ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦೫ ಸರ್ಗ ೪೮ ] ಕಿಮ್ಮಂಧಾಕಾಂಡವ ಯ ಇಲ್ಲ ಗಡ್ಡೆ ಗೆಣಸಳಾದರೂ ಸಿಕ್ಕುವುದಿಲ್ಲ ಎಮ್ಮೆಗಳಾಗಲಿ, ಜಿಂಕೆಗ ಳಾಗಲಿ, ಆನೆಗಳಾಗಲಿ ಅಲ್ಲಿ ಬದುಕಿರಲಾರವು ಹುಲಿಮೊದಲಾದ ಕ್ರೂರ ಮೃಗಗಳೂ ಅಲ್ಲಿ ವಾಸಮಾಡಲಾರವು ಅಲ್ಲಿ ಪಕ್ಷಿಗಳಾಗಲಿ, ಬೇರೆ ವನಜಂತು ಗಳಾಗಲಿ ಬದುಕು ಅಲ್ಲಿ ಉತ್ತಮವೃಕ್ಷಗಳಾಗಲಿ, ಓಷಧಿಗಳಾಗಲಿ, ಬಳ್ಳಿ ಗಳಾಗಲಿ, ಪೊದೆಗಳಾಗಲಿ ಕಾಣಿಸವು ಅಲ್ಲಿನ ಮಹಾತಟಾಕಗಳುಮಾತ್ರ ನುಣುಪಾದ ಮತ್ತು ವಿಸ್ತಾರವಾದ ತಾವರೆಯೆಲೆಗಳಿಂದಲ, ಅರಳಿದ ನೀರು ಹೂಗಳಿಂದಲೂ, ನೇತ್ರಾನಂದಕರಗಳಾಗಿ ಸುಗಂಧವನ್ನು ಹೊರಡಿ ಸುತ್ತಿರುವುವು ಆದರೆ ಭಮರಗಳುಮಾತ್ರ ಅದರಲ್ಲಿ ಪ್ರವೇಶಿಸಲಾರದೆ ಬಿಟ್ಟು ಹೋಗುವುವು ಅಲ್ಲಿ ಕಂಡುವೆಂಬ ಮಹಾತ್ಮನಾದ ತಪೋನಿಧಿಯೊ ೭ನು ವಾಸಮಾಡುತ್ತಿರುವನು ಆತನು ಬಹಳ ಸತ್ಯಸಂಧರು ಆದರ ಬಹ ಳ ಕೂಪಸ್ವಭಾವವುಳ್ಳವನು, ಅವನು ತನ್ನ ತಪೋನಿಯಮಗಳಿಂದ ಯಾ ರಿಗೂ ಇದಿರಿಸಲಸಾಧ್ಯನಾಗಿರುವನು ಅವನ ಹದಿನಾರುವರ್ಷ ವಯಸ್ಸಿನ ಕುಮಾರನೊಬ್ಬನು ಆ ವನದಲ್ಲಿ ಮೃತಿಹೊಂದಿದನು ಇದಕ್ಕಾಗಿ ಆ ಮಹ ರ್ಷಿಯು ಆ ವನದಮೇಲೆ ಮಹಾಕೋಪವನ್ನು ಹೊಂದಿ, ತನ್ನ ಪುತ್ರನ ಮರಣಕ್ಕೆ ಹೇತುವಾದ ಆ ಮಹಾವನವೆಲ್ಲವೂ ಎಂತವರಿಗೂ ವಾಸಯೋಗ್ಯ ವಾಗದೆ ದುಷ್ಟವೇಶವಾಗಿ, ಅಲ್ಲಿ ಮೃಗಪಕ್ಷಗಳೂ ಬದುಕದಂತೆ ಶಪಿಸಿಬಿ ಟ್ಯನು ಹೀಗಿದ್ದರೂ ಈ ವಾನರರು ಮಾತ್ರ ಬಹಳ ಎಚ್ಚರಿಕೆಯಿಂದ ಅದರ ಸುತ್ತಲಿನ ಪ್ರದೇಶಗಳನ್ನೂ, ಕಾಡುಗಳನ್ನೂ, ಗಿರಿಕಂದರಗಳನ್ನೂ, ನದಿಗ ಳ ಉತ್ಪತ್ತಿ ಸ್ಥಾನಗಳನ್ನೂ ಹುಡುಕಿದರು ಅಲ್ಲಿಯೂ ಜನಕಪುತ್ರಿಯಾದ ಸೀತೆಯು ಸಿಕ್ಕಲಿಲ್ಲ ಆಕೆಯನ್ನು ಕದ್ದ ರಾವಣನ ಸುಳಿವನ್ನಾದರೂ ಕಾ ಣಲಿಲ್ಲ ಹೇಗಾದರೂ ಸುಗ್ರೀವನಿಗೆ ಪ್ರಿಯವನ್ನುಂಟು ಮಾಡಬೇಕೆಂಬ ಆ ತುರವುಳ್ಳ ಆ ವಾನರರೆಲ್ಲರೂ, ಒಳ್ಳಿಗಳಿಂದಲೂ, ಪೊದೆಗಳಿಂದಲೂ, ತುಂ ಬಿದ ಆ ಪ್ರದೇಶದಲ್ಲಿ ಒಳಹೊಕ್ಕು ನೋಡುವಾಗ, ಅಲ್ಲಿ ಚೆನ್ನಾಗಿ ಗುಬುರು ಕಟ್ಟಿದ ಒಂದು ಪೊದೆಯ ಮರೆಯಲ್ಲಿ, ಭಯಂಕರಸ್ವರೂಪವುಳ್ಳ ಕ್ರೂರಕ ರಿಯಾದ ರಾಕ್ಷಸನೊಬ್ಬನು ಕಣ್ಣಿಗೆ ಬಿದ್ದನು ಆ ರಾಕ್ಷಸನಾದರೋ ಯಾ ವದೇವತೆಗಳನ್ನೂ ಲಕ್ಷ್ಯಮಾಡದ ಮಹಾಭೈರವುಳ್ಳವನು ಅವನ ಆಕಾರ