ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಶ್ರೀಮದ್ರಾಮಾಯಣವು [ಸರ್ಗ೧. ತೃವಳಾಗಿ, ಎಷ್ಟೋ ಸಂಭ್ರಮದಿಂದ ನನ್ನಲ್ಲಿಗೆ ಓಡಿಬರುತ್ತಿದ್ದಳು ವತ್ಸ ಲಕ್ಷಣಾ! *ಈ ವಸಂತದಲ್ಲಿ ಕಾಡಿನಲ್ಲಿ ಹೂಗೊಂಚಲುಗಳು ಇಷ್ಟು ಸಮೃ. ದೃವಾಗಿದ್ದರೂ, ನನಗೆ ಸ್ವಲ್ಪವೂ ಪ್ರಯೋಜನಕ್ಕೆ ಬಾರದಿರುವುವಲ್ಲಾ'ಈ ಮರಗಳಲ್ಲಿ ಅತ್ಯಂತಕಾಂತಿವಿಶಿಷ್ಟವಾಗಿರುವ ಹೂಗೊಂಚಲುಗಳು ಬೇಕಾ ದಷ್ಟು ತುಂಬಿರುವುವು ಇಷ್ಟಾದರೂ ಇವು ನನ್ನ ಭಾಗಕ್ಕೆ ನಿಷ್ಪಲಗಳಾಗಿರುವು ವು ಇನ್ನು ಸ್ವಲ್ಪ ಕಾಲದೊಳಗಾಗಿ ಇವು ಮರದಲ್ಲಿಯೇ ಕಳಿತು ದುಂಬಿಗಳೊ ಡನೆ ಹಾಗೆಯೇ ನೆಲದಮೇಲೆ ಬೀಳುವುವು ಎಲೆವನೆ' +ಇಲ್ಲಿ ಪಕ್ಷಿಗಳೆಲ್ಲವೂ ಗುಂಪುಕೂಡಿ ಒಂದನ್ನೊಂದು ಕರೆಯುವಂತೆ ಸಂತೋಷದಿಂದ ಇಂಪಾಗಿ ಕೂಗುತ್ತಿರುವುವು ನೋಡು ಈ ಅನರಗಳೆಲ್ಲವೂ ನನಗೆ ಕಾಮವನ್ನು ಹೆಚ್ಚಿಸಿ ನನ್ನನ್ನು ಮರುಳಾಗಿಸುವುದಕ್ಕೆ ಹೊರತು ಬೇರೆಯಲ್ಲ'ಲಕ್ಷಣಾ'ಒಂದುವೇಳೆ ನನ್ನ ಪ್ರಿಯೆಯಾದ ಆ ಸೀತೆಯಿರುವ ಕಡೆಯಲ್ಲಿಯೂ ಈ ದುಷ್ಯವಸಂತವೇ ಪ್ರಾಪ್ತವಾಗಿದ್ದ ಪಕ್ಷದಲ್ಲಿ, ಅವಳ ಗತಿಯೂ ಹೀಗೆಯೇ ಅಲ್ಲವೆ' ಆಗ ಅವಳು ಮೈಮರೆತು ನನಗಿಂತಲೂ ಹೆಚ್ಚಾಗಿ ದುಃಖಪಡುವಳು ಅಥವಾ ಒಂದುವೇಳೆ ಆ ಸೀತೆಯನ್ನೆತ್ತಿಕೊಂಡು ಹೋದ ರಾಕ್ಷಸನು, ಯಾರಿಗೂ ತಿಳಿಯದಿರುವು ದಕ್ಕಾಗಿ, ಯಾವುದೋ ಒಂದುಗುಪ್ತಪ್ರದೇಶದಲ್ಲಿ ಅವಳನ್ನು ಬಚ್ಚಿಟ್ಟಿರಬಕು ದಾದುದರಿಂದ, ಆ ಸ್ಥಳದಲ್ಲಿ ಈ ವಸಂತದ ಕೌರವು ಅಷ್ಟಾಗಿ ಕಾಣಿಸದು. ಇದರಿಂದ ಆಕೆಗೆ ವಸಂತದ ಬಾಧೆಯು ಅಷ್ಟಾಗಿ ತೋರದಿದ್ದರೂ, ಅವಳು ನನ್ನಗಲಿಕೆಯನ್ನು ಸಹಿಸಿಕೊಂಡು ಹೇಗೆ ಬದುಕಿರುವಳೆ ಎಂದು ನನಗೆ ಸಂದೇಹವು ತೋರಿರುವುದು ವತ್ಸಲಕ್ಷಣಾ' ಹೀಗಿಲ್ಲದೆ ಒಂದುವೇಳೆ ಅಲ್ಲಿ ಯೂ ಈ ವಸಂತದ ಪ್ರಾಬಲ್ಯವೇ ಹೆಚ್ಚಿದ್ದ ಪಕ್ಷದಲ್ಲಿ ಅವಳ ಗತಿಯೇನು ?

  • ಇಲ್ಲಿ ಪುಷ್ಪಗಳು ಸಮೃದ್ಧವಾಗಿದ್ದರೂ, ಅದರಿಂದ ತನಗೆ ಪ್ರಯೋಜವಿಲ್ಲ ವೆಂಬುದರಿಂದ, ತನಗೆ ಎಷ್ಟೇ ಜ್ಞಾನಿಗಳು ಲಭಿಸಿದರೂ ಸಂಸಾರಿಗಳ ದುಃಖವನ್ನು ನೋಡುತ್ತಿರುವವರೆಗೂ ತನಗೆ ಅದೊಂದೂ ಹಿತಕರವಲ್ಲವೆಂದು ಭಾವವು.

↑ ಇಲ್ಲಿ ಪಕ್ಷಿಗಳು ಗುಂಪುಗೂಡಿ ತನಗೆ ಮದನೋನ್ಮಾದವುಂಟಾಗುವಂತೆ ಕೂಗುತ್ತಿರುವುವೆಂಬುದರಿಂದ, ಜ್ಞಾನಿಗಳೆಲ್ಲರೂ ಸೇರಿ ತನ್ನನ್ನು ಕೃಪಾಪಾರವಶ್ಯದಿಂ ದ ಮರುಳಾಗುವಂತೆ ಮಾಡಿಬಿಡುವರೆಂದು ಭಾವವು,