ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೧೦ ಶ್ರೀಮದ್ರಾಮಾಯಣವು [ಸರ್ಗ ೫೦ ಅದು ಮಯನೆಂಬ ದಾನವನಿಂದ ರಕ್ಷಿಸಲ್ಪಡುತ್ತಿರುವುದು ಆ ಬಿಲಾ ರಕ್ಕೆ ಬರುವಷ್ಟರಲ್ಲಿ ಆ ವಾನರರೂಕೂಡ ಅಲ್ಲಲ್ಲಿ ಸುತ್ತಿಬಂದ ಬಾಯಾ ರಿಕೆಯಿಂದಲೂ ಹಸಿವಿನಿಂದಲೂ ಬಹಳವಾಗಿ ಬಳಲಿ, ದಾಹಶಾಂತಿ ಗಾಗಿ ಅತ್ಯಾತುರಪಡುತ್ತಿದ್ದರು ಈ ವಾನರರೆಲ್ಲರೂ ಗಿಡುಬಿಳ್ಳಿಗಳಿಂದ ತುಂ ಬಿದ ಆ ಮಹಾಬಿಲವನ್ನು ನೋಡುತ್ತಿರುವಾಗಲೇ, ಆ ಬಿಲದೊಳಗಿನಿಂದ ಕಾಂಚಗಳೂ,ಹಂಸಗಳೂ, ಸಾರಸಪಕ್ಷಿಗಳೂ ಹೊರಕ್ಕೆ ಹೊರಟುಬರು ತಿದ್ದುವು ನೀರಿನಲ್ಲಿ ನೆನೆದು, ಕಮಲಧೂಳಯಿಂದ ಕೆಂಪಾದ ಗರಿಗಳುಳ್ಳ ಚ ಕ್ರವಕಗಳೂ ಹಾರಿಬರುತಿದ್ದುವು ಫಮಘಮಿಸುತ್ತಿರುವ ಕಮಲದ ಸು ವಾಸನೆಯೂ ಆ ಬಿಲದೊಳಗಿನಿಂದ ಹೊರಕ್ಕೆಬರುತಿತ್ತು ಮರಗಳಿಂದ ಮು ಚೈ, ಬೇರೊ ಬ್ಬರಿಗೆ ದುರ್ಗಮವಾಗಿದ್ದರೂ ಆ ಬಿಲದೊಳಗಿನಿಂದ ಹೀಗೆ ಜ ಲಪಕ್ಷಿಗಳೂ, ಸುಗಂಧವೂ ಹೊರಗೆ ಬರುವುದನ್ನು ನೋಡಿ ವಾನರರೆಲ್ಲರೂ ಆಶ್ಚಯ್ಯಭರಿತರಾಗಿ ನಿಂತಿದ್ದರು ಬಲಾಡ್ಯರಾಗಿಯೂ ತೇಜಸ್ವಿಗಳಾಗಿಯೂ ಇರುವ ಆ ವಾನರರು ಅನೇಕಜಂತುಗಳಿಂದ ಕೂಡಿ, ದೈತ್ಯರಾಜನಾದ ಬ ಲಿಗೆ ವಾಸಸ್ಥಳವಾದ ಪಾತಾಳದಂತ, ಕಣ್ಣಿಂದ ನೋಡುವುದಕ್ಕೂ ಸಾಧ್ಯ ವಾಗದಷ್ಟು, ಮಹಾಭಯಂಕರವಾಗಿಯೂ, ದುಷ್ಟವೇಶವಾಗಿಯೂ ಇ ದ ಆ ಮಹಾಬಿಲವನ್ನು ನೋಡುತ್ತ ಸ್ತಬ್ಧರಾಗಿ ನಿಂತು “ಓಹೋ ! ಇದೇನು' ಪಾತಾಳವೋ' ಅಥವಾ,ರಾಕ್ಷಸರ ಮಾಯೆಯೋ ” ಎಂದು ಶಂಕಿ ಸುತ್ತಸಮೀಪಕ್ಕೆ ಬಂದರು ಆಗ ಪರತಶಿಖರದಂತೆ ಆಕಾರವುಳ್ಳ ಹನು ಮಂತನು, ದುರ್ಗಮಾರ್ಗಗಳಲ್ಲಿಯೂ, ಮಹಾರಣ್ಯಗಳಲ್ಲಿಯೂ, ನಿರ್ಭಯ ವಾಗಿ ಸುತ್ತಿ ಬಳಿಕಯುಳ್ಳವನಾದುದರಿಂದ,ಸುತ್ತಲೂ ಇದ್ದ ವಾನರರನ್ನು ಕುರಿತು “ಎಲೈ ಮಿತ್ರರೆ ಅನೇಕ ಸರತಶ್ರೇಣಿಗಳಿಂದ ತುಂಬಿದ ಈ ದ ಕ್ಷಿಣದಿಕ್ಕೆಲ್ಲವನ್ನೂ ಸುತ್ತಿ ಸುತ್ತಿ ಹುಡುಕಿ ನಾವೆಲ್ಲರೂ ಬಹಳವಾಗಿ ಬಳಲಿ ಹೋದವು ಆದರೂ ಸೀತೆಯು ಸಿಕ್ಕಲಿಲ್ಲ ನಮಗಾದರೋ ಸಹಿಸಲಾರದ ಬಾಯಾರಿಕೆಯು ಹುಟ್ಟಿರುವುದು ಇದೋ ಇಲ್ಲಿ ಈ ಗುಹೆಯಿಂದ ಹಂಸ ಗಳೂ, ಕಾಂಡಗಳೂ, ಸಾರಸಗಳೂ, ಚಕ್ರವಾಕಗಳೂ ನೀರಿನಲ್ಲಿ ನೆನೆ ದು ಸಾಲುಸಾಲಾಗಿ ಹೊರಟುಬರುತ್ತಿರುವುವ, ಮತ್ತು ಈ ಗುಹೆಯ ಬಾಗಿಲ ಮರಗಳೂ ಹಚ್ಚೆಗೆ ಚೆನ್ನಾಗಿ ಬೆಳೆದಿರುವುವು ಇದರಿಂದ ಈ ಗುಹೆಯಲ್ಲಿ ಜಲ