ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨೨ ಶ್ರೀಮದ್ರಾಮಾಯಕನು [ಸರ್ಗ ೫೩ ಯನ್ನು ಮಾಡಿ, ಹಿಂಸಿಸಿ ನಮ್ಮೆಲ್ಲರನ್ನೂ ಕೊಲ್ಲದೆ ಬಿಡನು ಅದಕ್ಕಿಂತಲೂ ನಾವು ಇಲ್ಲಿಯೇ ಪ್ರಾಯೋಪವೇಶದಿಂದ ಮರಣವನ್ನು ಹೊಂದುವುದೇ ಉತ್ತಮವು ಎಲೈ ವಾನರರೇ | ಸುಗ್ರೀವನು ನನ್ನಲ್ಲಿ ವಿಶೇಷಪ್ರೀತಿಯಿಂದ ನನಗೆಯವರಾಜ್ಯವನ್ನು ಕೊಟ್ಟಿರುವಾಗ, ಈಗ ತನ್ನ ಕೈಯಿಂದಲೇ ನನ್ನ ನ್ನು ಕೊಲ್ಲಲಾರನೆಂದೆಣಿಸಬೇಡಿರಿ ' ನನಗೆ ಯವರಾಜ್ಯವನ್ನು ಕೊಟ್ಟವ ನು ಸುಗ್ರೀವನಲ್ಲ ಸಮಸ್ತಭೂತಗಳಿಗೂ ಹಿತವನ್ನು ಕೋರತಕ್ಕೆ ಮಹಾ ತ್ಮನಾದ ಶ್ರೀರಾಮನೇ ನನಗೆ ಆ ಯವರಾಜ್ಯವನ್ನು ಕೊಡಿಸಿದನೇ ಹೊರತುಬೇರೆಯಲ್ಲ ಇದರಮೇಲೆ ನಾನು ವಾಲಿಯ ಮಗನಾದುದರಿಂದ ಸುಗ್ರೀವನು ಮೊದಲಿಂದಲೇ ನನ್ನಲ್ಲಿ ದಾಯಾದದ್ವೇಷವನ್ನಿಟ್ಟಿರುವನು ಈಗ ಇದೂ ಒಂದು ನೆಪವು ಸಿಕ್ಕಿರುವಾಗ ಸುಮ್ಮನೆ ಬಿಡುವನೆ? ಕೂರ ದಂಡನೆಯನ್ನು ವಿಧಿಸಿ ಮೊದಲು ನನ್ನನ್ನೇ ಕೊಂದುಬಿಡುವನು, ನಾನುಇಲ್ಲಿಂ ದ ಕಿಕ್ಕಿಂಧೆಗೆ ಹೋಗಿ ಅಲ್ಲಿ ಸುಗ್ರೀವನ ಕೈಯಿಂದ ಸತ್ತರ, ಅಲ್ಲಿರತಕ್ಕ ನನ್ನ ಸ್ನೇಹಿತರೆಲ್ಲರೂ ಸಹಿಸಲಾರದ ಸಂಕಟದಿಂದ ದುಃಖಿಸುವರು ಹಾಗೆ ಮಾ ಡುವುದರಿಂದ ನನಗೆ ಬಂದಪ್ರಯೋಜನವೇನು? ಇದು ಸಮುದ್ರತೀರವಾ ಗಿ ಪುಣ್ಯಸ್ಥಳವಾಗಿರುವುದು ಇಲ್ಲಿಯೇ ಪ್ರಾಯೋಪವೇಶವನ್ನು ಮಾಡಿ ಪ್ರಾಣವನ್ನು ಬಿಡುವೆನು ” ಎಂದನು ಇದನ್ನು ಕೇಳಿ ಆ ವಾನರರಲ್ಲರೂ ದೈ ನ್ಯದಿಂದ ಆ ಅಂಗದನ ಮಾತಿಗನುಮೋದಿಸುತ್ತ « ಹೌದು | ಸುಗ್ರೀವ ನೇನೋ ಸಹಜವಾಗಿಯೇ ಕೂರನು ರಾಮನೂ ಸೀತೆಯನ್ನು ಕಾಣಬೇ ಕೆಂಬ ಆತುರದಿಂದಿರುವನು ನಾವು ಸುಗ್ರೀವನು ನಿಯಮಿಸಿದ್ದ ಕಾಲವನ್ನೂ ಮೀರಿದೆವಲ್ಲದೆ, ಸೀತೆಯನ್ನೂ ಕಂಡುಹಿಡಿಯದೆ ಹಿಂತಿರುಗಿ ಬಂದುದನ್ನು ಕಂಡರೆ, ಅವನು ರಾಮನ ಪ್ರೀತಿಗಾಗಿಯಾದರೂ ನಮ್ಮನ್ನು ಕೊಲ್ಲದೆ ಬಿಡ ನು. ಇದರಲ್ಲಿ ಸಂದೇಹವೇ ಇಲ್ಲ ಇದರಮೇಲೆ ತಪ್ಪು ಮಾಡಿದವರು ಪ್ರ ಭುವಿನ ಕಣ್ಣಿಗೆ ಬಿಳಲೇಬಾರದು, ನಾವು ಸೀತೆಯನ್ನು ಹುಡುಕಿ ಅವಳ ವೃ ತಾಂತವನ್ನು ತಿಳಿದುಕೊಂಡಮೇಲೆಯೇ ಸುಗ್ರೀವರಾಜನ ಮುಂದೆ ನಿಲ್ಲದೆ ಕು ಹಾಗಿಲ್ಲವೇ ಇಲ್ಲಿಯೇ ಪ್ರಾಣವನ್ನು ಬಿಟ್ಟು ಯಮರಾಜನ ಮುಂದೆನಿಲ್ಲಬೇ ಕು” ಎಂದರು ಹೀಗೆ ಭಯಾರ್ತರಾದ ವಾನರರು ಹೇಳಿದ ಮಾತನ್ನು