ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦೮ ಶ್ರೀಮದ್ರಾಮಾಯಣವು [ಸರ್ಗ, ೪೯ ವಾನರರನ್ನೂ ನೋಡಿ (ಎಲೈ ವಾನರರೇ ! ಈ ಅಂಗದನು ಹೇಳಿದ ಮಾ ತು ಯುಕ್ತವಾಗಿಯೇ ಇರುವುದು ಅವನು ಹೇಳಿದಂತೆ ನಡೆಸುವುದರಿಂದ ನಮ್ಮಲ್ಲರಿಗೂ ಹಿತವೂ, ಅನಕೂಲ್ಯವೂ ಉಂಟಾಗುವುದರಲ್ಲಿ ಸಂದೇಹವಿಲ್ಲ ಅವನು ಹೇಳಿದಂತೆಯೇ ನೀವು ಇಲ್ಲಿನ ಪ್ರತಗಳಲ್ಲಿಯೂ, ಗುಹೆಗಳಲ್ಲಿ ಯೂ, ಬಿಲಗಳಲ್ಲಿಯೂ, ನಿರ್ಜನವಾದ ಕಾಡಿನಲ್ಲಿಯೂ, ಮತ್ತೊಂದಾವ ರ್ತಿ ಹುಡುಕಿಬನ್ನಿರಿ ' ಗಿರಿನದಿಗಳಲ್ಲಿಯೂ ಚೆನ್ನಾಗಿ ನೋಡಿ ಬನ್ನಿ ರಿ' ಮ ಹಾತ್ಮನಾದ ಸುಗ್ರೀವನು ನಿಯಮಿಸಿರುವಂತೆಯೇ ನೀವೆಲ್ಲರೂ ಇಲ್ಲಿನ ವ ನವನ್ನೂ, ಗಿರಿದುರ್ಗಗಳನ್ನೂ ಬಳಹೊಕ್ಕು ನೋಡಿ ಬನ್ನಿರಿ” ಎಂದನು ಈ ಮಾತನ್ನು ಕೇಳಿದೊಡನೆ ಮಹಾಬಲಾಡ್ಯರಾದ ಆ ವಾನರರಲ್ಲರೂ ಪುನಃಮ ಲಕ್ಕದ್ದು, ಆ ದಕ್ಷಿಣದಿಕ್ಕಿನಲ್ಲಿರುವ ವಿಂಧ್ಯಾರಣ್ಯಗಳನ್ನು ಪುನಃ ಹುಡುಕಲಾ ರಂಭಿಸಿದರು, ಹೀಗೆ ಆ ವಾನರರು ಸೀತಾನ್ವೇಷಣದಲ್ಲಿ ಆತರವುಳ್ಳವರಾಗಿ, ಅಲ್ಲಲ್ಲಿ ಸುತ್ತಿಬರುವಾಗ, ಮುಂದೆ ಶರತ್ಕಾಲದ ಮೇಫುರಂತ ಬಿಳುಪಾಗಿ ಯೂ, ಕಾಂತಿಯುಳ್ಳುದಾಗಿಯೂ, ಉನ್ನತಶಿಖರವಳ್ಳುದಾಗಿಯೂ, ಅನೇ ಕಗುಹೆಗಳಂದ ಕೂಡಿದುದಾಗಿಯೂ, ಇದ ರಜತಮಯವಾದ ಒಂದು ಪ ರೈತಭಾಗವನ್ನೆ 1 ರಿದರು ಅಲ್ಲಿ ಮನೋಹರವಾದ ಕೊದ್ರವನವನ್ನೂ, ಏಳಲ ಬಾಳೆಯ ತೋಟಗಳನ್ನೂ ನೋಡಿ ಅಲ್ಲಿ ಸೀತೆಯನ್ನು ಹುಡುಕುತಿದ್ದರು ಹೀಗ ಸುತ್ತುವುದರಿಂದ ಆ ವಾನರರಲ್ಲರೂ ಬಹಳಬಳಲಿಕೆಯನ್ನು ಹೊಂದಿ ದವರಾಗಿದ್ದರೂ, ಆಗಿನ್ನೂ ಲಕ್ಷಕ್ಕೆ ತಾರದೆ, ಆ ಬೆಟ್ಟದ ತುದಿಗೇರಿ, ಅಲ್ಲಿ ಯೂ ರಾಮನ ಪ್ರಿಯಪತ್ನಿಯಾದ ಸೀತೆಯನ್ನು ಕಾಣದೆ ಹೋದರು ಹೀ ಆ ಪ್ರತಪ್ರಾಂತಗಳೆಲ್ಲವನ್ನೂ ಸುತ್ತಿ, ಸಮಸ್ತ ಗುಹೆಗಳಲ್ಲಿಯೂ, ಹುಡುಕಿನೋಡಿ, ಎಲ್ಲಿಯೂ ಸೀತೆಯು ಸಿಕ್ಕದುದರಿಂದ ನಿರಾಶರಾಗಿ ಕೆಳ ಗಿಳಿದರು ಈ ಸಂಚಾರಶ್ರಮದಿಂದ ಅವರೆಲ್ಲರಿಗೂ ಪ್ರಜ್ಞೆ ತಪ್ಪಿದಂತಾಯಿ ತು ಅಲ್ಲಲ್ಲಿ ವಿಶ್ರಾಂತಿಗಾಗಿ ನಿಂತುನಿಂತು ಕೆಳಗಿಳಿದು ಬರುತ್ತ, ಕೊನೆಗೆ ಒಂದು ಮರದ ಕಳಗೆ ಸೇರಿದರು ಅಲ್ಲಿ ತಮ್ಮ ಬಳಲಿಕೆಯನ್ನು ತೀರಿಸಿಕೊಂ ಡು, ತಿರುಗಿ ಆ ದಕ್ಷಿಣಾಭಿಮುಖವಾಗಿಯೇ ಹೊರಟು ಸೀತೆಯನ್ನು ಹುಡು ಕುತಿದ್ದರು ಹನುಮಂತನೇ ಮೊದಲಾದ ಸಮಸ್ತವಾನರರೂ ಹೀಗೆ 4