ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಶ್ರೀಮದ್ರಾಮಾಯಣವು [ಸರ್ಗ * ಅಹ್ಮಗುಣಗಳುಳ್ಳ ಬುದ್ದಿಯೂ, ನಾಲ್ಕು ವಿಧಗಳಾದ ಬಾಹುಬಲಾದಿಗಳೂ, * ದೇಶಕಾಲಜ್ಞಾನವೇ ಮೊದಲಾದ ಚತುರ್ದಶಗುಣಗಳೂ, ಪೂರ್ಣವಾಗಿ ತುಂಬಿರುವುವೆಂದೂ ಅವನಿಗೆ ತೋರಿತು, ಚಂದ್ರನು ಶುಕ್ಲ ಪಕ್ಷದಲ್ಲಿ ದಿನದಿನ ಕ್ಕೂ ಕಾಂತಿಸಂಪತ್ತಿನಿಂದ ಮೇಲೆಮೇಲೆ ಹೆಚ್ಚು ವಂತೆ, ಆ ಅಂಗದನೂ ಎಡೆ ಬಿಡದೆ ತನ್ನ ತೇಜೋಬಲಪರಾಕ್ರಮಗಳನ್ನು ಹೆಚ್ಚಿಸಿಕೊಳ್ಳುತ್ತ ಬುದ್ಧಿ ಯಲ್ಲಿ ಬೃಹಸ್ಪತಿಗೂ, ಪರಾಕ್ರಮದಲ್ಲಿ ತನ್ನ ತಂದೆಯಾದ ವಾಲಿಗೂ ಎಣೆ ಯಾಗಿ ಶುಕ್ರಾಚಾಯ್ಯನ ಭೇದೋಪಾಯಕ್ಕೆ ಆದರದಿಂದ ಗಿವಿಗೊಟ್ಟು ಕೇಳು ವ ದೇವೇಂದ್ರನಂತೆ ತಾರನೆಂಬ ಮಂತ್ರಿಯ ಮಾತನ್ನು ಗಮನಿಸಿ ಕೇಳುವು ದನ್ನೂ ಕಂಡನುಸ್ವಾಮಿಯಾದ ಸುಗ್ರೀವನಕಾಲ್ಯದಲ್ಲಿಯೇ ಬಳಲಿ ಕುಳಿತಿದ್ದ ಸತ್ವಶಾಸ್ತ್ರ ವಿಶಾರದನಾದ ಅಂಗದನು, ಈಗ ಆ ಸುಗ್ರೀವನಲ್ಲಿಯೇ ವೈರು ದ್ಧಿಯನ್ನಾ ರೂಪಿಸಿ, ಜಿಹಾಸೆಯಿಂದ ಹೇಳಿದ ಮಾತನ್ನೂ ಕೇಳಿದನು ಹನು ಮಂತನು ಆ ಅಂಗದನ ಭೇದಬುದ್ಧಿಯನ್ನು ತಪ್ಪಿಸಿ, ಸುಗ್ರೀವನಿಗನುಕೂಲ ನನ್ನಾಗಿಯೇ ಮಾಡುವುದಕ್ಕಾಗಿ ಕೆಲವು ನೀತಿಗಳನ್ನು ಹೇಳಲಾರಂಭಿಸಿದನು ಸಾಮವೇ ಮೊದಲಾದ ಚತುರುಪಾಯಗಳಲ್ಲಿ ಮೂರನೆಯದಾದ ಭೇದೋ ಪಾಯವನ್ನೇ ಅವಲಂಬಿಸಿ, ಅಲ್ಲಿದ್ದ ಸಮಸ್ತವಾನರರನ್ನೂ ತನ್ನ ಮಾತಿನ ಚಾತುರದಿಂದ ಮೊದಲು ಅಂಗದನಿಂದ ಬೇರಡಿಸಿ, ಅವರು ಅವನ ಮತ ಕೊಪ್ಪದಂತೆ ಮಾಡಿಕೊಂಡನು ಹೀಗೆ ವಾನರರು ಅಂಗದನಿಂದ ಭೇದ ಹೊಂದಿದಮೇಲೆ, ತನ್ನೊಳಗೆ ತಾನು ಸುಳ್ಳು ಕೋಪವನ್ನು ಹುಟ್ಟಿಸಿಕೊಂ ಡು, ಆ ಕೂಪರೂಪವಾದ ದಂಡೋಪಾಯವನ್ನ ವಲಂಬಿಸಿ, ಅದಕ್ಕನು ಗುಣಗಳಾದ ಕೆಲವುವಾಕ್ಯಗಳಿಂದ ಅಂಗದನಿಗೂ ಭಯವನ್ನು ಹುಟ್ಟಿಸಬೇ ಕೆಂದೆಣಿಸಿ, ಅಂಗದಾ' ನೀನೇನೋ ಯುದ್ಧದಲ್ಲಿ ನಿನ್ನ ತಂದೆಗಿಂತಲೂ ಬ

  • 'ದೇಶಕಾಲಜ್ಞತಾದಾಧ್ಯಂ ಸರಕೇಶಸಹಿಷ್ಣುತಾ।ಸರವಿಜ್ಞಾನಿತಾದಾಕ್ಷ ಮೂರಕ್ಷರವೃತಮಂತ್ರತಾ! ಅವಿಸಂವಾದಿತಾಶ್‌ರಂ ಶಕ್ತಿಜ್ಝತ್ಯಂಕೃತಜ್ಞತಾ | ಶರ ಣಾಗತವಾತ್ಸಲ್ಯ ಮಮರ್ಷವಚಾಪಲoll” ದೇಶಕಾಲಜ್ಞಾನ, ದೃಢಬುದ್ದಿ, ಕಷ್ಟಸ ಹಿಷ್ಣುತೆ, ಸರೈಜ್ಞತೆ, ಸಾಮಠ, ರಹಸ್ಯವನ್ನು ಕಾಪಾಡಿಡುವುದು, ಸುಳ್ಳಾಡದಿರು ವುದು, ಶೌಯ್ಯ, ಇತರರ ಶಕ್ತಿಯನ್ನು ತಿಳಿಯುವುದು, ಕೃತಜ್ಞತೆ,ಶರಣಾಗತ ವಾತ್ಸಲ್ಯ, ತಾಳ್ಮೆ, ಚಾಪಲ್ಯವಿಲ್ಲದಿರುವುದು, ಇನ್ನೂ ಚತುರ್ದಶಗುಣಗಳು