ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬00 ಶ್ರೀಮದ್ರಾಮಾಯಣವು [ಸರ್ಗ ೪೬, ಬಾರಲಿಲ್ಲ ಇಷ್ಟರಲ್ಲಿ ರಕ್ತಪ್ರವಾಹದಿಂದ ಬಿಲವೆಲ್ಲವೂ ತುಂಬಿಹೋಯಿತು ಅದನ್ನು ನೋಡಿ ನನಗೆ ಆಶ್ಚರ್ಯವುಂಟಾಯಿತು ಆಗ ನಾನು ಅಣ್ಣನೇನಾದ ನೋ' ಎಂಬ ದುಃಖದಿಂದ ವಿಷವನ್ನು ಕುಡಿದವನಂತೆ ತಬ್ಬಿಬ್ಬಾದೆನು ಅಣ್ಣ ನಾದ ವಾಲಿಯು ನಿಶ್ಚಯವಾಗಿ ಹತನಾದನೆಂದೇ ನನ್ನ ಬುಟ್ಟಿಗೆ ತೋರಿತು ಮಹಿಷಾಕಾರನಾದ ಆ ದುಂದುಭಿಯಾದರೂ ಗುಹೆಯಿಂದ ಹೊರಗೆ ಬಾರ ದೆ ಅಲ್ಲಿಯೇ ಸಾಯಲೆಂದು, ನಾನು ಆ ಗುಹೆಯ ಬಾಗಿಲನ್ನು ಬೆಟ್ಟಗಳಂತಿರುವ ದೊಡ್ಡಬಂಡೆಗಳಿಂದ ಮುಚ್ಚಿಬಿಟ್ಟೆನು ಆಮೇಲೆ ನಾನು ಅಣ್ಣನ ಬದುಕಿನಲ್ಲಿ ನಿರಾಶೆಹೊಂದಿ, ಕಿಷಿಂಧೆಗೆ ಬಂದು, ತಾರಯನ್ನೂ ರುಮಯನ್ನೂ ಹೊಂದಿ, ಆ ವಾನರರಾಜ್ಯವನ್ನೂ ಕೈಕೊಂಡೆನು ಆ ಕಿಕ್ಕಿಂಧೆಯಲ್ಲಿ ನನ್ನ ಮಿತ್ರ ರಿಂದ ಸೇವಿತನಾಗಿ ಭಯವಿಲ್ಲದೆ ಸುಖವಾಗಿದ್ದು ಬಿಟ್ಟೆನು ಕಲವು ದಿನಗಳ ಮೇಲೆ ನನ್ನಣ್ಣನಾದ ವಾಲಿಯು ಮಾಯಾವಿಯನ್ನು ಕೊಂದು ಹಿಂತಿರುಗಿ ಬಂದನು ನನಗಾದರೋ ಮಿತಿವಿ ನೀರಿದ ಭಯವೂ ಆಶ್ಚರ್ಯವೂ ಉಂ ಟಾಯಿತು ಆಗಲೇ ನಾನು ಭಕ್ತಿಯಿಂದ ನನ್ನಣ್ಣನಿಗೆ ಆ ವಾನರರಾಜ್ಯ ವನ್ನು ಹಿಂತಿರುಗಿ ಕೊಟ್ಟುಬಿಟ್ಟೆನು ಆ ವಾಯು ದುಷ್ಮಾತ್ಮನಾದುದು ರಿಂದ, ನನ್ನ ಮೇಲೆ ಕೋಪಾವೇಶವನ್ನು ಹೊಂದಿ,ಮನಸ್ಸು ಕಲಗಿ, ನನ್ನನ್ನು ಕೊಲ್ಲಬೇಕೆಂದೇ ಎಣಿಸಿ ತನು ಇದನ್ನು ತಿಳಿದು ನಾನು ನನ್ನ ಮಂತ್ರಿಗಳೊ ಡಗೂಡಿ ಪಲಾಯನಮಾಡಿದೆನು ಆತನೂ ಕೋಪದಿಂದ ನನ್ನನ್ನು ಬೆನ್ನಟ್ಟಿ ಬಂದನು ಆ ವಾಲಿಯ ಭಯದಿಂದ ನಾನು ನನ್ನ ಮಂತ್ರಿಗಳೊಡಗೂಡಿ ಅನೇಕನದಿಗಳನ್ನೂ ಕಾಡುಗಳನ್ನೂ , ಪಟ್ಟಣಗಳನ್ನೂ ಸುತ್ತಿ ಸುತ್ತಿ ಓಡಿ ಹೋಗುತಿದ್ದೆನು ಆ ಸಂದರ್ಭದಲ್ಲಿಯೇ ನಾನು ಈ ಸಮಸ್ತಭೂಮಿಯ ನ್ಯೂ ಒಂದು ಗೋಷ್ಟ್ರದದಂತ (ಗೋವಿನ ಹೆಜ್ಜೆ) ದಾಟಿ, ಕನ್ನಡಿಯಂತೆ ಸಮಸ್ತ ಪ್ರದೇಶಗಳನ್ನೂ ನೋಡುತ್ತ ಸುತ್ತಿ ಬಂದೆನು ಚಕ್ರವಾಳಪರ್ವ ತದಿಂದ ಪರಿವೃತವಾಗಿ, ಅದರೊಳಗಿನ ಗೈರಿಕಾದಿಧಾತುಗಳಿಂದ ಚಿತ್ರಿತ ವಾದ ವರ್ತುಲಾಕಾರವುಳ್ಳ ಈ ಸಮಸ್ತಭೂಮಿಯೂ ಒಂದು ಆಲಾತ ಚಕ್ರ (ಕೂಳ್ಳಿಯಚಕ್ರ) ದಂತೆ ನನಗೆ ಕಾಣಿಸಿತು ಆಮೇಲೆ ನಾನು ವಾ ಲಿಯಿಂದ ಓಡಿಸಲ್ಪಡುತ್ತಾ ಪೂರ್ವದಿಕ್ಕಿಗೆ ಹೋಗಿ, ಅಲ್ಲಿ ಬಗೆಬಗೆಯ ಮರ