ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨೩ ಸರ್ಗ ೫೪ ] ಕಿಂಧಾಕಾಂಡವು. ಕೇಳಿ ತಾರನೆಂಬ ಕಪಿಯೂಧಪನು ಅವರನ್ನು ನೋಡಿ ಎಲೈ ಕಪಿ ವೀರರೆ ? ಹೀಗೇಕೆ ದುಃಖಿಸಿ ಭಯಪಡುವಿರಿ ? ನನಗೆ ಬೇರೊಂದುಪಾಯವು ತೋರುವುದು ನಿಮಗೆ ಸಮ್ಮತವಾಗಿದ್ದರೆ ನಾವೆಲ್ಲರೂ ಈ ಬಿಲದ ಕ್ಲಿ ಪ್ರವೇಶಿಸಿ ಅಲ್ಲಿಯೇ ಇದ್ದು ಬಿಡುವೆವು ಇದು ಮಾಯಾನಿಶ್ಮಿತವಾದು ದರಿಂದ ಬೇರೊಬ್ಬರಿಗೆ ಪ್ರವೇಶಿಸಲು ಸಾಧ್ಯವಲ್ಲ ಮತ್ತು ಇಲ್ಲಿ ಫಲಮೂ ಲಾದಿಗಳೂ, ಪಾನದ್ರವ್ಯಗಳೂ, ಇತರ ಭೋಜ್ಯವಸ್ತುಗಳೂ ಸಮೃದ್ಧವಾ ಗಿರುವುವು ಇಲ್ಲಿ ನಾವು ಸುಖವಾಗಿ ಬದುಕಿಯೇ ಇರಬಹುದಲ್ಲವೆ? ಇಲ್ಲಿ ನಮಗೆ ರಾಮನಿಂದಾಗಲಿ, ಸುಗ್ರೀವನಿಂದಾಗಲಿ, ಕೊನೆಗೆ ದೇವೆಂದ್ರನಿಂ ದಾದರೂ ಎಷ್ಟು ಮಾತ್ರವೂ ಭಯವಿಲ್ಲ ” ಎಂದನು ಹೀಗೆ ತಾರನು ಅಂ ಗದನ ಮತಕ್ಕೂ ಅನುಕೂಲವಾಗುವಂತೆ ಹೇಳಿದುದನ್ನು ಕೇಳಿ ವಾನರರಲ್ಲ ರೂ ಸಂತುಷ್ಟರಾಗಿ ಹೇಗೆ ಮಾಡಿದರೆ ನಮಗೆ ಹಿಂಸೆಯು ತಪ್ಪುವುದೋ ಹಾಗೆ ಶೀಘ್ರದಲ್ಲಿಯೇ ನಡೆಸಿದರೆ ಸಾಕು!” ಎಂದರು ಇಲ್ಲಿಗೆ ಐವತ್ತು ಮೂರನೆಯ ಸರ್ಗವು ( ಹನುಮಂತನು ಅಂಗದನಮತವನ್ನು ಖಂಡಿಸಿ,ಸುಗ್ರಿ 1 ವನಬಳಿಗೆ ಹೋಗುವದೇ ಯುಕ್ತ ವೆಂದು ಹೇಳಿದುದು ಚಂದ್ರನಂತೆ ಕಾಂತಿವಿಶಿಷ್ಟನಾದ ತಾರನು ಈ ಮಾತನ್ನು ಹೇಳಲು, ಇತರವಾನರರೂ ಅದಕ್ಕೊಪ್ಪಿದುದನ್ನು ಕಂಡೊಡನೆ, ಹನುಮಂತನು ತನ್ನ ಮನಸ್ಸಿನಲ್ಲಿ : ಓಹೊ | ಸುಗ್ರಿವನ ವಾನರರಾಜ್ಯವೆಲ್ಲವೂ ಈಗಲೇ ಅಂಗದನ ವಶವಾದಂತಿದೆ ” ಎಂದು ಯೋಚಿಸಿ ಚಿಂತಾಕುಲಿತನಾಗಿ ದ್ವನು ವಾಲಿಕುಮಾರನಾದ ಆ ಅಂಗದನಲ್ಲಿ * ಗ್ರಹಣಧಾರಣಾದಿಗಳಾದ

  • 'ಗ್ರಹಣೆ೦ಧಾರಣೆಂಟೈವಸ್ಕರಣಂಪ್ರತಿಪಾದನೆಂ।ಊಹೋSಪೋಹೋ ವಿಜ್ಞಾನಂ ತತ್ವಜ್ಞಾನಂಚಧೀಗುಣಾ।”ಗ್ರಹಿಸುವುದು, ಮನಸ್ಸಿನಲ್ಲಿಡುವುದು, ಸಮಯ ಬಂದಾಗ ಸ್ಮರಣೆಗೆ ತಂದುಕೊಳ್ಳುವುದು, ಬೋಧಿಸುವುದು, ಹೊಸವಿಷಯಗಳನ್ನೂ ಹಿ ಸಿ ತಿಳಿಯುವುದು,ಮೇಲೆಮೇಲೆ ವಿಮರ್ಶಿಸಿ ತಿಳಿಯುವುದು ಇವೆಂಟಬುದ್ದಿಯಗುಳಗಳು,

ಬಾಹುಬಲ, ಮನೋಬಲ, ಉಪಾಯಬಲ, ಜನಬಲವಂಬಿವು ಬಲಗಳು,