ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨೦ ಶ್ರೀಮದ್ರಾಮಾಯಣವು [ಸರ್ಗ ೫೩. ಪ್ರಾಪ್ತವಾಯಿತು ನಾವು ರಾಜಾಜ್ಞೆಯನ್ನೂ ಮೀರಿದಂತಾಯಿತು. ಇ ನ್ನು ನಮ್ಮ ಗತಿಯೇನು”ಎಂದು ಹೇಳುತ್ತ ತಮ್ಮ ಉದ್ದೇಶಗಳೆಲ್ಲವೂ ಕೆಟ್ಟು ಹೋದುದಕ್ಕಾಗಿ ಭಯಪಟ್ಟು, ಹಾಗೆಯೇ ಆ ಭಯದಿಂದ ಪ್ರಜ್ಞೆ ತಪ್ಪಿ ನೆ ಲದಮೇಲೆ ಬಿದ್ದರು ಆಗ ಸಿಹ್ಮದಂತೆಯೂ, ವೃಷಭದಂತೆಯೂ, ಉಬ್ಬಿದ ಹೆಗಲುಳ್ಳವನಾಗಿಯೂ, ಉದ್ದವಾಗಿ ದುಂಡಾಗಿರುವ ಭುಜಗಳುಳ್ಳವನಾಗಿ ಯೂ, ಮಹಾಪ್ರಾಜ್ಞನಾಗಿಯೂ ಇದ್ದ ಯುವರಾಜನಾದ ಅಂಗದನು, ಆ ↑ ವಯೋವೃದ್ಧರಾಗಿಯೂ, ತಿಪ್ಪರಾಗಿಯೂ ಇರುವ ಕೆಲವುವಾನರಪ್ರಮು ಖರನ್ನು ನೋಡಿ, ಮೃದುವಾಕ್ಯಗಳಿಂದ ಅವರನ್ನು ಮನ್ನಿಸಿ ಸಮಾಧಾನಪಡಿ ಸುತ್ತ ಒಂದಾನೊಂದುಮಾತನ್ನು ಹೇಳುವನು (ಎಲೈ ವಾನರರೇ' ಕಪಿ ರಾಜನಾದ ಸುಗ್ರೀವನ ಆಜ್ಞೆಯಿಂದಲೇ ನಾವೆಲ್ಲರೂಹೊಗಟುಬಂದೆವತಿ ನಾವು ಬಿಲದಲ್ಲಿದ್ದಾಗಲೇ ಅವನು ಹೇಳಿದ್ದ ಕಾಲದ ಗಡುವು ತೀರಿಹೋಯಿ ತು ಇದು ನಿಮಗೆ ತಿಳಿಯದುದಲ್ಲ. ನಾವು * ಆಶ್ವಯುಜಮಾಸವುಮೊದಲು ಗೊಂಡು ಕಾಲನಿರ್ಣಯದಿಂದ ಆಯಾಕಾಕ್ಯಗಳಿಗೆ ನಿಯಮಿಸಲ್ಪಟ್ಟಿರುವೆ ವು ಸುಗ್ರೀವನು ತನ್ನ ಬಾಯಿಯಿಂದಲೇ ನಮಗೆ ಪ್ರತ್ಯಕ್ಷವಾಗಿ ನಿರ್ಣಯಿ ಸಿ ಹೇಳಿದ ಕಾಲವೂ ಕಳೆದುಹೋಯಿತು ಇನ್ನು ಮುಂದೆ ಹಲವು ಮಾ

  • ಮೊದಲು ಹನುಮಂತನ ಪ್ರೇರಣೆಯಿಂದ ಸುಗ್ರೀವನು ಆಶ್ವಯುಜಮಾಸ ದಲ್ಲಿ ಹದಿನೈದುದಿನಗಳ ಅವಧಿಯನ್ನು ಕೊಟ್ಟು ವಾನರಸೇನೆಯನ್ನು ಕರೆತರುವುದಕ್ಕಾ ಗಿ ನಿಯಮಿಸಿದನು ಆಮೇಲೆ ಲಕ್ಷಣನು ಕುಪಿತನಾಗಿ ಬಂದುದನ್ನು ನೋಡಿ ಶನ ಮಾರ್ಗಶೀರ್ಷದಲ್ಲಿ ಹತ್ತು ದಿನಗಳ ಗಡುವನ್ನು ಕೊಟ್ಟು ಸೈನಿಕರನ್ನು ಕರೆಸಿದನು ಪ ಪ್ರಮಾಸವೆಲ್ಲವೂ ಸೀತಾನ್ವೇಷಣಕ್ಕಾಗಿ ನಿರ್ಣಯಿಸಿದ ಕಾಲವಾಯಿತು.ಹೀಗೆ ಅಶ್ವಯು ಜಮಾಸವು ಮೊದಲಾಗಿ ಕಾಲಸಂಖ್ಯೆಯು ಬೇರೆಬೇರೆಯಾಗಿ ನಿರ್ಣಯಿಸಲ್ಪಟ್ಟಿದ್ದು ದರಿಂ ಡ ಅದು ತಮಗೆ ಮರೆತುಹೋಗುವುದಕ್ಕೆ ಅವಕಾಶವಿಲ್ಲವೆಂದು ಭಾವವು ಇಲ್ಲಿ ಮತ್ತೆ ಕೆಲ ವರು ' ಶ್ವಯುಜೀಮಾಸಿ” ಎಂಬುದರಲ್ಲಿ ಸಾಮೂಹ್ಯಸೂಚಕವಾದ ಅಧಿಕರಣ ಸಪ್ತಮಿ ಯನ್ನು ಗ್ರಹಿಸಿ, ಇದನ್ನು ಕರೀಕನಕಪರನೆಂದೇ ಅರಮಾಡುವರು, ಹಾಗೆಯೇಮ ರ್ಗಶೀರ್ಷವನ್ನು ಸೀತಾನ್ವೇಷಣಕಾಲದ ಗಡುವನ್ನಾಗಿಯೂ ಗ್ರಹಿಸಿ, ಈಗ ಶಹನ ಕಳೆದು ಫಾಲ್ಕುನವು ಬಂದುದಾಗಿಯೂ ಭಾರಿಸುವದು.