರ ವನ್ನು ರಾವಣನು ಬರುವುದಕ್ಕೆ ಮೊದಲೇ,ಒಮ್ಮೆ ರಾಮನು ಪ್ರಸಯವಶದಿಂದ ತೆಗೆದಿ ಟ್ಯುಕೂಂಡಿದ್ದನೆಂದೂ ಗ್ರಹಿಸಹುದು ಭಾರೆಯರು ಸ್ನೇಹದಿಂದ ಯಾವಾಗಲೂ ಕಿ ರುಬೆರಳಿನಲ್ಲಿ ಪತಿಯ ಉಗುರುವನ್ನಿಡುವ ದೇಶಾಚಾರವುಂಟು ಅಥವಾ,ವಿವಾಹಕಾಲ ದಲ್ಲಿ ಜನಕನುವರನಿಗೆ ಅಲಂಕಾರಾರ್ಥವಾಗಿ, ಈ ಉಂಗುರವನ್ನು ಕೊಟ್ಟಿರಬಹುದೆಂದೂ ಎಣಿಸಬಹುದು ಮುಂದೆ ಸುಂದರ ಕಾಂಡದಲ್ಲಿ, “ಗ್ರಹೀತಾ ಪ್ರೇಕ್ಷಮಾಣಾ ಸಾಭರು ಕರವಿಭೂಷಣಂ' ಎಂದು ಪತಿಯ ಹಸ್ತ ಭೂಷಣವನ್ನು ಸೀತೆಯು ಕೈಗೆ ತೆಗೆದು ಕೊಂಡು ನೋಡಿದುದಾಗಿ ಹೇಳಲ್ಪಟ್ಟಿರುವುದರಿಂದ, ವರಾಲಂಕಾರ್ಥವಾಗಿ ಕೊಟ್ಟ ಈ ಅಂಗುಳಿ ಯಕವನ್ನು ರಾಮನು ಬಿಡಲಾರದೆ ತಂದಿದ್ದನೆಂದೂ ತೂರುವುದು