ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೯L ಶ್ರೀಮದ್ರಾಮಾಯಣವು (ಸರ್ಗ ೪೫ ಎಲೈ ವೀರನೆ' ನಿನಗೆ ಈಗಿರುವ ಮಹೋತ್ಸಾಹವನ್ನೂ, ನಿನ್ನ ಬಲವನ್ನೂ, ನಿನ್ನ ಪರಾಕ್ರಮವನ್ನೂ ,ಇದುವರೆಗೆ ಸುಗ್ರೀವನು ನಿನ್ನೊಡನೆ ಹೇಳಿದ ಮಾ ತಿನ ಕ್ರಮವನ್ನೂ ನೋಡಿದರೆ, ನಮಗೆ ತಪ್ಪದೆ ನಿನ್ನಿಂದ ಕಾರಸಿದ್ದಿಯಾ ಗುವುದೆಂಬುದನ್ನು ಸ್ಪಷ್ಟವಾಗಿ ಹೇಳುವಂತಿರುವುದು ” ಎಂದನು ಅಗ ಹನುಮಂತನು, ಆ ಉಂಗುರವನ್ನು ಕೈಗೆ ತೆಗೆದುಕೊಂಡು, ಅದನ್ನು ವಿನಯ ದಿಂದ ತಲೆಯ ಮೇಲಿಟ್ಟುಕೊಂಡು,ರಾಮನ ಪಾದಗಳಿಗೆ ಪ್ರಣಾಮದಾಡಿ, ಕೈಮುಗಿದು, ಆಗಲೇ ಅಲ್ಲಿಂದ ಹೊರಟನು ವೀರನಾದ ಆ ವಾಯುಕುಮಾ ರನನ್ನು ಆನೇಕವಾನರಸೈನ್ಯವೂ ಹಿಂಬಾಲಿಸಿ ಹೊರಟಿತು ಹೀಗೆ ಮಹ ತ್ಪಾದ ಕಪಿಸೈನ್ಯದಿಂದ ಪರಿವೃತನಾದ ಹನುಮಂತನು, ಮೋಡವಿಲ್ಲದ ಆ ಕಾಶದಲ್ಲಿ ನಕ್ಷತ್ರಸಮೂಹದಿಂದ ಪರಿವೃತ ನಾದ ಚಂದ್ರಮಂಡಲದಂತೆ ಪ್ರಕಾಶಿಸುತಿದ್ದನು ಆಗ ಪುನಃ ರಾಮನು ಹನುಮಂತನನ್ನು ಕುರಿತು 'ಎ ಲೈ ಹನುಮಂತನೆ' ನೀನು ಮಹಾಬಲಾಡ್ಯನು ಸಿಕ್ಕ ದಂತ ಪರಾಕ್ರಮವು ಇವನು ಆದುದರಿಂದ ಈಗ ನಾವು ನಿಮ್ಮೊಬ್ಬನ ಬಲವನ್ನೇ ನಂಬಿರುವೆವು ಎಣೆಯಿಲ್ಲದ ನಿನ್ನ ಪರಾಕ್ರಮಗಳೆಲ್ಲವನ್ನೂ ತೋರಿಸಿ, ಸೀತೆಯು ಲಭಿಸು ವಂತೆ ಪ್ರಯತ್ನವನ್ನು ಮಾಡಬೇಕು” ಎಂದನು ಇಲ್ಲಿಗೆ ನಾಲ್ವತ್ತುನಾ ಲ್ಕನೆಯಸರ್ಗವು -++ ವಾನರಸೈನ್ಯದ ಪ್ರಯಾಣ ಸನ್ನಾಹವು ++ ಹೀಗೆ ಸುಗ್ರೀವನು ಆ ವಾನರರೆಲ್ಲರನ್ನೂ ಕರೆದು, ರಾಮಕಾಠ್ಯಸಿದ್ಧಿ ಗಾಗಿ ಅವರೆಲ್ಲರನ್ನೂ ಒಟ್ಟುಗೂಡಿಸಿ, ನಿಷ್ಪಕ್ಷಪಾತವಾಗಿ ಅವರೆಲ್ಲರಿಗೂ ಒಂದೇ ಆಜ್ಞೆಯನ್ನು ಮಾಡುವವನಾಗಿ, ಅವರನ್ನು ಕುರಿತು' ಎಲೈ ವಾನರ ರೇ' ನಾನು ಯಾರುಯಾರಿಗೆ ಯಾವಯಾವ ದಿಕ್ಕಿನಲ್ಲಿ, ಯಾವಯಾವ ರೀತಿ ಯಿಂದ ಹುಡುಕಿಬರಬೇಕೆಂದು ಹೇಳಿರುವೆನೋ, ಅವರವರು ಆಯಾದಿಕ್ಕು ಗಳಲ್ಲಿ ಆಯಾಕ್ರಮಗಳಿಂದಲೇ ಹುಡುಕಬೇಕು”ಎಂದನು ಈ ಕೊರಾಜೆ ಯನ್ನು ಕೇಳಿದೊಡನೆ ಸಮಸ್ತವಾನರರೂ ಮಿಡಿತೆಗಳಂತೆ, ಅಸಂಖ್ಯಾತವಾ ಗಿ ಸೇರಿ, ಸಮಸ್ಯಭೂಮಿಯನ್ನೂ ವ್ಯಾಪಿಸುತ್ತ ಪ್ರಯಾಣವನ್ನು ಬಳೆಸಿದ