ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪೯ ] ಕಿಷಿಂಧಾಕಾಂಡವು ೧೬೦೭ ತು « ಎಲೈ ವಾನರರೇ' ನಾವು ಇದುವರೆಗೆ ಎಷ್ಟೋ ಕಾಡುಗಳನ್ನೂ, ಬೆಟ್ಟ ಗಳನ್ನೂ, ನದಿಗಳನ್ನೂ, ದುರ್ಗಗಳನ್ನೂ, ಮಹಾರಣ್ಯಗಳನ್ನೂ, ಗುಹೆಗಳ ನ್ಯೂ ಸುತ್ತಿ ಸುತ್ತಿ ಹುಡುಕಿದೆವು.'ಸೀತೆಯನ್ನು ಕಾಣಲಿಲ್ಲ. ದೇವಕನ್ಯಕೆಯಂತಿ ದ ಆ ಸೀತೆಯನ್ನು ಕದ್ದುಯ್ದ ರಾಕ್ಷಸನಾದರೂ ಸಿಕ್ಕಲಿಲ್ಲ ಕಾಲವಾದರೋ ಬಹಳವಾಗಿ ಕಳೆದುಹೋಯಿತು ನಮ್ಮ ರಾಜನಾದ ಸುಗ್ರಿವನೋ ಅತಿ ತೀಕವಾಗಿ ದಂಡಿಸುವನು ಆದುದರಿಂದ ಈಗಲೂ ನಾವು ಉಪೇಕ್ಷೆ ಮಾಡಬಾರದು ತಿರುಗಿ ನಾವೆಲ್ಲರೂ ಸೇರಿ ಅಲ್ಲಲ್ಲಿ ಹುಡುಕಿಬರಬೇಕು ನೀವೆಲ್ಲರೂ ಸೋಮಾರಿತನವನ್ನು ಬಿಟ್ಟು, ಧೈಗೆತಡೆ, ಮುಂದಿನ ಕೆಲಸವ ನ್ನು ನೋಡಬೇಕು ಸಿದ್ರೆಮಾಡುವುದಕ್ಕೆ ಇದು ಸಮಯವಲ್ಲ ಹೇಗಾದ ರೂ ಸೀತೆಯನ್ನು ಕಂಡು ಹಿಡಿಯುವ ಪ್ರಯತ್ನವನ್ನು ಮಾಡಬೇಕು ಕಾ ರವನ್ನು ಮಾಡುತಿದ್ದರ ಅವಶ್ಯವಾಗಿ ಅದಕ್ಕೆ ತಕ್ಕ ಫಲವು ಲಭಿಸದಿರಲಾರ ದು ಉತ್ಸಾಹವೂ, ಸಾಹಸವೂ, ಧೈರವೂ ಈ ಮೂರೂ ಕಾರ್ ಸಿದ್ಧಿಗೆ ಮುಖ್ಯ ಕಾರಣಗಳೆಂದು ಹೇಳುವರಾದುದರಿಂದ, ನಾನು ನಿಮ್ಮನ್ನು ಎಚ್ಚರಿಸುತ್ತಿರುವೆನು ಎಲೈ ವಾನರರ' ಈಗಲೂ ನೀವು ದುರ್ಗಮವಾದ ಅ ರಣ್ಯವನ್ನು ಚೆನ್ನಾಗಿ ಹುಡುಕಿರಿ ನಿಮ್ಮ ಮನಸ್ಸಿನಲ್ಲಿರುವ ಖೇದವನ್ನು ಬಿ ಟ್ಟುಬಿಡಿರಿ' ಮನಸ್ಸಿನಲ್ಲಿ ಕೊರಗುವುದರಿಂದ ಪ್ರಯೋಜನವಿಲ್ಲ ಈಗ ನಿದ್ರೆ ಮಾಡುವುದು ನಮಗೆ ಯುಕ್ತವಲ್ಲ ನಮ್ಮ ರಾಜನಾದ ಸುಗ್ರೀವನೋ, ಬಹ ಳ ಕೋಪಸ್ವಭಾವವುಳ್ಳವನು ತೀವ್ರವಾಗಿ ದಂಡಿಸತಕ್ಕವನು ನಾವು ಯಾ ವಾಗಲೂ ಅವನ ರಾಜಾಜ್ಞೆಗೆ ಭಯಪಟ್ಟಿರಬೇಕಲ್ಲದೆ, ಶ್ರೀರಾಮನೂಕೂಡ ಮಹಾಪ್ರಭಾವವುಳ್ಳವನಾದುದರಿಂದ, ಅವನಿಗೂ ನಾವು ಹೆದರಿ ನಡೆಯಬೇ ಕು ನಿಮ್ಮ ಹಿತವನ್ನು ಕೋರಿಯೇ ನಾನು ಹೀಗೆ ಹೇಳುವೆನು ಇದು ನಿಮ ಗೂ ಸಮ್ಮತವಾಗಿದ್ದರೆ, ಮೊದಲು ಆ ಕೆಲಸವನ್ನು ಮಾಡಿರಿ' ಹಾಗಿಲ್ಲವೇ, ನ ಮ್ಮೆಲ್ಲರಿಗೂ ಹಿತವಾಗುವಂತೆ ನಿಮಗೆ ಕಾಲೋಚಿತವಾದ ಬೇರೆ ಉಪಾಯವೇ ನಾದರೂ ತೂರಿಬಂದರೆ ಅದನ್ನಾದರೂ ಸೂಚಿಸಿರಿ” ಎಂದನು ಅಂಗದನು ಹೇಳಿದ ಈ ಮಾತನ್ನು ಕೇಳಿ ಗಂಧಮಾದನನೆಂಬ ವಾನರವೀರನೊಬ್ಬನು, ದಾಹದಿಂದಲೂ, ಶ್ರಮದಿಂದಲೂ, ಅಸ್ಪಷ್ಟವಾದ ಮಾತಿನಿಂದ ಸಮಸ್ತ