ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೯೮ ಶ್ರೀಮದ್ರಾಮಾಯಣವು (ಸರ್ಗ ೪೬ ತೆಯನ್ನು ತಂದುಬಿಡುವೆನು ನಿಮ್ಮೆಲ್ಲರಿಗೂ ಇಷ್ಟು ಶ್ರಮವೇಕೆ?” ಎಂದನು ಹಾಗೆಯೇ ಒಬ್ಬೊಬ್ಬ ವಾನರನೂ ಸ್ಪರ್ಧೆಯಿಂದ ಬಂದು ನಾನು ಎಂತಹ ವೃಕ್ಷಗಳನ್ನಾದರೂ ಕಿತ್ತು ಬಿಸುಡಬಲ್ಲೆನು' ನಾನು ಬೆಟ್ಟಗಳನ್ನೂ ಉರಿ ಳಿಸುವೆನು' ನಾನು ಭೂಮಿಯನ್ನೇ ಭೇದಿಸುವೆನು' ನಾನು ಸಪ್ತಸಮುದ್ರ ಗಳನ್ನಾ ದರೂ ಕೈಭಹೊಂದಿಸಬಲ್ಲೆನು” ಎಂದು ದರ್ಪವನ್ನು ಹೇಳು ತಿದ್ದರು, ಆಗ ಮತ್ತೊಬ್ಬನು ನಾನು ಒಂದು ಗಾವುದದ ದೂರಕ್ಕೆ ಹಾ ರಬಲ್ಲೆನು” ಎಂದು ತನ್ನ ಶಕ್ತಿಯನ್ನು ಹೇಳಿಕೊಂಡನು ಇದನ್ನು ಕೇಳಿ ಮ ತ್ರೋಬ್ಬನು (ನಾನು ನೂರುಗಾವುದಗಳ ದೂರವನ್ನು ಹಾರುವೆನು” ಎಂ ದನು ಅದನ್ನು ಕೇಳಿ ಮತ್ತೊಬ್ಬನುನಾನು ಅದಕ್ಕಿಂತಲೂ ದೂರಕ್ಕೆ ಹಾ ರುವೆನು” ಎಂದನು ಇನ್ನೊಬ್ಬನು ನಿಮ್ಮ ಹಾರಾಟವೆಲ್ಲವೂ ಹಾಗಿರಲಿ, ಆನೆ ಲದಲ್ಲಿಯಾಗಲಿ, ಜಲದಲ್ಲಿಯಾಗಲಿ, ಕಾಡಿನಲ್ಲಿಯಾಗಲಿ, ಬೆಟ್ಟದಲ್ಲಿಯಾಗಲಿ, ಕೊನೆಗೆ ಪಾತಾಳದ ಕೆಳಗಾಗಲಿ ನಾನು ತಡೆಯಿಲ್ಲದೆ ಸಂಚರಿಸಬಲ್ಲನು” ಎಂದನು ಹೀಗೆ ಬಲಗರ್ವಿತರಾದ ವಾನರರೆಲ್ಲರೂ ಸುಗ್ರೀವನ ಕಿವಿಗೆ ಬೀಳುವಂತೆ, ತಮ್ಮ ತಮ್ಮ ಹೆಮ್ಮೆಯನ್ನು ಹೇಳಿಕೊಳ್ಳುತ್ತ, ತಮ್ಮ ತಮ್ಮ ದಿಕ್ಕಿಗೆ ಪ್ರಯಾಣ ಮಾಡಿದರು ಇಲ್ಲಿಗೆ ನಾಲ್ವತ್ತೈದನೆಯ ಸರ್ಗವು + { ಸುಗ್ರೀವನು, ಸಮಸ್ತಭೂಮಂಡಲವೂ ತನಗೆ ತಿಳಿದ | ಈ ರೀತಿಯನ್ನು ರಾಮನಿಗೆ ಹೇಳಿದುದು *** ವಾನರವೀರರೆಲ್ಲರೂ ಹೊರಟುಹೋದಮೇಲೆ, ರಾಮನು ಸುಗ್ರೀವನ ನ್ನು ಕುರಿತು ನೀನು ಈ ಸಮಸ್ತಭೂಮಂಡಲವನ್ನೂ ಹೇಗೆ ಬಲ್ಲೆ?”ಎಂದ ನು ಆಗ ಸುಗ್ರೀವನು ರಾಮನಿಗೆ ಸಾಷ್ಟಾಂಗವಾಗಿ ನಮಸ್ಕರಿಸಿ,ಎಲೈಪುರು ಷೋತ್ತಮನೆ'ಆ ವೃತ್ತಾಂತವನ್ನು ವಿಸ್ತಾರವಾಗಿ ತಿಳಿಸುವೆನು ಕೇಳು “ಮಹಿ

  • ಪೂರದಲ್ಲಿ ಮಾಯಾವಿಯು ವಾಲಿಯೊಡನೆ ಯುದ್ಧಕ್ಕೆ ಬಂದನೆಂದು ಮೊ ದಲು ಹೇಳಿರುವಾಗ,ಇಲ್ಲಿ ದುಂದುಭಿಯೆಂಬುದು ಹೇಗೆ?'ಎಂಬಶಂಕೆಯುಂಟಾಗಬಹು ದು ಇಲ್ಲಿನ ದುಂದುಭಿಶಬ್ದದಿಂದ ದುಂದುಭಿಯ ಮಗನಾದ ಮಾಯಾವಿಯೆಂದೇ ಗ್ರಾಹ್ಮವು ದುಂದುಭಿಯು ಮಹಿಷಾಕಾರನಾಗಿದ್ದುದರಿಂದ ಅವನ ಮಗನಾದ ಮಾಯಾ