ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಶ್ರೀಮದ್ರಾಮಾಯಣವು [ಸರ್ಗ: ೫೧. ಯಾಗಿಯೂ, ಶುದ್ಧವಾಗಿಯೂ ಇರುವ ಈ ಫಲಮೂಲಗಳನ್ನೂ, ಸ್ವರ್ಣ ವಿಮಾನಗಳನ್ನೂ , ಚಿನ್ನದ ಗವಾಕ್ಷಗಳುಳ್ಳ ರತ್ನಖಚಿತಗಳಾದ ಈ ಬೆಳ್ಳಿಯ ಮನೆಗಳನ್ನೂ ನೋಡಿ ನಮಗೆ ಅತ್ಯಾಶ್ಚರೈವು ಹುಟ್ಟಿರುವುದು ಇವೆಲ್ಲವೂ ಯಾರಿಗೆ ಸೇರಿದುವು?ಸುಗಂಧಪುಷ್ಪಗಳಿಂದಲೂ, ಉತ್ತಮಫಲಗಳಿಂದಲೂ, ಕೂಡಿ ಪವಿತ್ರಗಳಾದ ಈ ಸುವರ್ಣವೃಕ್ಷಗಳು ಯಾವನ ಪ್ರಭಾವದಿಂದ ಹುಟ್ಟಿರುವುವು?ಸ್ವಚ್ಛವಾದ ನೀರಿನಲ್ಲಿ ಈ ಚಿನ್ನದ ಕಮಲಗಳು ಹುಟ್ಟಿರುವ ಕಾರಣವೇನು? ಇಲ್ಲಿನ ಮಡುಗಳಲ್ಲಿರುವ ಆಮೆ, ಮೀನು ಮೊದಲಾದ ಜಲ ಚರಪ್ರಾಣಿಗಳ ಕೂಡ, ಸ್ವರ್ಣಮಯಗಳಾಗಿಯೂ ತೋರುತ್ತಿರುವುವು | ಇವೆಲ್ಲವೂ ಉಂಟಾದುದು ಹೇಗೆ? ನಿನ್ನ ತಪೋಮಹಿಮೆಯಿಂದಲೇ ಈ ಅ ದ್ಭುತವಸ್ತುಗಳು ಕಾಣುವುದೇ? ಅಥವಾ ಬೇರೊಬ್ಬರ ಪ್ರಭಾವದಿಂದ ಇ ವು ಹುಟ್ಟಿರುವುವೇ? ನಮ್ಮೊಬ್ಬರಿಗೂ ಈ ವಿಷಯವು ತಿಳಿಯದುದರಿಂದ ನ ಮ್ಯ ಶಂಕೆಯನ್ನು ನೀನೇ ಪರಿಹರಿಸಬೇಕು” ಎಂದು ಧಮ್ಮಚಾರಿಣಿಯಾದ ಆ ತಾಪಸಿಯು ಪ್ರಾಣಿಹಿತದಲ್ಲಿಯೇ ನಿರತಳಾದುದರಿಂದ ಆ ಹನುಮಂತನ ನ್ನು ಕುರಿತು ಎಲೈ' ಮಯನೆಂಬ ಮಹಾತೇಜಸ್ವಿಯಾದ,*ದಾನವೋತ್ತಮ ನೊಬ್ಬನುಂಟು ಅವನು ಬಹಳಮಾಯಾವಿಯು ಅವನಿಂದಲೇ ಈ ಶೃಂಗಾ ರದ ತೋಟವೆಲ್ಲವೂ ನಿರ್ಮಿಸಲ್ಪಟ್ಟಿತು ಪೂತ್ವದಲ್ಲಿ ಆ ಮಯನೇ ಸಮಸ್ಯ ದಾನವರಿಗೂ, ವಿಶ್ವಕಮ್ಮನಾಗಿದ್ದನು ಸುವರ್ಣಮಯವಾದ ಈ ದಿವ್ಯಗೃಹ ವನ್ನು ನಿರ್ಮಿಸಿದ ಆ ಮಯನು ಸಾವಿರವರುಷಗಳವರೆಗೆ ಮಹಾರಣ್ಯದಲ್ಲಿ ತಪಸ್ಸು ಮಾಡಿ, ಬ್ರಹ್ಮನಿಂದ +ಶುಕ್ರಪ್ರಣೀತವಾದ ಶಿಲ್ಪಶಾಸ್ತ್ರವೆಲ್ಲವೂ ತ ನಗೆ ಸ್ವಾಧೀನವಾಗುವಂತೆ ವರವನ್ನು ಪಡೆದನು ಹೀಗೆ ಮಾಯಾಬಲಸಂ

  • ಇಲ್ಲಿ ದಾನವೋತ್ತಮನಾದ ಮಯನೆಂಬುದರಿಂದ ಇವನು ಅಸುರರಕ್ಷಕನಾದ ಮಯನಲ್ಲವೆಂದು ತೋರುವುದು, ಅವನು ತ್ರಿಪುರಗಳಿಗೆ ಅಧಿಪತಿಯೆಂದೂ, ಅ ತ್ರಿಫರ ಗಳು ನಶಿಸಿದಮೇಲೆ ಈ ದಾನವನು ತನ್ನ ರಕ್ಷಣೆಗಾಗಿ ಈ ಬಿಲವನ್ನು ಮಾಡಿಕೊಂಡ ನೆಂದೂ ಮಾತೃಶರಾದಲ್ಲಿ ತ್ರಿಪುರದಹನಘಟ್ಟದಲ್ಲಿ ಹೇಳಲ್ಪಟ್ಟಿದೆ

↑ ಇಲ್ಲಿ “ಜನಗಳು ಮನಸ್ಸಿನಲ್ಲಿ ಕೋರುವ ಧನವೆಲ್ಲವೂ ತನಗೆ ವಶವಾಗು ವಂತೆ” ಎಂದೂ ಆರಾಧಿಂತರವುಂಟು