ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೆರ್ಗೆ, ೧] ಕಮ್ಮಂಧಾಕಾಂಡವು. ೧೩೩೫ ಇದರಮೇಲೆ ಆಕೆಯಸುತ್ತಲೂ ಅನೇಕರಾಕ್ಷಸರು ಸೇರಿ ಹೆದರಿಸುತ್ತಿರುವರು. ಆಯ್ಕೆ' ಲಕ್ಷಣಾ'ಶ್ಯಾಮಾಂಗಿಯಾಗಿ, ಕಮಲದಳದಂತೆ ಕಣ್ಣುಳ್ಳವಳಾ ಗಿ, ಮೃದುಭಾಷಿಣಿಯಾಗಿರುವ ಆ ಸೀತೆಯು ಈ ವಸಂತಋತುವನ್ನು ನೋಡಿ ಹೇಗೆ ತಾನೇ ಬದುಕಿರುವಳು? ಇದನ್ನು ನೋಡಿದರೆ ವ್ಯಥೆಯನ್ನು ತಡೆಯ ಲಾರದೆ ಅವಳು ಪ್ರಾಣವನ್ನು ಬಿಡುವುದೇ ನಿಜವು ಆಕೆಯೋ ಮಹಾಪತಿ ವ್ರತೆ **ನನ್ನ ವಿರಹವನ್ನು ಸಹಿಸಿಕೊಂಡು ಕ್ಷಣಮಾತ್ರವಾದರೂ ಅವ ಳು ಬದುಕಿರಲಾರಳೆಂದೇ ನನ್ನ ಮನಸ್ಸಿಗೆ ತೋರಿರುವುದು # ಆಕೆಯು ನಿಜ ವಾಗಿ ನನ್ನಲ್ಲಿ ಬಹಳ ಅನುರಾಗವುಳ್ಳವಳು ನನಗೂ ಆಕೆಯಲ್ಲಿ ಸಂಪೂರ್ಣ ವಾದ ಅವರಾಗವು ಹುಟ್ಟಿಹೋಗಿರುವುದು ಎಲೆವನೆ' ಪುಷ್ಪದ ಸುವಾಸ ನೆಯನ್ನು ಹೊಂದಿ ಸುಖಸ್ಪರ್ಶವನ್ನು ಂಟುಮಾಡುತ್ತ,+ಶೀತಲವಾಗಿ ಬೀಸು ತಿರುವ ಈ ಮಂದಮಾರುತವೂಕೂಡ, ಆ ಸೀತೆಯ ಸ್ಮರಣೆಯಿಂದ ಕೋ ರಗುತ್ತಿರುವ ನನಗೆ ಕಾಲಾಗ್ನಿ ಯಂತೆ ತೋರುತ್ತಿರುವುದು, ಪೂತ್ವದಲ್ಲಿ ನಾ ನು ಸೀತೆಯೊಡಗೂಡಿರುವಾಗ ಯಾವುದನ್ನು ಪರಮಸುಖವೆಂದೆಣಿಸಿದ್ದೆನೋ ಆ ತಂಗಾಳಿಯೇ ಈಗ ಸೀತೆಯನ್ನಗಲಿದ ಕಾಲದಲ್ಲಿ ನನಗೆ ಪರಮ ದುಃಖವ ನ್ನು ಂಟುಮಾಡುತ್ತಿರುವುದು ಆದರೆ ಪೂತ್ವದಲ್ಲಿ ನಾನು ಸೀತೆಯನ್ನಗಲದಿ ಬ್ಲಾಗ,ಯಾವಕಾಗೆಯು ಅಂತರಿಕ್ಷದಲ್ಲಿ ಕ್ರೂರವಾಗಿ ಕೂಗುತ್ತ,ನನಗೆಮುಂ ಗೆ ಬರಬಹುದಾದ ಸೀತಾವಿಯೋಗವನ್ನು ಸೂಚಿಸುತಿತೋ, ಅದೇ ವಾಯ ಸಪಕ್ಷಿಯು ಈಗ ಮರದಮೇಲೆ ಸಂತೋಷದಿಂದ ಉಬ್ಬಿ ಕೂಗುತ್ತ, ನನಗೆ ಮುಂದೆ ಬರಬಹುದಾದ ಸೀತೆಯ ಪುನಸ್ಸಮಾಗಮವನ್ನೂ ಸೂಚಿಸುವಂತಿದೆ ಈ ಕಾಗೆಯೇ ಆಗ ಸೀತೆಯನ್ನಗಲಿಸಿದಂತಾದರೂ, ಈಗ ಇದೇ ನನ್ನನ್ನು ಆ ವಿ

  • ಸೀತೆಗೂ ತನಗೂ ಪರಸ್ಪರ ಮಹಾನುರಾಗವಿರುವುದಾಗಿ ಹೇಳಿದುದರಿಂದ ತನಗೆ ಜೀವನೊಡನೆ ಸಂಬಂಧವೇ ಸ್ವಭಾವಸಿದ್ದವೆಂದು ಭಾವವು

↑ ಇಲ್ಲಿ ತಂಗಾಳಿಯಕೂಡ ತನಗೆ ಬೆಂಕಿಯಂತಿರುವುದೆಂಬುದರಿಂದ, ತಾನು ಸಂಸಾರಿಗಳಿಗೆ ಯಾವುದೆಂದು ನ್ಯೂನತೆಯೂ ಇಲ್ಲದಂತೆ ಸಮಸ್ತ ಭೋಗಸಾಧನೆಗಳ «ನುಗ್ರಹಿಸಿದ್ದರೂ, ಅಂತಹ ತನ್ನ ದಯೆಯು ತನಗೇ ಅಸಹ್ಯವಾಗಿರುವುದೆಂದು ಭಾವವು.