ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦೩ ಸರ್ಗ ೪೭.] ಕಿಷಿಂಧಾಕಾಂಡವು ನೆಗೂ ಸೀತೆಯನ್ನು ಕಾಣದೆ ನಿರಾಶರಾಗಿ ಹಿಂತಿರುಗಿ, ಸುಗ್ರೀವನ ಬಳಿಗೆ ಬಂ ದು ಸೇರಿಬಿಟ್ಟರು ತಾವು ಹೋಗಿ ಬಂದವೃತ್ತಾಂತಗಳನ್ನೆಲ್ಲಾ ತನ್ನೊಡೆಯ ನಾದ ಸುಗ್ರೀವನಿಗೂ ಕ್ರಮವಾಗಿ ಒಪ್ಪಿಸಿದರು ಕೊನೆಗೆ ಎಲ್ಲರೂ ಪ್ರಸ್ತ ವಣವಂಬ ಆ ಮಾಲ್ಯವಂತದಲ್ಲಿಯೇ ಒಂದಾಗಿ ಸೇರಿದರು ಮಹಾಬಲಾಡ್ಯ ನಾದ ವಿನತನು ತನ್ನ ಪರಿವಾರಗಳೊಡನೆ ಸುಗ್ರೀವನು ಹೇಳಿದ ಕ್ರಮದಲ್ಲಿ ಯ ಪೂಊದಿಕ್ಕಿನ ಪ್ರದೇಶಗಳೆಲ್ಲವನ್ನೂ ಹುಡುಕಿ ನಿರಾಶನಾಗಿ ಬಂದು ಸೇರಿದನು ವಾನರೋತ್ತಮನಾದ ಶತಬಲಿಯೂ ಉತ್ತರದಿಕ್ಕೆಲ್ಲವನ್ನೂ ಸಂ ಪೂರ್ಣ ವಾಗಿ ಹುಡುಕಿ ಸೀತೆಯನ್ನು ಕಾಣದೆ ತನ್ನ ಸೈನ್ಯಗಳೊಡನೆ ಹಿಂತಿರು ಗಿ ಬಂದುಬಿಟ್ಟನು ಸುಷೇಣನು ತನ್ನ ಪರಿವಾರಗಳೊಡನೆ ಪಶ್ಚಿಮದಿಕ್ಕನ್ನು ಹುಡುಕಿ ನಿರಾಶನಾಗಿ ಬಂದುಬಿಟ್ಟನು ಹೀಗೆ ನಿರಾಶರಾದ ವಾನರರೆಲ್ಲರೂ ಪ್ರಸವಣ ಪಕ್ವತದಲ್ಲಿ ರಾಮನೊಡನೆ ಕುಳಿತಿದ್ದ ಸುಗ್ರೀವನ ಬಳಿಗೆ ಬಂದು ನಮಸ್ಕರಿಸಿ, ಸ್ವಾಮಿ' ನಾವು ಸಮಸ್ತ ಪರತಗಳನ್ನೂ ಹುಡುಕಿದೆವು, ಕಾಡುಗಳನ್ನೂ ಮಹಾರಣ್ಯಗಳನ್ನೂ ಸುತ್ತಿ ನೋಡಿದೆವು ನದಿಗಳನ್ನೂ, ಸ ಮುದ್ರತೀರಗಳನ್ನೂ , ಸಮಸ್ತರಾಷ್ಟ್ರಗಳನ್ನೂ ನೋಡಿ ಬಂದೆವು ನೀವು ಹೇಳಿದ ಗುಹೆಗಳನ್ನೂ ಹುಡುಕಿದೆವು ಗಿಡುಬಳ್ಳಿಗಳಿಂದ ಗುಬುರುಗಟ್ಟಿದಮ ಹಾಗುಗಳನ್ನೂ ನುಗ್ಗಿ ನೋಡಿದೆವು ದುರ್ಗಮಗಳಾದ ದ್ವೀಪಗಳಲ್ಲಿಯೂ ದುಷ್ಟವೇಶಗಳಾದ ವಿಷಮಸ್ಥಳಗಳಲ್ಲಿಯೂ ಹೋಗಿ ನೋಡಿದೆವು ಇದ ಲ್ಲದೆ ನಾವು ಅಲ್ಲಲ್ಲಿ ದೊಡ್ಡ ಪ್ರಮಾಣವುಳ್ಳ ಯಾವಪ್ರಾಣಿಗಳನ್ನು ಕಂಡ ರೂ, ರಾವಣನೋ ಅಲ್ಲವೋ ಎಂಬ ಸಂದೇಹವಿದ್ದರೂ, ಅವುಗಳನ್ನು ಕಂಡಕ್ಷ ಣವೇ ಕೊಂದುಬಿಡುತಿದ್ದೆವು ಏನಾದರೇನು? ನಮಗಂತೂ ಸೀತೆಯು ಸಿಕ್ಕ ಅಲ್ಲ ಸ್ವಾಮಿ ನೀವು ಕಳುಹಿಸಿರುವ ವಾನರರಲ್ಲಿ, ಹನುಮಂತನೊಬ್ಬನು ಮಹಾಬಲಾಢವಾದ ವಾನರವಂಶದಲ್ಲಿ ಹುಟ್ಟಿದವನು ಬಹಳ ಧೈತ್ಯಶಾಲಿ ಯು ಇದರಮೇಲೆ ಅವನು ಹೋಗಿರುವ ಬಕಕೂಡ ರಾವಣನು ಸೀತೆಯ ನೈತಿಕೊಂಡುಹೋದ ದಿಕ್ಕಾಗಿಯೇ ಇರುವುದು ಆದುದರಿಂದ ಒಂದು ವೇಳೆ ಆ ಹನುಮಂತನು ಸೀತೆಯನ್ನು ಕಂಡುಬಂದರೂ ಬರಬಹುದೆಂದು ತೋರುವುದು” ಎಂದರು ಇಲ್ಲಿಗೆ ನಾಲ್ವತ್ತೇಳನೆಯ ಸರ್ಗವು ಅಲ್ಲ ಸ್ವಾಮಿ' ನೀವು ರಾಂಶದಲ್ಲಿ ಹುಟ್ಟಿದವನ್ನು ಸೀತೆಯ